ಆಗಸ್ಟ್ 14ರಂದು ಕ್ರಿಕೆಟ್‌ ಜಗತ್ತಿನಲ್ಲಿ ನಡೆದದ್ದೇನು?

ಆಗಸ್ಟ್ 14 ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ಘಟನೆಗಳು ಮತ್ತು ವಿದ್ಯಮಾನಗಳು ನಡೆದಿವೆ. ಇತ್ತ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂರನೇ ದಿನದಾಟ ನಡೆದಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ತಿಳಿಸಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಹೀಗೆ ಆಗಸ್ಟ್ 14ರ ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ವಿದ್ಯಮಾನಗಳ ಒಂದು ಕಿರುನೋಟ ಇಲ್ಲಿದೆ ನೋಡಿ..

* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೆ ಇನ್ನಿಂಗ್ಸ್‌ನಲ್ಲಿ 129 ರನ್ ಬಾರಿಸಿದ ಕೆಎಲ್ ರಾಹುಲ್ ತಮ್ಮ ಟೆಸ್ಟ್ ಕಮ್ ಬ್ಯಾಕ್ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!

* ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಇಂಗ್ಲಿಷ್‌ನಲ್ಲಿ ಕೋರಲು ಹೋಗಿ ತಪ್ಪಾದ ಇಂಗ್ಲಿಷ್ ಬಳಕೆ ಮಾಡಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಟ್ರೋಲ್‌ಗೆ ಒಳಗಾಗಿದ್ದಾರೆ.

* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ನೀಡದೇ ಇರುವ ಕಾರಣಕ್ಕೆ ಟೀಮ್ ಇಂಡಿಯಾಗೆ ಹಿನ್ನಡೆಯಾಗಿದೆ ಎಂದು ಆಕೋಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಭಾರತ vs ಇಂಗ್ಲೆಂಡ್: ಭಾರತೀಯರ ಪರಿಸ್ಥಿತಿ ನೋಡಿದರೆ ನಗು ಬರುತ್ತದೆ ಎಂದು ಕಾಲೆಳೆದ ಮಾಜಿ ಕ್ರಿಕೆಟಿಗಭಾರತ vs ಇಂಗ್ಲೆಂಡ್: ಭಾರತೀಯರ ಪರಿಸ್ಥಿತಿ ನೋಡಿದರೆ ನಗು ಬರುತ್ತದೆ ಎಂದು ಕಾಲೆಳೆದ ಮಾಜಿ ಕ್ರಿಕೆಟಿಗ

* ಚೇತೇಶ್ವರ್ ಪೂಜಾರಾ ಅವರ ಸ್ಥಾನವನ್ನು ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿ ತುಂಬಲಿದ್ದಾರೆ ಎಂದು ಸಲ್ಮಾನ್‌ ಬಟ್ ಹೇಳಿದ್ದಾರೆ.* ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಈಗಾಗಲೇ ದುಬೈ ತಲುಪಿದ್ದು ಅಭ್ಯಾಸವನ್ನು ಆರಂಭಿಸಿದ್ದಾರೆ.

* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ತನ್ನ ಎರಡು ರಿವ್ಯೂಗಳನ್ನು ವ್ಯರ್ಥ ಮಾಡಿದೆ. ಈ ಎರಡೂ ರಿವ್ಯೂ ಕೂಡ ಮೊಹಮ್ಮದ್ ಸಿರಾಜ್ ಓವರ್‌ಗಳಲ್ಲಿ ಕೋರಲಾಗಿದ್ದು ಔಟ್ ಅಲ್ಲದ ಎಸೆತಕ್ಕೆ ರಿವ್ಯೂಗಳನ್ನು ವ್ಯರ್ಥ ಮಾಡಿದ್ದಕ್ಕೆ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಔಟ್ ಆಗಿರದಿದ್ದರೂ ಸಹ ರಿವ್ಯೂ ಮನವಿ ಮಾಡಿ ವ್ಯರ್ಥ ಮಾಡುವುದನ್ನು ವಿರಾಟ್ ಕೊಹ್ಲಿಯವರನ್ನು ನೋಡಿ ಕಲಿಯಬೇಕೆಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ vs ಇಂಗ್ಲೆಂಡ್: ಭಾರತೀಯರ ಪರಿಸ್ಥಿತಿ ನೋಡಿದರೆ ನಗು ಬರುತ್ತದೆ ಎಂದು ಕಾಲೆಳೆದ ಮಾಜಿ ಕ್ರಿಕೆಟಿಗಭಾರತ vs ಇಂಗ್ಲೆಂಡ್: ಭಾರತೀಯರ ಪರಿಸ್ಥಿತಿ ನೋಡಿದರೆ ನಗು ಬರುತ್ತದೆ ಎಂದು ಕಾಲೆಳೆದ ಮಾಜಿ ಕ್ರಿಕೆಟಿಗ

* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಔಟ್ ಆಗದೇ ಇದ್ದರೂ ಸಹ ರಿವ್ಯೂ ತೆಗೆದುಕೊಂಡ ವಿರಾಟ್ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ರಿವ್ಯೂಗಳನ್ನು ಈ ರೀತಿ ಸುಖಾಸುಮ್ಮನೆ ವ್ಯರ್ಥ ಮಾಡುವುದರಿಂದ ಮುಂದಿನ ದಿನಗಳಲ್ಲಿ ಭಾರತವೇ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ಆ್ಯಶಸ್ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ರೀತಿಯೇ ಆಸ್ಟ್ರೇಲಿಯ ತಂಡ ರಿವ್ಯೂಗಳನ್ನು ವ್ಯರ್ಥ ಮಾಡಿ ತದನಂತರ ಗೆಲ್ಲುವ ಹಂತದಲ್ಲಿ ಯಾವುದೇ ರಿವ್ಯೂಗಿಲ್ಲದೇ ಸರಣಿಯನ್ನು ಸೋಲಬೇಕಾಯಿತು ಎಂದು ವಿವಿಎಸ್ ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 14, 2021, 22:33 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X