ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶತಕ ಬಾರಿಸಿ ದಾಖಲೆ ಸೃಷ್ಟಿಸುವುದಲ್ಲ ಕಪ್ ಗೆಲ್ಲುವುದು ಮುಖ್ಯ ಎಂದು ಕುಟುಕಿದ ನಾಯಕ ರೋಹಿತ್!

Winning ICC Trophy is more important than individual records says Rohit Sharma

2021ರಲ್ಲಿ ಟೀಮ್ ಇಂಡಿಯಾ ಸಾಲು ಸಾಲು ಬೃಹತ್ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುವವರೆಗೂ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಏಕೈಕ ನಾಯಕನನ್ನು ಹೊಂದಿದ್ದ ಟೀಮ್ ಇಂಡಿಯಾ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ವೈಟ್ ಬಾಲ್ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಎರಡಕ್ಕೂ ಪ್ರತ್ಯೇಕ ನಾಯಕರನ್ನು ಪಡೆದುಕೊಂಡಿದೆ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಟಿ ಟ್ವೆಂಟಿ ತಂಡದ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾದರು ಹಾಗೂ ಇದೀಗ ಬಿಸಿಸಿಐ ಭಾರತ ಏಕದಿನ ತಂಡಕ್ಕೂ ಕೂಡ ರೋಹಿತ್ ಶರ್ಮಾ ಅವರನ್ನೇ ನೂತನ ನಾಯಕನನ್ನಾಗಿ ನೇಮಿಸಿದೆ.

ಈ ಕ್ರಿಕೆಟ್ ದಿಗ್ಗಜ 2009ರಲ್ಲೇ ರೋಹಿತ್‌ನಲ್ಲಿ ನಾಯಕನ ಗುಣ ಹುಡುಕಿದ್ದರು ಎಂದ ಪ್ರಗ್ಯಾನ್ ಓಜಾ!ಈ ಕ್ರಿಕೆಟ್ ದಿಗ್ಗಜ 2009ರಲ್ಲೇ ರೋಹಿತ್‌ನಲ್ಲಿ ನಾಯಕನ ಗುಣ ಹುಡುಕಿದ್ದರು ಎಂದ ಪ್ರಗ್ಯಾನ್ ಓಜಾ!

ಮೊದಲಿಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ತಾನೇ ಸ್ವತಃ ಘೋಷಣೆಯನ್ನು ಮಾಡುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿಕೆಯನ್ನು ನೀಡಿದ್ದ ವಿರಾಟ್ ಕೊಹ್ಲಿ, ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವದತ್ತ ಹಾಗೂ ತನ್ನ ವೈಯಕ್ತಿಕ ಪ್ರದರ್ಶನದತ್ತ ಹೆಚ್ಚಿನ ಗಮನವನ್ನು ಹರಿಸಲು ಈ ದೃಢ ನಿರ್ಧಾರವನ್ನು ಕೈಗೊಂಡಿರುವುದಾಗಿ ಹೇಳಿಕೊಂಡಿದ್ದರು. ಹೀಗೆ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವದತ್ತ ಹೆಚ್ಚಿನ ಗಮನಹರಿಸುವ ಕಾರಣವನ್ನು ನೀಡಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ್ದ ವಿರಾಟ್ ಕೊಹ್ಲಿ ಇದೀಗ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಕಳೆದುಕೊಂಡಿದ್ದಾರೆ.

ಕೊಹ್ಲಿಯನ್ನು ನಾಯಕತ್ವದಿಂದ ಹೊರಹಾಕಿದ ಬೆನ್ನಲ್ಲೇ ರೋಹಿತ್‌ ಜೊತೆ ಕೈಜೋಡಿಸಲು ರಾಹುಲ್ ರೆಡಿಕೊಹ್ಲಿಯನ್ನು ನಾಯಕತ್ವದಿಂದ ಹೊರಹಾಕಿದ ಬೆನ್ನಲ್ಲೇ ರೋಹಿತ್‌ ಜೊತೆ ಕೈಜೋಡಿಸಲು ರಾಹುಲ್ ರೆಡಿ

ಮೂಲಗಳು ತಿಳಿಸಿರುವ ಪ್ರಕಾರ ವಿರಾಟ್ ಕೊಹ್ಲಿಗೆ ಭಾರತ ಏಕದಿನ ತಂಡದ ನಾಯಕತ್ವವನ್ನು ಬಿಟ್ಟುಕೊಡಲು ಕೊಂಚವೂ ಇಷ್ಟವಿರಲಿಲ್ಲ ಹಾಗೂ ಬಿಸಿಸಿಐ ಕೊಹ್ಲಿ ಮೇಲೆ ಒತ್ತಡವನ್ನು ಹೇರಿ ನಾಯಕತ್ವವನ್ನು ಕಸಿದುಕೊಂಡು ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನೂತನ ನಾಯಕ ಎಂದು ಘೋಷಿಸಿತು ಎಂದು ಹೇಳಲಾಗುತ್ತಿದೆ. ಇನ್ನು ರೋಹಿತ್ ಶರ್ಮಾ ಭಾರತ ಏಕದಿನ ತಂಡದ ನೂತನ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಬೋರಿಯಾ ಮಜುಂದಾರ್ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ನಾಯಕನಾಗಿ ಸಾಧಿಸಲು ಇಚ್ಛಿಸುವ ಅಂಶಗಳ ಕುರಿತು ಈ ಕೆಳಕಂಡಂತೆ ಹೇಳಿಕೊಂಡಿದ್ದಾರೆ.

