ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ

Womens Premier League 2023: Players Auction Will Be Held On February 2nd Week

ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL) ಆಟಗಾರರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 2ನೇ ವಾರ ದೆಹಲಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ 5 ತಂಡಗಳು ಸೆಣೆಸಲಿವೆ. ಇತ್ತೀಚೆಗೆ ಮುಕ್ತಾಯವಾದ ಐದು ತಂಡಗಳ ಹರಾಜಿನ ಮೂಲಕ ಬಿಸಿಸಿಐ 4669 ಕೋಟಿ ರುಪಾಯಿ ಗಳಿಸಿದೆ.

ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ (ಬೆಂಗಳೂರು), ಅದಾನಿ ಸ್ಪೋರ್ಟ್ಸ್‌ಲೈನ್ ಪ್ರೈವೇಟ್ ಲಿಮಿಟೆಡ್ (ಅಹಮದಾಬಾದ್), ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಮುಂಬೈ), ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (ಲಕ್ನೋ), ಜೆಎಸ್‌ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ದೆಹಲಿ) ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. . ಈ ತಂಡಗಳಿಗೆ ಇನ್ನೂ ಅಧಿಕೃತವಾಗಿ ಹೆಸರಿಟ್ಟಿಲ್ಲ, ಐದು ಫ್ರಾಂಚೈಸಿಗಳು ಚೊಚ್ಚಲ ಆವೃತ್ತಿಗಾಗಿ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಯೋಜನೆ ರೂಪಿಸಿದೆ.

ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ

ಫೆಬ್ರವರಿ ಎರಡನೇ ವಾರ ಹರಾಜು ನಡೆಯಲಿದ್ದು, ಮಾರ್ಚ್ ತಿಂಗಳಿನಲ್ಲಿ ಬಹುತೇಕ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ ನಡೆಯಲಿದೆ. ಫೆಬ್ರವರಿ 10 ಅಥವಾ 11 ರಂದು ನವದೆಹಲಿಯಲ್ಲಿ ನಡೆಯುಲಿದೆ ಎಂದು ಮೂಲಗಳು ತಿಳಿಸಿವೆ. ಬಿಸಿಸಿಐ ಈ ಬಗ್ಗೆ ಅಧಿಕೃತವಾಗಿ ಇನ್ನೂ ಪ್ರಕಟಣೆ ನೀಡಿಲ್ಲ.

Womens Premier League 2023: Players Auction Will Be Held On February 2nd Week

ಹೇಗಿರಲಿದೆ ಹರಾಜು ಪ್ರಕ್ರಿಯೆ

ಮಹಿಳಾ ಐಪಿಎಲ್‌ಗಾಗಿ ಡ್ರಾಫ್ಟ್ ಮಾದರಿಯಲ್ಲಿ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದರೂ ಪುರುಷರ ಐಪಿಎಲ್ ಶೈಲಿಯ ಹರಾಜನ್ನು ಬಿಸಿಸಿಐ ಅಂತಿಮಗೊಳಿಸಿದೆ. ಅದರಂತೆ ಪುರುಷರ ಐಪಿಎಲ್‌ಗಾಗಿ ಹರಾಜು ನಡೆದ ಮಾದರಿಯಲ್ಲೇ ಮಹಿಳಾ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಆಟಗಾರರಿಗೆ 50, 40, 30, 20 ಮತ್ತು 10 ಲಕ್ಷ ರುಪಾಯಿಗಳನ್ನು ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಪ್ರತಿ ತಂಡ 12 ಕೋಟಿ ರುಪಾಯಿ ಪರ್ಸ್ ಹೊಂದಿದ್ದಿ, ಇದರಲ್ಲಿ ಆಟಗಾರರನ್ನು ಖರೀದಿಸಬೇಕಾಗಿದೆ. ಪ್ರತಿ ತಂಡಗಳು 15 ರಿಂದ 18 ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.

ಈಗಾಗಲೇ ಅಂತಾರಾಷ್ಟ್ರೀಯ ಆಟಗಾರರಿಗೆ 50, 40 ಮತ್ತು 30 ಲಕ್ಷ ರುಪಾಯಿ ಮೂಲ ಬೆಲೆ ನಿಗದಿಪಡಿಸಲಾಗಿದೆ. ಅನ್‌ಕ್ಯಾಪ್ಡ್ ಆಟಗಾರರಿಗೆ 20 ಮತ್ತು 10 ಲಕ್ಷ ರುಪಾಯಿ ಮೂಲಬೆಲೆ ನಿಗದಿಪಡಿಸಲಾಗಿದೆ.

Womens Premier League 2023: Players Auction Will Be Held On February 2nd Week

5 ವಿದೇಶಿ ಆಟಗಾರರಿಗೆ ಅವಕಾಶ

ಸುಮಾರು 150 ಆಟಗಾರರು ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಲಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 5 ವಿದೇಶಿ ಆಟಗಾರರು ಪ್ಲೇಯಿಂಗ್‌ನಲ್ಲಿ ಆಡಬಹುದು ಎಂದು ಬಿಸಿಸಿಐ ತಿಳಿಸಿದೆ. ನಾಲ್ಕು ಆಟಗಾರರು ವಿದೇಶಿ ತಂಡಗಳಿಂದ ಬಂದರೆ, ಒಬ್ಬ ಆಟಗಾರ್ತಿ ಮಾತ್ರ ಸಹವರ್ತಿ ರಾಷ್ಟ್ರದವರಾಗಿರಬೇಕಿದೆ.

ಮಹಿಳಾ ಪ್ರೀಮಿಯರ್ ಲೀಗ್‌ ಪ್ರಸಾರದ ಹಕ್ಕುಗಳನ್ನು ವೈಯಾಕಾಮ್ 18 ಬರೋಬ್ಬರಿ 951 ಕೋಟಿ ರುಪಾಯಿ ನೀಡಿ ಖರೀದಿ ಮಾಡಿದೆ.

Story first published: Saturday, January 28, 2023, 14:18 [IST]
Other articles published on Jan 28, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X