ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಕ್ಕೆ ಯುವರಾಜ್ ಆಯ್ಕೆಯಾದಾಗ ಹೇಗಿದ್ದರು ಗೊತ್ತಾ?!

ಯುವರಾಜ್ ಸಿಂಗ್ 2000 ನಲ್ಲಿ ಹೇಗಿದ್ರು ಗೊತ್ತಾ..? | Oneindia Kannada
Yuvraj Singh Shares Throwback Picture With Rahul Dravid, Vijay Dahiya

ನವದೆಹಲಿ, ಅಕ್ಟೋಬರ್ 3: ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ತನ್ನ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 2000ನೇ ಇಸವಿಯ ಫೋಟೋವಿದು. ಯುವಿ ಪಾಲಿಗೆ ಈ ಭಾವಚಿತ್ರ ತುಂಬಾ ವಿಶೇಷವಾದುದು. ಯಾಕೆಂದರೆ ಯುವಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಕ್ಕೆ ಸಾಕ್ಷಿ ಹೇಳುವ ಚಿತ್ರ ಇದೇ.

ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!

ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು 2000ರಲ್ಲಿ ನೈರೋಬಿಯಲ್ಲಿ ನಡೆದಿದ್ದ ಐಸಿಸಿ ನಾಕೌಟ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ. ಆ ಟೂರ್ನಿಯಲ್ಲಿ ಭಾರತ ಫೈನಲ್‌ಗೆ ಆಯ್ಕೆಯಾಗಿತ್ತು. ಆದರೆ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಪರಾಭವಗೊಂಡಿತ್ತು.

ಪ್ರೊ ಕಬಡ್ಡಿ: ಪವನ್ ದಾಖಲೆ ರೈಡ್, ಸ್ಟೀಲರ್ಸ್‌ಗೆ ಗುದ್ದಿದ ಬೆಂಗಳೂರು ಬುಲ್ಸ್!ಪ್ರೊ ಕಬಡ್ಡಿ: ಪವನ್ ದಾಖಲೆ ರೈಡ್, ಸ್ಟೀಲರ್ಸ್‌ಗೆ ಗುದ್ದಿದ ಬೆಂಗಳೂರು ಬುಲ್ಸ್!

ಅಂದು ಫೈನಲ್‌ನಲ್ಲಿ ಭಾರತ ಸೋತಿತಾದರೂ ಆ ಟೂರ್ನಿಯಲ್ಲಿ ಭಾರತ ತಂಡ ಯುವರಾಜ್ ಮತ್ತು ಝಹೀರ್ ಖಾನ್ ಎಂಬ ಇಬ್ಬರು ಅಧ್ಬುತ ಪ್ರತಿಭೆಗಳನ್ನು ಕ್ರಿಕೆಟ್‌ ಜಗತ್ತಿಗೆ ಪರಿಚಯಿಸಿತ್ತು. ಆ ದಿನಗಳನ್ನು ಸ್ಮರಿಸಿ ಯುವಿ ಮಾಡಿರುವ ಈ ಫೋಟೋದಲ್ಲಿ ಯುವಿ, ರಾಹುಲ್ ದ್ರಾವಿಡ್ ಮತ್ತು ವಿಜಯ್ ದಹಿಯಾ ಅವರನ್ನು ಆಗಿನ ಟೀಮ್ ಇಂಡಿಯಾ ಫಾರ್ಮಲ್ಸ್‌ನಲ್ಲಿ ನೋಡಬಹುದು.

ಅಂದ್ಹಾಗೆ ಯುವಿ ಆವತ್ತು ಕೀನ್ಯಾ ಎದುರು ಪಾದಾರ್ಪಣೆ ಮಾಡಿದ್ದರಾದರೂ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದ್ದು ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ. ಆಗಿನ್ನು 19ರ ಹರೆಯಕ್ಕೆ ಕಾಲಿರಿಸುವುದರಲ್ಲಿದ್ದ ಸಿಕ್ಸರ್ ಕಿಂಗ್, 46 ಎಸೆತಗಳಿಗೆ 50 ರನ್ ಬಾರಿಸಿದ್ದರು. ಇದರಲ್ಲಿ 12 ಬೌಂಡರಿಗಳೂ ಸೇರಿದ್ದವು. ಈ ಪಂದ್ಯವನ್ನು ಭಾರತ 20 ರನ್‌ಗಳಿಂದ ಗೆದ್ದುಕೊಂಡಿತ್ತು.

Story first published: Thursday, October 3, 2019, 15:26 [IST]
Other articles published on Oct 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X