ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: ಕೇರಳ ಬ್ಲಾಸ್ಟರ್ಸ್ ವಿರುದ್ದ ಚೆನ್ನೈಯಿನ್ ಕಾದಾಟ

Anyone but them: Chennaiyin, Kerala lock horns in crunch tie

ಚೆನ್ನೈ, ನವೆಂಬರ್ 29: ಉನ್ನತ ಮಟ್ಟಕ್ಕೇರುವುದು ಕಷ್ಟವಲ್ಲ, ಆದರೆ ಆ ಸ್ಥಾನವನ್ನು ಕಾಯ್ದುಕೊಳ್ಳುವುದು ಬಹಳ ಕಷ್ಟದ ಕೆಲಸ. ತಾವು ಗೆದ್ದಿರುವ ಪ್ರಶಸ್ತಿ ಅದಕ್ಕೂ ಮುನ್ನ ಇತರರು ಗೆದ್ದಿರುವ ಪ್ರಶಸ್ತಿಯನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ಚೆನ್ನೆಯಿನ್ ತಂಡಕ್ಕೆ ಮನದಟ್ಟಾಗಿದೆ. ಚೆನ್ನೆಯಿನ್ ತಂಡವು ಈ ಬಾರಿ ಪ್ಲೆ ಆಫ್ ಹಂತ ಕಳೆದುಕೊಳ್ಳುವ ಅಪಾಯದಲ್ಲಿದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022342

ಗುರುವಾರ (ನವೆಂಬರ್ 29) ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ದಕ್ಷಿಣದ ಎದುರಾಳಿ ಕೇರಳ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಚೆನ್ನೆಯಿನ್ ತಂಡದ ಮುಂದಿನ ಹಂತದ ಸ್ಪಷ್ಟ ಚಿತ್ರಣವೊಂದು ಸಿಗಲಿದೆ. ಪ್ರಶಸ್ತಿ ಉಳಿಸಿಕೊಳ್ಳುವ ಮಾತನ್ನು ದೂರ ಇಟ್ಟು ಈಗ ಪ್ಲೇ ಆಫ್ ಬಗ್ಗೆ ಮಾತನಾಡಬೇಕಾದ ಅನಿವಾರ್ಯತೆ ಚೆನ್ನೈ ತಂಡಕ್ಕೆ. ಆಡಿರುವ ಎಂಟು ಪಂದ್ಯಗಳಲ್ಲಿ ಚೆನ್ನೈಯಿನ್ ತಂಡ ಒಂದು ಜಯ ಹಾಗೂ ಒಂದು ಡ್ರಾದೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಗುರುವಾರ ಕೇರಳ ವಿರುದ್ಧ ಸೋತರೆ ಜಾನ್ ಗ್ರೆಗೋರಿ ತಂಡದ ಪ್ಲೇ ಆ್ ಕನಸು ನುಚ್ಚು ನೂರಾಗಲಿದೆ.

ಕಳೆದ ಋತುವಿನಲ್ಲಿ ಬೆಂಗಳೂರು ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದ ತಂಡವೇ ಈಗ ಆಡುತ್ತಿದೆಯಾ ಎಂಬ ರೀತಿಯಲ್ಲಿ ಚಾಂಪಿಯನ್ ತಂಡ ನೀರಸ ಪ್ರದರ್ಶನ ತೋರುತ್ತಿದೆ. ಡಿಫೆನ್ಸ್‌ಗೆ ಹೆಸರಾಗಿದ್ದ ತಂಡ ಈಗಾಗಲೇ 16 ಗೋಲುಗಳನ್ನು ನೀಡಿದೆ. ಕಳೆದ ಋತುವಿನಲ್ಲಿ ಏಳು ಗೋಲುಗಳ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಜೆಜೆ ಲಾಲ್‌ಪೆಖ್ಲುವಾ ಈ ಬಾರಿ ಇನ್ನೂ ಖಾತೆ ತೆರೆಯಬೇಕಾಗಿದೆ.