ವೈಯಕ್ತಿಕ ದಾಖಲೆಯಲ್ಲ ಐಸಿಸಿ ಟ್ರೋಫಿ ಗೆಲ್ಲುವುದು ಮುಖ್ಯ

ವೈಯಕ್ತಿಕ ದಾಖಲೆಯಲ್ಲ ಐಸಿಸಿ ಟ್ರೋಫಿ ಗೆಲ್ಲುವುದು ಮುಖ್ಯ

ಭಾರತ ಏಕದಿನ ತಂಡದ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾ ತಾನು ನಾಯಕನಾಗಿ ಶತಕ ಹಾಗೂ ರನ್ ಬಾರಿಸಿ ವೈಯಕ್ತಿಕ ದಾಖಲೆ ನಿರ್ಮಿಸುವುದಕ್ಕಿಂತ ಐಸಿಸಿ ಟ್ರೋಫಿ ಗೆಲ್ಲುವತ್ತ ಹೆಚ್ಚಿನ ಗಮನ ಹರಿಸುತ್ತೇನೆ ಎಂದಿದ್ದಾರೆ. "ನೀವು ಯಾವುದೇ ಕ್ರೀಡೆಯನ್ನು ಆಡುವಾಗ ಅದರ ಅತ್ಯುನ್ನತ ಮಟ್ಟವನ್ನು ಸಾಧಿಸುವುದು ಮುಖ್ಯವಾಗಿರುತ್ತದೆ. ಕ್ರಿಕೆಟ್‍ನಲ್ಲಿ ಆ ಅತ್ಯುನ್ನತ ಮಟ್ಟವೆಂದರೆ ಐಸಿಸಿ ಟ್ರೋಫಿ. ಹೀಗಾಗಿ ಐಸಿಸಿ ಟೂರ್ನಿಗಳಲ್ಲಿ ನಾನಾಗಲಿ ಅಥವಾ ಇತರರಾಗಲಿ ಗಳಿಸುವ ರನ್ ಅಥವಾ ಶತಕ ಲೆಕ್ಕಕ್ಕೆ ಬರುವುದಿಲ್ಲ, ಟ್ರೋಫಿ ಗೆಲ್ಲುವುದಷ್ಟೇ ಲೆಕ್ಕಕ್ಕೆ ಬರುತ್ತದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಈ ರೀತಿ ಹೇಳಿಕೆ ನೀಡುವುದರ ಮೂಲಕ ವಿರಾಟ್ ಕೊಹ್ಲಿಗೆ ಕುಟುಕಿದ್ರಾ ರೋಹಿತ್ ಶರ್ಮಾ?

ಈ ರೀತಿ ಹೇಳಿಕೆ ನೀಡುವುದರ ಮೂಲಕ ವಿರಾಟ್ ಕೊಹ್ಲಿಗೆ ಕುಟುಕಿದ್ರಾ ರೋಹಿತ್ ಶರ್ಮಾ?

ರೋಹಿತ್ ಶರ್ಮಾರ ಈ ಒಂದು ನಿರ್ದಿಷ್ಟ ಹೇಳಿಕೆಯನ್ನು ಗಮನಿಸಿದಾಗ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಕೂಡ ತಕ್ಷಣ ತಲೆಗೆ ಬರುವ ಹೆಸರು ವಿರಾಟ್ ಕೊಹ್ಲಿ. ಏಕೆಂದರೆ ವಿರಾಟ್ ಕೊಹ್ಲಿ ರೀತಿ ವೈಯಕ್ತಿಕ ದಾಖಲೆಗಳನ್ನು ಹೊಂದಿರುವ ಮತ್ತೊಬ್ಬ ನಾಯಕ ಯಾರು ಕೂಡ ಇಲ್ಲ. ಹೀಗಾಗಿ ರೋಹಿತ್ ಶರ್ಮಾ ಶತಕ ಅಥವಾ ರನ್ ಬಾರಿಸಿ ವೈಯಕ್ತಿಕ ದಾಖಲೆ ನಿರ್ಮಿಸುವುದಲ್ಲ ಐಸಿಸಿ ಟ್ರೋಫಿ ಗೆಲ್ಲಬೇಕು ಎಂದು ಹೇಳಿರುವುದು ಸದ್ಯ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಅಸಮಾಧಾನವನ್ನುಂಟುಮಾಡಿದೆ. ಹಾಗೂ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ರೋಹಿತ್ ಶರ್ಮಾ ಈ ರೀತಿ ಹೇಳಿಕೆಯನ್ನು ನೀಡುವುದರ ಮೂಲಕ ವಿರಾಟ್ ಕೊಹ್ಲಿಗೆ ಪರೋಕ್ಷವಾಗಿ ಕುಟುಕಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅಷ್ಟೊಂದು ರಿಸ್ಕ್ ಇದ್ರೂ ಟೀಂ ಇಂಡಿಯಾಗಾಗಿ ಸೌತ್ ಆಫ್ರಿಕಾ ಮಾಡಿರೋ ಮಾಸ್ಟರ್ ಪ್ಲ್ಯಾನ್ ನೋಡಿ | Oneindia Kannada
ಏಕದಿನ ನಾಯಕನಾಗಿ ರೋಹಿತ್ ಶರ್ಮಾ ಅಂಕಿಅಂಶ

ಏಕದಿನ ನಾಯಕನಾಗಿ ರೋಹಿತ್ ಶರ್ಮಾ ಅಂಕಿಅಂಶ

ರೋಹಿತ್ ಶರ್ಮಾ ಇದುವರೆಗೂ ಒಟ್ಟು 10 ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಈ ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳಲ್ಲಿ ಗೆದ್ದಿದ್ದು, ಕೇವಲ 2 ಪಂದ್ಯಗಳಲ್ಲಿ ಸೋತಿದೆ.

Story first published: Thursday, December 9, 2021, 20:50 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X