ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ವಾರ್ನರ್ ಸ್ಫೋಟಕ ಶತಕ ವ್ಯರ್ಥ, ದಕ್ಷಿಣ ಆಫ್ರಿಕಾಕ್ಕೆ ರೋಚಕ ಜಯ

World cup 2019: Australia vs South Africa, Match 45 - Live Score

ಮ್ಯಾಂಚೆಸ್ಟರ್, ಜುಲೈ 6: ಡೇವಿಡ್ ವಾರ್ನರ್ ಸ್ಫೋಟಕ ಶಕತ ಮತ್ತು ಅಲೆಕ್ಸ್ ಕ್ಯಾರಿಯ ಬಿರುಸಿನ ಅರ್ಧಶತಕದ ಹೊರತಾಗಿಯೂ ಶನಿವಾರ (ಜುಲೈ 6) ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 10 ರನ್ ರೋಚಕ ಗೆಲುವನ್ನಾಚರಿಸಿದೆ. ನಾಯಕ ಫಾ ಡು ಪ್ಲೆಸಿಸ್ ಶತಕ, ಕ್ವಿಂಟನ್ ಡಿ ಕಾಕ್, ರಾಸ್ಸಿ ವ್ಯಾನ್ ಡೆರ್ ಡುಸೆನ್ ಅರ್ಧಶತಕದಿಂದ ಪ್ರೋಟಿಯಾಸ್ ರೋಮಾಂಚಕ ಜಯ ಗಳಿಸಿತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾಕ್ಕೆ ಆರಂಭಿಕ ಬ್ಯಾಟ್ಸ್ಮನ್ ಡಿ ಕಾಕ್ 52, ಏಡನ್ ಮಾರ್ಕ್ರಮ್ 34, ಡು ಪ್ಲೆಸಿಸ್ 100, ಡುಸೆನ್ 95 ರನ್ ಬಾರಿಸಿದ್ದರಿಂದ ಆಫ್ರಿಕಾ 50 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 325 ರನ್ ಗಳಿಸಿತು.

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ಜುಲೈ 6, Live ಸ್ಕೋರ್‌ಕಾರ್ಡ್

1
43688

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಡೇವಿಡ್ ವಾರ್ನರ್ 122, ಅಲೆಕ್ಸ್ ಕ್ಯಾರಿ 85, ಮಾರ್ಕಸ್ ಸ್ಟೋಯ್ನಿಸ್ 22 ರನ್ ಸೇರಿಸಿದ್ದು ಬಿಟ್ಟರೆ ಉಳಿದ ಯಾರೂ 20 ರನ್‌ಗಿಂತಲೂ ಹೆಚ್ಚು ರನ್ ಗಳಿಸದಿದ್ದುದು ಹಿನ್ನಡೆಗೆ ಕಾರಣವಾಯ್ತು. ಆಸ್ಟ್ರೇಲಿಯಾ 49.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 315 ರನ್ ಬಾರಿಸಿ ಶರಣಾಯಿತು.

ವಿಶ್ವಕಪ್: ಸಚಿನ್ ತೆಂಡೂಲ್ಕರ್ ಅಪರೂಪದ ದಾಖಲೆ ಸರಿದೂಗಿಸಿದ ರೋಹಿತ್ವಿಶ್ವಕಪ್: ಸಚಿನ್ ತೆಂಡೂಲ್ಕರ್ ಅಪರೂಪದ ದಾಖಲೆ ಸರಿದೂಗಿಸಿದ ರೋಹಿತ್

ಆಸೀಸ್ ಇನ್ನಿಂಗ್ಸ್ ವೇಳೆ ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡ 3, ಡ್ವೇನ್ ಪ್ರೆಟೋರಿಯಸ್ ಮತ್ತು ಆಂಡಿಲೆ ಫೆಹ್ಲುಕ್ವಾಯೊ 2 ವಿಕೆಟ್ ಪಡೆದು ಗಮನ ಸೆಳೆದರು. ಡು ಪ್ಲೆಸಿಸ್ ಪಂದ್ಯಶ್ರೇಷ್ಠರೆನಿಸಿದರು. ಈ ಪಂದ್ಯದ ಬಳಿಕ ಅಂಕಪಟ್ಟಿಯ ಅಗ್ರ ನಾಲ್ಕು ಸ್ಥಾನಗಳ ಆಧಾರದಲ್ಲಿ ಸೆಮಿಫೈನಲ್‌ನಲ್ಲಿ ಭಾರತ-ನ್ಯೂಜಿಲೆಂಡ್, ಇಂಗ್ಲೆಂಡ್-ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೇಸನ್ ಬೆಹ್ರೆಂಡೋರ್ಫ್, ನಾಥನ್ ಲಿಯಾನ್.

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆ), ಐಡೆನ್ ಮಾರ್ಕ್ರಮ್, ಫಾಫ್ ಡು ಪ್ಲೆಸಿಸ್ (ಸಿ), ರಾಸ್ಸಿ ವಾನ್ ಡೆರ್ ಡುಸೆನ್, ಜೀನ್-ಪಾಲ್ ಡುಮಿನಿ, ಡ್ವೇನ್ ಪ್ರಿಟೋರಿಯಸ್, ಆ್ಯಂಲೆ ಫೆಹ್ಲಕ್ವಾಯೊ, ಕ್ರಿಸ್ ಮೋರಿಸ್, ಕಾಗಿಸೊ ರಬಾಡಾ, ಇಮ್ರಾನ್ ತಾಹಿರ್, ತಬ್ರೇಜ್ ಶಮ್ಸಿ.

{headtohead_cricket_1_6}

Story first published: Sunday, July 7, 2019, 7:41 [IST]
Other articles published on Jul 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X