ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವುಮೆನ್ಸ್ ಐಸಿಸಿ ಟಿ20 ವಿಶ್ವಕಪ್: ಟೀಮ್ ಇಂಡಿಯಾ ತಂಡ ಪ್ರಕಟ

Womens ICC T20 World Cup: Harmanpreet Kaur To Lead India

ಆಸ್ಟ್ರೇಲಿಯಾದಲ್ಲಿ ಫೆಬ್ರವರಿ 21 ರಿಂದ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಗೆ ಟೀಮ್ ಇಂಡಿಯಾ ಮಹಿಳಾ ತಂಡವನ್ನು ಇಂದಿ ಆಯ್ಕೆ ಮಾಡಲಾಗಿದೆ.15 ಆಟಗಾರ್ತಿಯರ ಟೀಮ್ ಇಂಡಿಯಾ ತಂಡವನ್ನು ಹರ್ಮನ್ ಪ್ರೀತ್‌ಕೌರ್ ವಿಶ್ವಕಪ್‌ನಲ್ಲಿ ಮುನ್ನಡೆಸಲಿದ್ದಾರೆ.

ಬಂಗಾಳದ ಯುವ ಅನ್‌ಕ್ಯಾಪ್‌ಡ್ ಆಟಗಾರ್ತಿ ರಿಚಾ ಘೋಷ್ ವಿಶ್ವಕೊ್‌ ತಂಡಕ್ಕೆ ಆಯ್ಕೆಯಾಘಿ ಅಚ್ಚರಿ ಮೂಡಿಸಿದ್ದಾರೆ. ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡದಲ್ಲಿರುವ ಏಕೈಕ ಹೊಸಮುಖವಾಗಿದೆ. ಇತ್ತೀಚೆಗೆ ನಡೆದ ವುಮೆನ್ಸ್ ಚಾಲೆಂಜರ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಮಾತ್ರವಲ್ಲ ಸ್ಮೃತಿ ಮಂದಾನಾ ನೇತೃತ್ವದ ಭಾರತ ಬಿ ತಂಡದಲ್ಲೂ ಅದ್ಭುತ ಆಟ ಪ್ರದರ್ಶಿಸಿದ್ದಾರೆ.

ಇಂಡೋ-ಆಸಿಸ್ ಕದನ: ಆಡುವ ಬಳಗ, ಫಲಿತಾಂಶದ ನಿರೀಕ್ಷೆ, ಹವಾಮಾನ ಮತ್ತು ಪಿಚ್ ರಿಪೋರ್ಟ್ಇಂಡೋ-ಆಸಿಸ್ ಕದನ: ಆಡುವ ಬಳಗ, ಫಲಿತಾಂಶದ ನಿರೀಕ್ಷೆ, ಹವಾಮಾನ ಮತ್ತು ಪಿಚ್ ರಿಪೋರ್ಟ್

ಇದನ್ನು ಹೊರತು ಪಡಸಿ ತಂಡದಲ್ಲಿ ಯಾವುದೇ ಅಚ್ಚರಿಯ ಬದಲಾವಣೆಗಳು ಆಗಿಲ್ಲ. ವಿಶ್ವಕಪ್‌ ತಂಡದ ಜೊತೆಗೆ ವಿಶ್ವಕಪ್‌ಗೂ ಮುನ್ನ ಮಹಿಳಾ ತಂಡ ಆಸ್ಟ್ರೇಲಿಯಾದಲ್ಲಿ ತ್ರಿಕೋನ ಸರಣಿಯನ್ನು ಆಡಲಿದೆ. ಹೀಗಾಗಿ ತ್ರಿಕೋನ ಸರಣಿಗೂ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.

ಟಿ20 ವಿಶ್ವಕಪ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಮ್ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ.

ಔಟಾ, ನಾಟೌಟಾ?: ಕ್ರಿಕೆಟ್ ನಿಯಮವನ್ನೇ ಪ್ರಶ್ನಿಸೊ ವಿವಾದಾತ್ಮಕ ವೀಡಿಯೋ!ಔಟಾ, ನಾಟೌಟಾ?: ಕ್ರಿಕೆಟ್ ನಿಯಮವನ್ನೇ ಪ್ರಶ್ನಿಸೊ ವಿವಾದಾತ್ಮಕ ವೀಡಿಯೋ!

ತ್ರಿಕೋನ ಸರಣಿಗೆ ಟೀಮ್ ಇಂಡಿಯಾ ತಂಡ:

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಮ್ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ನುಝಾತ್ ಪರ್ವೀನ್

Story first published: Sunday, January 12, 2020, 17:20 [IST]
Other articles published on Jan 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X