ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಭಾರತಕ್ಕೆ ವಿಂಡೀಸ್ ಮೊದಲ ಎದುರಾಳಿ

By Mahesh
ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ವಿಂಡೀಸ್ ಮೊದಲ ಎದುರಾಳಿ | FIlmibeat Kannada
World Test Championship: India face West Indies in the opener

ಬೆಂಗಳೂರು, ಜೂನ್ 20: ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಆಯೋಜನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದಾಗಿದೆ. 2018-2023ರ ತನಕ ನಡೆಯಲಿರುವ ಈ ಚಾಂಪಿಯನ್ ಶಿಪ್ ನ ಆರಂಭಿಕ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಎದುರಿಸಲಿದೆ ಎಂದು ಐಸಿಸಿ, ಬುಧವಾರ(ಜೂನ್ 20)ದಂದು ಪ್ರಕಟಿಸಿದೆ.

ವಿಶ್ವ ಚಾಂಪಿಯನ್ ಶಿಪ್ ಅಂಗವಾಗಿ ಕೆರಿಬಿಯನ್ ಪ್ರವಾಸದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ. ಒಟ್ಟಾರೆ 9 ಟಾಪ್ ಶ್ರೇಯಾಂಕ ಹೊಂದಿರುವ ತಂಡಗಳು, ಈ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿವೆ. ಜುಲೈ 15, 2019ರಿಂದ ಏಪ್ರಿಲ್ 30, 2021ರ ತನಕ ಟೂರ್ನಮೆಂಟ್ ನಡೆಯಲಿದೆ.

2019ರ ವಿಶ್ವಕಪ್ ಏಕದಿನ ಪಂದ್ಯಾವಳಿ ನಂತರ ವೆಸ್ಟ್ ಇಂಡೀಸ್ ಸರಣಿ ಆರಂಭವಾಗಲಿದೆ. ಟೆಸ್ಟ್ ಪಂದ್ಯವಲ್ಲದೆ, 3 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳು ನಿಗದಿಯಾಗಿವೆ. ವರ್ಷಾಂತ್ಯಕ್ಕೆ ಭಾರತ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ತಂಡವು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯ ಮತ್ತು 3 ಟಿ20ಐ ಪಂದ್ಯಗಳನ್ನಾಡಲಿದೆ.

ಭಾರತದ ಎರಡನೇ ಎದುರಾಳಿಯಾಗಿ ದಕ್ಷಿಣ ಆಫ್ರಿಕಾ ತಂಡವಿದ್ದು, ಮೂರು ಟೆಸ್ಟ್ ಪಂದ್ಯಗಳನ್ನಾಡಲಿದೆ. ನಂತರ ಬಾಂಗ್ಲಾ ವಿರುದ್ಧ 2 ಟೆಸ್ಟ್, 3 ಟಿ20ಐ ಪಂದ್ಯವಾಡಲಿದೆ.

ವಿಶ್ವ ಚಾಂಪಿಯನ್ ಸರಣಿಯಲ್ಲಿ ನಂತರ 2020-2021 ವಿರುದ್ಧ ನ್ಯೂಜಿಲೆಂಡ್(2), ಆಸ್ಟ್ರೇಲಿಯಾ (4) ಹಾಗೂ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ನಿಗದಿಯಾಗಿದೆ.

Story first published: Wednesday, June 20, 2018, 23:39 [IST]
Other articles published on Jun 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X