3ನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಲಿದ್ದಾರೆ ಕೊಹ್ಲಿ: ಭವಿಷ್ಯ ನುಡಿದ ಆರ್‌ಆರ್ ಆಟಗಾರ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್‌ಪಂದ್ಯದಲ್ಲಿ ಟೀಮ್ ಇಂಡಿಯಾ ಭಾರೀ ಹಿನ್ನೆಡೆಯನ್ನು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಳಿಕ ಟೀಮ್ ಇಂಡಿಯಾ ಆಘಾತದ ಮೇಲೆ ಆಘಾತ ಅನುಭವಿಸಿತು. ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಕೂಡ ಸಂಪೂರ್ಣವಾಗಿ ವೈಫಲ್ಯವನ್ನು ಕಂಡ ಕಾರಣದಿಂದಾಗಿ ಭಾರತ ಕೇವಲ 78 ರನ್‌ಗಳಿಗೆ ಆಲೌಟ್ ಆಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಹೀನಾಯ ಪ್ರದರ್ಶನ ಮುಂದುವರಿಸಿದ್ದಾರೆ. ಆದರೆ ಭಾರತದ ನಾಯಕ ಎರಡನೇ ಇನ್ನಿಂಗ್ಸ್‌ನಲ್ಲಿ ಖಂಡಿತಾ ಅಬ್ಬರಿಸಲಿದ್ದಾರೆ ಎಂಬ ವಿಶ್ವಾಸವನ್ನು ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ರಿಯಾನ್ ಪರಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 7 ರನ್‌ಗಳಿಸಿ ವಿಕೆಟ್ ಕಳದುಕೊಂಡಿದ್ದರು. ಆಫ್‌ಸ್ಟಂಪ್‌ಗಿಂತ ಆಚೆಯಿದ್ದ ಎಸೆತವನ್ನು ಡ್ರೈವ್ ಮಾಡಲು ಹೋದ ನಾಯಕ ಕೊಹ್ಲಿ ಕೀಪರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಈ ಮೂಲಕ ಮತ್ತೊಂದು ಇನ್ನಿಂಗ್ಸ್‌ನಲ್ಲಿ ಕೊಹ್ಲಿ ವಿಫಲವಾಗಿದ್ದರು. ಆದರೆ ಮುಂದಿನ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಖಂಡಿಯಾ ಅದ್ಭುತ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ರಿಯಾನ್ ಪರಾಗ್ ಹೇಳಿಕೆ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ರಿಯಾನ್ ಪರಾಗ್. ವಿರಾಟ್ ಕೊಹ್ಲಿಎರಡನೇ ಇನ್ನಿಂಗ್ಸ್‌ನಲ್ಲಿ ಶತಕವನ್ನು ಭಾರಿಸಲಿದ್ದಾರೆ ಎಂದು ಪರಾಗ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ನಾಯಕ ಸುದೀರ್ಘ ಕಾಲದ ಬಳಿಕ ಮೂರಂಕಿಯನ್ನು ದಾಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ರಿಯಾನ್ ಪರಾಗ್.

2021ರ ಸೀಸನ್ ಮುಗಿಸಲು ಟೋಕಿಯೋ ಚಿನ್ನದ ಹುಡುಗ ನೀರಜ್ ಚೋಪ್ರಾ ನಿರ್ಧಾರ2021ರ ಸೀಸನ್ ಮುಗಿಸಲು ಟೋಕಿಯೋ ಚಿನ್ನದ ಹುಡುಗ ನೀರಜ್ ಚೋಪ್ರಾ ನಿರ್ಧಾರ

2019ರ ನವೆಂಬರ್ ಬಳಿಕ ಕೊಹ್ಲಿ ಶತಕದ ಬರ: ಶತಕದ ಮೇಲೆ ಶತಕ ಬಾರಿಸಿ ಮಿಂಚುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ತಮ್ಮ ವೃತ್ತಿ ಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದಾರೆ. 2019ರ ನವೆಂಬರ್ ತಿಂಗಳಿನ ಬಳಿಕ ಒಂದೇ ಒಂದು ಶತಕವನ್ನು ಬಾರಿಸಲು ವಿಫಲವಾಗಿದ್ದಾರೆ. ಅಂದು ಬಾಂಗ್ಲಾದೇಶದ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ತಮ್ಮ ಕೊನೆಯ ಶತಕವನ್ನು ಬಾರಿದ್ದರು ಕೊಹ್ಲಿ. ಅಅಂದಿನ ಪಂದ್ಯದಲ್ಲಿ ಭರ್ಜರಿ 136 ರನ್‌ಗಳಿಸಿದ್ದರು.

ಬಾಂಗ್ಲಾದೇಶದ ವಿರುದ್ಧ ಸಿಡಿಸಿದ ಈ ಶತಕದ ಬಳಿಕ ಕೊಹ್ಲಿ ಯಾವುದೇ ಮಾದರಿಯಲ್ಲಿಯೂ ಮೂರಂಕಿಯನ್ನು ದಾಟಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಇನ್ನು ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಮತ್ತಷ್ಟು ಕಳಪೆಯಾಗಿದೆ. ಈ ಸರಣಿಯಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್‌ನಲ್ಲಿಯೂ ಕೊಹ್ಲಿ ಕನಿಷ್ಠ ಒಂದಿ ಅರ್ಧ ಶತಕವನ್ನು ಬಾರಿಸುವಲ್ಲಿಯೂ ಕೊಹ್ಲಿ ವಿಫಲವಾಗಿದ್ದಾರೆ. ಇದು ಇಡೀ ತಂಡದ ಪ್ರದರ್ಶನದ ಮೇಲೆಯೂ ಪರಿಣಾಮ ಬೀರಿದೆ. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರರಲ್ಲಿ ಕೊಹ್ಲಿ 30 ರನ್‌ಗಳನ್ನು ಗಳಿಸಲು ಕೂಡ ಸಾಧ್ಯವಾಗಿಲ್ಲ. ಹೀಗಾಗಿ ಮೂರನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಭಾರತದ ಪಾಲಿಗೆ ಕಳವಳಕಾರಿಯಾಗಿದೆ.

MS Dhoni ಮೈದಾನದಿಂದಾಚೆ 6 ಹೊಡೆದು ಏನು ಮಾಡಿದರು ಗೊತ್ತಾ | Oneindia Kannada

ಭಾರತದ ನಾಯಕನ ತದ್ವಿರುದ್ಧ ಪ್ರದರ್ಶನ ನಿಡುತ್ತಿದ್ದಾರೆ ಜೋ ರೂಟ್: ಒಂದೆಡೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸತತವಾಗಿ ವಿಫಲವಾಗುತ್ತಿದ್ದರೆ ಮತ್ತೊಂದೆಡೆ ಎದುರಾಳಿ ತಂಡದ ನಾಯಕ ಜೋ ರೂಟ್ ರನ್ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿಯೂ ರೂಟ್ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ನಾಯಕ ಜೋ ರೂಟ್ ನೀಡಿರುವ ಈ ಪ್ರದರ್ಶನದಿಂದಾಗಿ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್‌ನಲ್ಲಿ ಅತ್ಯಂತ ಸುಸ್ಥಿತಿಯಲ್ಲಿದೆ. ಹೀಗಾಗಿ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸವನ್ನು ಹೊಂದಿದೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 27, 2021, 15:36 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X