ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಮಾತ್ರಕೆ ಯುವಿ ಆಟ ನಿಲ್ಲಿಸಿಲ್ಲ!

Yuvraj likely to get BCCI’s approval for participation in overseas T20 leagues

ನವದೆಹಲಿ, ಜೂನ್ 10: ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ ನಿಜ. ಆದರೆ ಯುವಿ ಆಟ ಇಲ್ಲಿಸಿಲ್ಲ. ವಿದೇಶಿ ಟಿ20 ಲೀಗ್‌ಗಳಲ್ಲಿ ಯುವಿ ಇನ್ನೊಂದಿಷ್ಟು ಕಾಲ ಬ್ಯಾಟ್ ಬೀಸಲಿದ್ದಾರೆ. ಬಿಸಿಸಿಐನಿಂದ ಇದಕ್ಕೆ ಅನುಮತಿಯೂ ಪಡೆದುಕೊಳ್ಳಲಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೇನೆ. ಆದರೆ ಈ ಬಗ್ಗೆ ಮುಂದೆ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಯುವರಾಜ್ ಈ ಮೊದಲೇ ಹೇಳಿದ್ದರು. ಆಗ ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದರೂ ವಿದೇಶಿ ಟಿ20 ಲೀಗ್‌ಗಳಲ್ಲಿ ಸ್ವತಂತ್ರವಾಗಿ ಭಾಗವಹಿಸಲು ಯೋಚಿಸಿದ್ದೇನೆ ಎಂದೂ ಹೇಳಿಕೊಂಡಿದ್ದರು. ನಿವೃತ್ತ ಘೋಷಿಸಿದಾಗಲೂ ಯುವಿ ಇದನ್ನೇ ಪುನರುಚ್ಛರಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ 'ಸಿಕ್ಸ್‌ ಕಿಂಗ್‌'ನ ಕಡೇ ಮಾತುಗಳುಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ 'ಸಿಕ್ಸ್‌ ಕಿಂಗ್‌'ನ ಕಡೇ ಮಾತುಗಳು

ಬಿಸಿಸಿಯಲ್ಲಿ ನೋಂದಾಯಿಸಲ್ಪಟ್ಟಿರುವ ಸಕ್ರಿಯ ಆಟಗಾರರು ವಿದೇಶಿ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಯುವಿ ವಿದೇಶಿ ಟಿ20 ಲೀಗ್‌ಗಳಲ್ಲಿ ಭಾಗವಹಿಸುವ ಇಂಗಿತ ಹೊಂದಿದ್ದರು. ಇದೇ ಕಾರಣಕ್ಕೆ ಯುವರಾಜ್ ನಿವೃತ್ತಿ ಘೋಷಿಸಿ ಬಿಸಿಸಿಐ ಬಂಧನ ಬಿಡಿಸಿಕೊಂಡಿದ್ದಾರೆ ಎಂಬ ಮಾತುಗಳೂ ಕ್ರಿಕೆಟ್ ವಲಯದಲ್ಲಿ ಕೇಳಿಬಂದಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಗುಡ್ ಬೈಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಗುಡ್ ಬೈ

ಜೂನ್ 10ರಂದು ನಿವೃತ್ತಿ ಘೋಷಿಸುತ್ತ ಯುವಿ, 'ಖುಷಿಗೋಸ್ಕರ ಸ್ವತಂತ್ರವಾಗಿ ವಿದೇಶಿ ಟಿ20 ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಬಯಸಿದ್ದೇನೆ' ಎಂದಿದ್ದರು. 23 ಅಕ್ಟೋಬರ್‌ನಿಂದ 3 ನವೆಂಬರ್ ವರೆಗೆ ಯುಎಇಯಲ್ಲಿ ನಡೆಯಲಿರುವ 2019ರ ಟಿ10 ಲೀಗ್‌ನಲ್ಲಿ ಭಾಗವಹಿಸಲು ವೀರೇಂದ್ರ ಸೆಹ್ವಾಗ್ ಮತ್ತು ಝಹೀರ್ ಖಾನ್ ಈಗಾಗಲೇ ಬಿಸಿಸಿಐನಿಂದ ಅನುಮತಿ ಪಡೆದುಕೊಂಡಿದ್ದಾರೆ. ಯುವಿಗೂ ಅನುಮತಿ ಲಭಿಸುವ ನಿರೀಕ್ಷೆಯಿದೆ.

Story first published: Monday, June 10, 2019, 18:31 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X