ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಓಟಕ್ಕೆ ಬ್ರೇಕ್‌ ಹಾಕಿದ ಇಂಗ್ಲೆಂಡ್‌ಗೆ ಸೆಮೀಸ್‌ ಕನಸು ಜೀವಂತ

ICC World Cup 2019 : ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿದ್ದಾರೆ ಆಂಗ್ಲರು..!
World Cup 2019 Live: India vs England, Match-38

ಬರ್ಮಿಂಗ್‌ಹ್ಯಾಮ್‌, ಜೂನ್‌ 30: ಪ್ರಸಕ್ತ ವಿಶ್ವಕಪ್‌ ಟೂನರ್ನಿಯಲ್ಲಿ ತನ್ನ ಪಾಲಿಗೆ ಪ್ರಿ ಕ್ವಾರ್ಟರ್‌ಫೈನಲ್‌ ಪಂದ್ಯವಾಗಿದ್ದ ಹಣಾಹಣಿಯಲ್ಲಿ ಅಜೇಯ ಭಾರತವನ್ನು 31 ರನ್‌ಗಳಿಂದ ಮಣಿಸುವಲ್ಲಿ ಯಶಸ್ವಿಯಾದ ಆತಿಥೇಯ ಇಂಗ್ಲೆಂಡ್‌ ತಂಡ ಪ್ರಶಸ್ತಿ ರೇಸ್‌ನಲ್ಲಿ ಉಳಿದುಕೊಂಡಿದೆ.

ವಿಶ್ವಕಪ್‌: ಭಾರತ-ಇಂಗ್ಲೆಂಡ್‌ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

1
43681

ಇಲ್ಲಿನ ಎಡ್‌ಬಾಸ್ಟನ್‌ ಕ್ರೀಡಾಂಗಣದಲ್ಲಿಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ತನ್ನ ಪಾಲಿನ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 337 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 306 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಟೂರ್ನಿಯಲ್ಲಿ ಮೊದಲ ಸೋಲಿನ ಆಘಾತಕ್ಕೆ ಒಳಗಾಯಿತು. ಇಂಗ್ಲೆಂಡ್‌ ತಂಡದ ಜಯದೊಂದಿಗೆ ಶ್ರೀಲಂಕಾದ ಸೆಮಿಫೈನಲ್ಸ್‌ ಹಾದಿ ಮುಚ್ಚಿದೆ. ಕೇವಲ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿಗೆ ಇಂಗ್ಲೆಂಡ್‌ ಹೊರತಾಗಿ ಸೆಮಿಫೈನಲ್ಸ್‌ ತಲುಪುವ ಅವಕಾಶವಿದೆ.

ಟೀಮ್‌ ಇಂಡಿಯಾ ಪರ ಆರಂಭದಲ್ಲಿ ಆಮೆ ಗತಿಯಲ್ಲಿ ಬ್ಯಾಟಿಂಗ್‌ ನಡೆಸಿದ ರೋಹಿತ್‌ ಶರ್ಮಾ ಬಳಿಕ ತಮ್ಮ ಲಯ ಕಂಡುಕೊಂಡು 109 ಎಸೆತಗಳಲ್ಲಿ 15 ಫೋರ್‌ಗಳನ್ನು ಒಳಗೊಂಡ 102 ರನ್‌ಗಳ ಅಮೋಘ ಶತಕ ದಾಖಲಿಸಿದರಾದರೂ ತಂಡಕ್ಕೆ ಜಯ ತಂದುಕೊಡಲಾಗಲಿಲ್ಲ. ನಾಯಕ ವಿರಾಟ್‌ ಕೊಹ್ಲಿ ಕೂಡ 76 ಎಸೆತಗಳಲ್ಲಿ 66 ರನ್‌ಗಳ ಅರ್ಧಶತಕ ದಾಖಲಿಸಿದರು. ಇಂಗ್ಲೆಂಡ್‌ ಪರ ಲಿಯಾಮ್‌ ಪ್ಲಂಕೆಟ್‌ (55ಕ್ಕೆ 3) ಯಶಸ್ವಿ ಬೌಲರ್‌ ಎನಿಸಿದ್ದರು.

