ತವರಿನಲ್ಲಿ ಆಸ್ಟ್ರೇಲಿಯಾ ತಂಡ ದುರ್ಬಲವೆಂದು ನಾನು ಭಾವಿಸುವುದಿಲ್ಲ: ಕೊಹ್ಲಿ

IND VS AUS TEST SQUAD 2018 : ತವರಿನಲ್ಲಿ ಆಸ್ಟ್ರೇಲಿಯಾ ತಂಡ ದುರ್ಬಲವೆಂದು ನಾನು ಭಾವಿಸುವುದಿಲ್ಲ: ಕೊಹ್ಲಿ..!

ಅಡಿಲೇಡ್, ಡಿಸೆಂಬರ್ 5: ಚೆಂಡು ವಿರೂಪ ಪ್ರಕರಣದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ದುರ್ಬಲ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ತವರಿನಲ್ಲಿ ಆಸೀಸ್ ತಂಡ ದುರ್ಬಲವೆಂದು ನಾನು ಭಾವಿಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಮೊದಲ ಟೆಸ್ಟ್‌ಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಕಟ

ಗುರುವಾರ (ಡಿಸೆಂಬರ್ 6) ಭಾರತ-ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ತಂಡದ ಬಲವಾಗಿ ನಿಲ್ಲುತ್ತಿದ್ದ ಆಸ್ಟ್ರೇಲಿಯಾ ದಾಂಡಿಗರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮೇಲಿನ ನಿಷೇಧ ಮುಂದುವರೆದಿರುವುದರಿಂದ ತಂಡಕ್ಕೆ ಅವರ ಬೆಂಬಲವಿಲ್ಲವಾಗಿದೆ.

ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ವಿಶ್ವಕಪ್ ಹೀರೋ ಗೌತಮ್ ಗಂಭೀರ್

ಕ್ರಿಕೆಟ್ ಪರಿಣಿತರು ಹೇಳುವಂತೆ, ಆಸೀಸ್ ತಂಡ ಇಬ್ಬರು ಆಟಗಾರರ ಬೆಂಬಲ ಕಳೆದುಕೊಂಡಿರುವುದು ಸರಣಿ ಗೆಲ್ಲಲು ಭಾರತಕ್ಕೆ ಉತ್ತಮ ಅವಕಾಶವನ್ನೂ ಒದಗಿಸಿದೆ. ಆದರೆ ನಾಯಕನಾಗಿ ಕೊಹ್ಲಿ, 'ಎದುರಾಳಿಯನ್ನು ಹಗುರವಾಗಿ ಪರಿಗಣಿಸಿಲ್ಲ' ಎಂದಿರುವುದು ಅರ್ಥಪೂರ್ಣವಾಗಿಯೂ ಇದೆ.

ಹಗುರವಾಗಿ ಪರಿಗಣಿಸುವಂತಿಲ್ಲ

ಹಗುರವಾಗಿ ಪರಿಗಣಿಸುವಂತಿಲ್ಲ

ಮಂಗಳವಾರವಷ್ಟೇ (ಡಿಸೆಂಬರ್ 4) ಅಭ್ಯಾಸದ ವೇಳೆ ನೆಟ್‌ನಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದಿದ್ದ ಭಾರತ ತಂಡದ ಮುಂಚೂಣಿ ಆಟಗಾರ ಕೊಹ್ಲಿ, ಆಸೀಸ್ ತಂಡದ ಬಗ್ಗೆ ಪ್ರತಿಕ್ರಿಯಿಸಿ, ತವರಿನಲ್ಲಿ ಪಂದ್ಯವಿದ್ದಾಗ ಆಸ್ಟ್ರೇಲಿಯಾವನ್ನು ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ ಎಂದಿದ್ದಾರೆ.

ಈಗಲೂ ಪಾರಮ್ಯ ಮೆರೆಯಬಲ್ಲರು

ಈಗಲೂ ಪಾರಮ್ಯ ಮೆರೆಯಬಲ್ಲರು

ಪಂದ್ಯಕ್ಕೂ ಮುನ್ನಾ ದಿನ (ಡಿಸೆಂಬರ್ 5) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, 'ಆಸೀಸ್ ದುರ್ಬಲ ತಂಡವೆಂದು ನಾನು ಭಾವಿಸುವುದಿಲ್ಲ. ತವರಿನಲ್ಲಿ ಪಾರಮ್ಯ ಮೆರೆಯಲು ಬೇಕಾದ ಕೌಶಲಗಳು ಅವರಲ್ಲಿ ಈಗಲೂ ಇದೆ' ಎಂದು ಅಭಿಪ್ರಾಯಿಸಿದರು.

ವಿಜಯ್ ಇನ್, ಶಾ ಔಟ್

ವಿಜಯ್ ಇನ್, ಶಾ ಔಟ್

ಮೊದಲ ಟೆಸ್ಟ್‌ಗಾಗಿ ಎರಡೂ ದೇಶಗಳು ತಂಡವನ್ನು ಪ್ರಕಟಿಸಿದ್ದು, ಅನುಭವಿ ಆಟಗಾರ ಮುರಳಿ ವಿಜಯ್ ಅವರು ಭಾರತದ 12 ಜನರ ತಂಡವನ್ನು ಸೇರಿಕೊಂಡಿದ್ದಾರೆ. ಪಾದದ (ಆ್ಯಂಕಲ್) ನೋವಿಗೆ ತುತ್ತಾಗಿರುವ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಪಂದ್ಯದಿಂದ ಹೊರಗುಳಿದಿದ್ದಾರೆ.

12 ಜನರಿರುವ ಭಾರತ ತಂಡ

12 ಜನರಿರುವ ಭಾರತ ತಂಡ

ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, December 5, 2018, 12:41 [IST]
Other articles published on Dec 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X