ಐಸಿಸಿ ಶ್ರೇಯಾಂಕ : ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

Posted By:
Virat Kohli sets new record in ICC rankings

ಬೆಂಗಳೂರು, ಫೆಬ್ರವರಿ 20: ಟೀಂ ಇಂಡಿಯಾದ ನಾಯಕ ವಿರಾಟ್‌‌ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ಏಕದಿನ ಪಂದ್ಯಗಳ ಬ್ಯಾಟಿಂಗ್‌‌ ಶ್ರೇಯಾಂಕ ಪಟ್ಟಿಯಲ್ಲಿ ನಂ. 1ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್‌‌ ಕೊಹ್ಲಿ ಮೂರು ಶತಕ ಸಿಡಿಸಿ, ಶ್ರೇಯಾಂಕದಲ್ಲಿ ನಂ. 1ಸ್ಥಾನಕ್ಕೇರಿದರು.

ಏಕಕಾಲಕ್ಕೆ ಟೆಸ್ಟ್, ಏಕದಿನ ಹಾಗೂ ಟಿ20ಐ ಮೂರು ಮಾದರಿಯಲ್ಲೂ ಟಾಪ್ 3ರೊಳಗೆ ಸ್ಥಾನ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಜತೆಗೆ ಏಕದಿನದಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ರೇಟಿಂಗ್ (909 ಅಂಕಗಳು) ಹೊಂದಿದ್ದು, ಕಳೆದ 27 ವರ್ಷಗಳಲ್ಲಿ ಯಾರೂ ಇಷ್ಟು ಅಂಕಗಳನ್ನು ಕಲೆ ಹಾಕಿಲ್ಲ. ಇದರ ಜತೆಗೆ ಟೆಸ್ಟ್‌‌ ಶ್ರೇಯಾಂಕದಲ್ಲೂ ವಿರಾಟ್‌‌ ಕೊಹ್ಲಿ 900 ಪಾಯಿಂಟ್‌ ಗಳಿಕೆ ಮಾಡಿದ್ದಾರೆ.

ಎಬಿ ಡಿವಿಲಿಯರ್ಸ್‌‌ ನಂತರ 900 ಪಾಯಿಂಟ್‌ ಗಳಿಕೆ ಮಾಡಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ. 1991ರಲ್ಲಿ ಡೀನ್ ಜೋನ್ಸ್ ಹೊಂದಿದ್ದ ಗರಿಷ್ಠ ಅಂಕಗಳ(900 ಪ್ಲಸ್) ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರರೆಂದರೆ ಕೊಹ್ಲಿ.

ಟೆಸ್ಟ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (947) ನಂತರ 912 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಟಿ20ಐಯಲ್ಲಿ ಬಾಬರ್ ಅಜಮ್ (786), ಅರೋನ್ ಫಿಂಚ್ (784) ನಂತರ 776 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

900 ಪ್ಲಸ್ ಅಂಕಗಳಿಸಿದ್ದವರು
* 1985ರಲ್ಲಿ ವಿವಿಯನ್ ರಿಚರ್ಡ್ಸ್ -935 ಅಂಕಗಳು
* 1983ರಲ್ಲಿ ಜಹೀರ್ ಅಬ್ಬಾಸ್ -931
* 1981ರಲ್ಲಿ ಗ್ರೆಗ್ ಚಾಪೆಲ್ -921
* 1983ರಲ್ಲಿ ಡೇವಿಡ್ ಗ್ರೋವರ್ -919
* 1987ರಲ್ಲಿ ಜಾವೇದ್ ಮಿಯಾಂದಾದ್- 910

Story first published: Tuesday, February 20, 2018, 17:08 [IST]
Other articles published on Feb 20, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