ಇದಕ್ಕೂ ಮುನ್ನ ಇಂಗ್ಲೆಂಡ್‌ ಪರ ಇನಿಂಗ್ಸ್‌ ಆರಂಭಿಸಿದ ಜೇಸನ್‌ ರಾಯ್‌ ಮತ್ತು ಜಾನಿ ಬೈರ್‌ಸ್ಟೋವ್‌ ತಲಾ ಅರ್ಧಶತಕಗಳೊಂದಿಗೆ ಹಾಗೂ ಮೊದಲ ವಿಕೆಟ್‌ಗೆ ಶತಕದ ಜೊತೆಆಟದ ಮೂಲಕ ತಂಡದ ಬೃಹತ್‌ ಮೊತ್ತಕ್ಕೆ ಬೇಕಾದ ಭದ್ರ ಬುನಾದಿ ಹಾಕಿಕೊಟ್ಟರು. ಅಲ್ಲದೆ ಟೀಮ್‌ ಇಂಡಿಯಾದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ಮಿಂಚಿನ ಆಟವಾಡಿದ ಜಾನಿ ಬೈರ್‌ ಸ್ಟೋವ್‌, 109 ಎಸೆತಗಳಲ್ಲಿ 10 ಫೋರ್‌ ಮತ್ತು 6 ಸಿಕ್ಸರ್‌ಗಳನ್ನು ಒಳಗೊಂಡ 111 ರನ್‌ಗಳನ್ನು ಚೆಚ್ಚಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಜೇಸನ್‌ ರಾಯ್‌ 57 ಎಸೆತಗಳಲ್ಲಿ 66 ರನ್‌ಗಳನ್ನು ಗಳಿಸಿದರು. ಇನಿಂಗ್ಸ್‌ ಅಂತ್ಯದಲ್ಲಿ ಭಾರತೀಯ ಬೌಲರ್‌ಗಳನ್ನು ಬೆಂಡೆತ್ತಿದ ಬೆನ್‌ ಸ್ಟೋಕ್ಸ್‌ 54 ಎಸೆತಗಳಲ್ಲಿ 6 ಫೋರ್‌ ಮತ್ತು 3 ಸಿಕ್ಸರ್‌ಗಳ ಸಹಿತ 79 ರನ್‌ಗಳನ್ನು ದಾಖಲಿಸಿದರು. ಮೊಹಮ್ಮದ್‌ ಶಮಿ 69 ರನ್‌ಗಳನ್ನು ಬಿಟದ್ಟುಕೊಟ್ಟರೂ 5 ವಿಕೆಟ್‌ ಪಡೆದರು. ಈ ಮೂಲಕ ಸತತ 3 ಪಂದ್ಯಗಳಲ್ಲಿ 4+ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

ಭಾರತ ತಂಡ ಭಾನುವಾರ ಕೊನೆಗೂ ಅಗತ್ಯದ ಬದಲಾವಣೆ ತಂದುಕೊಂಡು ಬ್ಯಾಟಿಂಗ್‌ ಬಲ ಹೆಚ್ಚಿಸಿಕೊಂಡಿದ್ದು, ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರ ಬದಲಾಗಿ ರಿಷಭ್‌ ಪಂತ್‌ಗೆ ಅವಕಾಶ ನೀಡಿದೆ. ಇಂಗ್ಲೆಂಡ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ ಆಡುವವ 11ರ ಬಳಗಕ್ಕೆ ಮರಳಿದ್ದಾರೆ.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 337/7 (ಜೇಸನ್‌ ರಾಯ್‌ 66, ಜಾನಿ ಬೈರ್‌ಸ್ಟೋವ್‌ 111, ಬೆನ್‌ ಸ್ಓಕ್ಸ್‌ 79; ಮೊಹಮ್ಮದ್‌ ಶಮಿ 69ಕ್ಕೆ 5, ಜಸ್‌ಪ್ರೀತ್‌ ಬುಮ್ರಾ 44ಕ್ಕೆ 1).

ಭಾರತ: 50 ಓವರ್‌ಗಳಲ್ಲಿ 306/5 (ರೋಹಿತ್‌ ಶರ್ಮಾ 102, ವಿರಾಟ್‌ ಕೊಹ್ಲಿ 66, ಹಾರ್ದಿಕ್‌ ಪಾಂಡ್ಯ 45, ಎಂ.ಎಸ್‌ ಧೋನಿ ಔಟಾಗದೆ 42; ಲಿಯಾಮ್‌ ಪ್ಲಂಕೆಟ್‌ 55ಕ್ಕೆ 3).

ತಂಡಗಳ ವಿವರ

ಭಾರತ (ಪ್ಲೇಯಿಂಗ್‌ 11): ರೋಹಿತ್‌ ಶರ್ಮಾ, ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಯುಜ್ವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌ (ಪ್ಲೇಯಿಂಗ್‌ 11): ಜೇಸನ್‌ ರಾಯ್‌, ಜಾನಿ ಬೈರ್‌ಸ್ಟೋವ್‌, ಜೋ ರೂಟ್‌, ಐಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌(ವಿಕೆಟ್‌ಕೀಪರ್‌), ಕ್ರಿಸ್‌ ವೋಕ್ಸ್‌, ಲಿಯಾಮ್‌ ಪ್ಲಂಕೆಟ್‌, ಆದಿಲ್‌ ರಶೀದ್‌, ಜೋಫ್ರ ಆರ್ಚರ್‌, ಮಾರ್ಕ್‌ ವುಡ್‌.

{headtohead_cricket_3_2}

Story first published: Sunday, June 30, 2019, 23:40 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X