ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಆದ್ಯತೆ ಕೊಡುತ್ತಿರುವುದು ಶ್ರೇಷ್ಠ ವಿಚಾರ: ರಾಹುಲ್ ದ್ರಾವಿಡ್

Virat Kohli Values Test Cricket, Says Rahul Dravid

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟನ್ನು ನಿರ್ಲಕ್ಷಿಸದೆ ಟೆಸ್ಟ್ ಕ್ರಿಕೆಟ್ ಗೂ ಆದ್ಯತೆ ಕೊಡುವುದು ಭಾರತಕ್ಕೆ ಶ್ರೇಷ್ಠ ಸಂಗತಿಯಾಗಿದೆ. ಯುವ ಕ್ರಿಕೆಟಿಗರಿಗೆ ಇದು ಆದರ್ಶವಾಗಿದೆ. ಇದರ ಜೊತೆಗೆ ಸಾಂಪ್ರಾದಾಯಿಕ ಮಾದರಿಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಇನ್ನೂ ಶ್ರೇಷ್ಠ ಪ್ರದರ್ಶನ ತೋರಬೇಕಾಗಿದೆ ಎಂದು ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ವಿಭಿನ್ನ ಮಾದರಿಯ ಕ್ರಿಕೆಟ್‌ನಲ್ಲಿ ವಿಭಿನ್ನವಾದ ಕೌಶಲ್ಯದ ಅಗತ್ಯವಿರುತ್ತದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ ನಲ್ಲಿ ದೌರ್ಬಲ್ಯಗಳನ್ನು ಹೊಂದಿದ್ದರೆ ಉಳಿಯಲು ಸಾಧ್ಯವಿಲ್ಲ. ಟಿ-20 ಮಾದರಿಯಲ್ಲಿ ನಿರ್ದಿಷ್ಟವಾದ ಪಾತ್ರವಿರುತ್ತದೆ. ಆದರೆ, ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದರೆ ಯಶಸ್ವಿಯಾಗಬಹುದು ಎಂದು ಹೇಳಿದರು.

ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಆಡಬಯಸುವ ಆಟಗಾರರ ಸಂಖ್ಯೆ ಪ್ರತಿವರ್ಷ ಕುಸಿಯುತ್ತಿದೆ ಎಂಬುದನ್ನು ರಾಹುಲ್ ದ್ರಾವಿಡ್ ನಂಬುವುದಿಲ್ಲ, ಟೆಸ್ಟ್ ಬ್ಯಾಟ್ಸ್ ಮನ್ ಗಳ ರಕ್ಷಣಾತ್ಮಕ ಆಟದ ಮೇಲೆ ಅವಲಂಬಿತರಾಗಿಲ್ಲ, ಮುಂದೆ ಬಂದು ಹೆಚ್ಚಿನ ರನ್ ಕದಿಯುವುದನ್ನು ನೋಡಲು ನಾವು ಬಯಸುತ್ತೇವೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೌರವಿಸುವುದು ಟೀಂ ಇಂಡಿಯಾಕ್ಕೆ ಅತ್ಯುನ್ನತ ವಿಷಯವಾಗಿದೆ ಎಂದರು.

ಕೇರಳ ಮಾಜಿ ರಣಜಿ ಕ್ರಿಕೆಟರ್ ಜಯಮೋಹನ್ ಸಾವು, ಪುತ್ರ ಅಶ್ವಿನ್ ಬಂಧನಕೇರಳ ಮಾಜಿ ರಣಜಿ ಕ್ರಿಕೆಟರ್ ಜಯಮೋಹನ್ ಸಾವು, ಪುತ್ರ ಅಶ್ವಿನ್ ಬಂಧನ

ಅನೇಕ ಯುವ ಆಟಗಾರರೊಂದಿಗೆ ಕೆಲಸ ಮಾಡಿದ್ದೇನೆ. ಅವರಿಗೆ ಕೊಹ್ಲಿ, ಅಥವಾ ಕೇನ್ ವಿಲಿಯಮ್ಸ್ , ಸ್ಟೀವ್ ಸ್ಮೀತ್ ಹೀರೋ ಆಗಿ ಕಾಣುತ್ತಾರೆ. ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಆಡಲು ಬಯಸುತ್ತಾರೆ. ಆದರೆ, ಕಡಿಮೆ ಪ್ರತಿಭಾವಂತ ಅಥವಾ ಕಡಿಮೆ ಕೌಶಲ್ಯದ ಆಟಗಾರರು ಕೊಹ್ಲಿ ಅಥವಾ ಪೂಜಾರ ಅಥವಾ (ಅಜಿಂಕ್ಯ) ರಹಾನೆ ಅವರೊಂದಿಗೆ ತಂಡವನ್ನು ಪ್ರವೇಶಿಸುವುದು ಕಷ್ಟ ಎಂಬುದನ್ನು ಅರಿತುಕೊಂಡಿದ್ದಾರೆ ಎಂದು ರಾಹುಲ್ ದ್ರಾವಿಡ್ ತಿಳಿಸಿದರು.

ಪೂಜಾರ ಅವರಂತಹ ಬ್ಯಾಟ್ಸ್ ಮನ್ ಗಳಿಗೆ ಯಾವಾಗಲೂ ಸ್ಥಾನ ನೀಡಬೇಕಾಗುತ್ತದೆ. ಅವರ ತಾಂತ್ರಿಕ ಕೌಶಲ್ಯ ಪಂದ್ಯ ಗೆಲ್ಲಲು ಕಾರಣವಾಗುತ್ತದೆ. ಪ್ರಸ್ತುತ ಅನೇಕ ಮಂದಿ ಆಟಗಾರರು ಉತ್ತಮ ರಕ್ಷಣಾತ್ಮಕ ತಂತ್ರಗಾರಿಕೆ ಹೊಂದಿದ್ದಾರೆ.ಇಂತಹ ತಂತ್ರದಿಂದ ಸಂಕಷ್ಟದ ಸಂದರ್ಭದಲ್ಲಿ ತಂಡವನ್ನು ರಕ್ಷಿಸಲು ನೆರವಾಗಲಿದೆ ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟರು.

Story first published: Wednesday, June 10, 2020, 14:54 [IST]
Other articles published on Jun 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X