ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವ ಬ್ಯಾಟ್ಸ್ಮನ್ ರಿಷಬ್ ಪಂತ್‌ 'ಚಾಂಪಿಯನ್' ಎಂದ ವಿರಾಟ್ ಕೊಹ್ಲಿ!

Virat Kohli Uploads Picture With Rishabh Pant, Calls Him Champion

ನವದೆಹಲಿ, ನವೆಂಬರ್ 17: ಪ್ರವಾಸ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾಕ್ಕೆತೆರಳಿದೆ. ಪ್ರವಾಸವು 3 ಟಿ20, 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಂಡಿದ್ದು, ನವೆಂಬರ್ 21ರಿಂದ ಸರಣಿ ಆರಂಭಗೊಳ್ಳಲಿದೆ.

ಎಂಎಸ್‌ಎಲ್‌: ಎಬಿಡಿ ಬ್ಯಾಟಿಂಗ್ ಅಬ್ಬರ ವ್ಯರ್ಥ, ಕೇಪ್ ಟೌನ್ ಬ್ಲಿಟ್ಜ್‌ಗೆ ಜಯಎಂಎಸ್‌ಎಲ್‌: ಎಬಿಡಿ ಬ್ಯಾಟಿಂಗ್ ಅಬ್ಬರ ವ್ಯರ್ಥ, ಕೇಪ್ ಟೌನ್ ಬ್ಲಿಟ್ಜ್‌ಗೆ ಜಯ

ಈ ನಡುವೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಜೊತೆ ಹೆಚ್ಚು ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಕೊಹ್ಲಿ, ಪಂತ್ ಜೊತೆ ಬರೀ ಕಾಣಿಸಿಕೊಂಡಿದ್ದಷ್ಟೇ ಅಲ್ಲ, ಪಂತ್ ಅವರನ್ನು 'ಚಾಂಪಿಯನ್' ಎಂದೂ ಕರೆದಿದ್ದಾರೆ.

ರಣಜಿ ಟ್ರೋಫಿ: ಇನ್ನಿಂಗ್ಸ್‌ನಲ್ಲಿ 15 ಓವರ್ ಮಾತ್ರ ಎಸೆಯಲು ಶಮಿಗೆ ಅವಕಾಶ!ರಣಜಿ ಟ್ರೋಫಿ: ಇನ್ನಿಂಗ್ಸ್‌ನಲ್ಲಿ 15 ಓವರ್ ಮಾತ್ರ ಎಸೆಯಲು ಶಮಿಗೆ ಅವಕಾಶ!

ನವೆಂಬರ್ 16ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದ ಭಾರತ ತಂಡ ಈಗ ಆಸ್ಟ್ರೇಲಿಯಾದಲ್ಲಿದೆ. ಸರಣಿ ನೆಲೆಯಲ್ಲಿ ತಂಡವು ಅಭ್ಯಾಸದಲ್ಲೂ ತೊಡಗಿದೆ. ತಂಡದ ಆಟಗಾರರು ಆಸ್ಟ್ರೇಲಿಯಾ ಪ್ರವಾಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವುದು ಕಾಣಸಿಗುತ್ತಿವೆ.

ಜಿಮ್ ನಲ್ಲೂ ಜೊತೆ ಜೊತೆಗೆ

ಟ್ವಿಟರ್ ನಲ್ಲಿ ರಿಷಬ್ ಪಂತ್ ಜೊತೆಗಿನ ಫೋಟೋ ಹಾಕಿಕೊಂಡಿರುವ ಕೊಹ್ಲಿ, 'ಆಸ್ಟ್ರೇಲಿಯಾಕ್ಕೆ ಮತ್ತೆ ಬಂದಿದ್ದೇವೆ. ಈ ಚಾಂಪಿಯನ್‌ನೊಂದಿಗೆ ಮುಂದಿನ ಕೆಲ ವಾರಗಳ ಕಾಲ ಮುನ್ನಡೆ ಸಾಧಿಸುವ ಬಗೆಯಲ್ಲಿ ಯೋಚಿಸುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಜಿಮ್ ನಲ್ಲಿ ಅಭ್ಯಾಸ ನಿರತ ಫೋಟೋದಲ್ಲೂ ಕೊಹ್ಲಿ ಜೊತೆ ಪಂತ್ ಇದ್ದಾರೆ.

ಹುಮ್ಮಸ್ಸು ತುಂಬುವ ಯತ್ನ

ಸದ್ಯ ಭಾರತ ತಂಡದಲ್ಲಿರುವ ಅನುಭವಿ ಆಟಗಾರರೆಲ್ಲರೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿರಿಸುತ್ತಿರುವ ಯುವ ಆಟಗಾರರನ್ನು ತಮ್ಮದೇ ರೀತಿಯಲ್ಲಿ ತುಂಬು ಮನದಿಂದ ಬೆಂಬಲಿಸುತ್ತಿರುವುದು ನಾವೆಲ್ಲರೂ ಕಂಡಿದ್ದೇವೆ. ಇದೇ ರೀತಿ ಇಲ್ಲಿ ಕೊಹ್ಲಿ, ಪಂತ್‌ಗೆ ಹುಮ್ಮಸ್ಸು ತುಂಬುವ ಪ್ರಯತ್ನ ಮಾಡಿದ್ದಾರೆ.

ಒಂದು ಸೋಲು-ಒಂದು ಗೆಲುವು

ಅಂದ್ಹಾಗೆ, ಹಿಂದೆ 2014-15ರಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿತ್ತು. ಈ ವೇಳೆ ಬ್ಲೂಬಾಯ್ಸ್ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 1-4ರಿಂದ ಕಳೆದುಕೊಂಡಿತ್ತು. ಆದರೆ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0ಯಿಂದ ಜಯಿಸಿತ್ತು.

ಮಿಂಚುವ ಯೋಜನೆಯಲ್ಲಿ ರಾಹುಲ್

ಇದೇ ಸರಣಿಯಲ್ಲಿ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ಕಾಲಿರಿಸಿರುವ ಮತ್ತೊಬ್ಬ ಯುವ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಕೂಡ ಟ್ವಿಟರ್ ನಲ್ಲಿ ಫೋಟೋ ಹಾಕಿಕೊಂಡು, ಮುನ್ನಡೆದು ಇತಿಹಾಸ ನಿರ್ಮಿಸುವ ನಿರೀಕ್ಷೆಯಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

Story first published: Saturday, November 17, 2018, 20:53 [IST]
Other articles published on Nov 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X