ಅಭಿಮಾನಿಗಳು ನಿರಾಸೆಗೊಳಗಾಗಿದ್ದರು

ಅಭಿಮಾನಿಗಳು ನಿರಾಸೆಗೊಳಗಾಗಿದ್ದರು

'ನಮಗೆ ನಾಳೆಯ ಪಂದ್ಯದಲ್ಲಿ ಮೂರು ಅಂಕಗಳನ್ನು ಗಳಿಸಬೇಕಾಗಿದೆ. ನಮ್ಮ ಫುಟ್ಬಾಲ್ ಅಭಿಮಾನಿಗಳಿಗೆ ನಾಳೆಯ ಪಂದ್ಯ ಎಷ್ಟು ಪ್ರಮುಖವಾದುದು ಎಂಬುದನ್ನು ಆಟಗಾರರು ಅರಿತು ಆಡಬೇಕು. ಬೆಂಗಳೂರು ತಂಡದ ವಿರುದ್ಧ ಸೋಲನುಭವಿಸಿದಾಗಾಲೇ ನಮ್ಮ ಅಭಿಮಾನಿಗಳು ನಿರಾಸೆಗೊಳಗಾಗಿದ್ದರು. ನಾವು ಕೇರಳ ವಿರುದ್ಧ ಜಯ ಗಳಿಸಿ ಮತ್ತೆ ಜಯದ ಹಾದಿ ಹಿಡಿಯಬೇಕು' ಎಂದು ಗ್ರೆಗೋರಿ ಹೇಳಿದರು.
ತಂಡದ ಚಾಂಪಿಯನ್ ಪಟ್ಟ ಗೆದ್ದಾಗ ಇದ್ದ ಆಟಗಾರರೇ ಈಗ ತಂಡದಲ್ಲಿದ್ದಾರೆ. ಆದರೂ ಹೆಚ್ಚಿನ ಪಂದ್ಯಗಳಲ್ಲಿ ಸೋತಿರುವುದಕ್ಕೆ ಆಟಗಾರರು ಪ್ರಮಾದವೇ ಕಾರಣ ಎಂದು ಕೋಚ್ ಆರೋಪಿಸಿದ್ದಾರೆ.
'ಹೆಚ್ಚಿನ ನಮ್ಮ ಆಟಗಾರರು ಕಳೆದವರ್ಷದವರೇ. ಆದರೆ ಈ ಬಾರಿ ನಮ್ಮ ಆಟಗಾರರು ಉತ್ತಮವಾಗಿ ಪ್ರದರ್ಶನ ತೋರಿಲ್ಲ. ಆಟಗಾರರು ಯಾವದೇ ಪ್ರಮಾದವನ್ನು ಮಾಡಬಾರದು ಎಂಬ ನಿರೀಕ್ಷೇ ಇರುತ್ತದೆ' ಎಂದು ಗ್ರೆಗೋರಿ ಹೇಳಿದರು.

ಉತ್ತಮ ಪ್ರದರ್ಶನ ತೋರಿಲ್ಲ

ಉತ್ತಮ ಪ್ರದರ್ಶನ ತೋರಿಲ್ಲ

ಕೇರಳ ಬ್ಲಾಸ್ಟರ್ಸ್ ಕೂಡ ಈ ಬಾರಿ ಉತ್ತಮ ಪ್ರದರ್ಶನ ತೋರಿಲ್ಲ. ಎಟಿಕೆ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಕೇರಳ ಇದುವರೆಗೂ ಜಯ ಗಳಿಸಿರಲಿಲ್ಲ. ತಂಡ ಏಳು ಪಂದ್ಯಗಳಿಂದ ಏಳು ಅಂಕ ಗಳಿಸಿದೆ. ಕೇರಳ ತಂಡ ಗೋಲು ಗಳಿಸುವಲ್ಲಿ ವಿಲವಾಗುತ್ತಿರುವುದು ಗಮನಾರ್ಹ. ನಾರ್ತ್ ಈಸ್ಟ್ ತಂಡದ ವಿರುದ್ಧದ ಪಂದ್ಯದಲ್ಲಿ ಅಂತಿಮ ್ಳಕ್ಷಿಣದಲ್ಲಿ ಗೋಲು ನೀಡಿ ಸೋಲಿಗೆ ಶರಣಾಗಬೇಕಾಯಿತು. 90ನೇ ನಿಮಿಷದವರೆಗೂ ಮೇಲುಗೈ ಸಾಧಿಸಿ ಉಳಿದ ಹೆಚ್ಚುವರಿ ಸಮಯದಲ್ಲಿ ಎರಡು ಗೋಲುಗಳನ್ನು ನೀಡಿ ಸೋತಿತ್ತು.

ಕೊನೆಯ ನಿಮಿಷದ ಆಟ ಮುಖ್ಯ

ಕೊನೆಯ ನಿಮಿಷದ ಆಟ ಮುಖ್ಯ

'ತಂಡದಲ್ಲಿರುವ ಸಮಸ್ಯೆಯ ಬಗ್ಗೆ ಪ್ರತಿಯೊಂದು ದೃಷ್ಟಿಕೋನದಿಂದಲೂ ನೋಡಿರುವೆ. ವಿಶೇಷವಾಗಿ ತಂಡ ಕೊನೆಯ ನಿಮಿಷದಲ್ಲಿ ಹೇಗೆ ಆಡುತ್ತದೆ ಎಂಬುದು ಮುಖ್ಯ. ಮುಂಬೈ ವಿರುದ್ಧದ ಪಂದ್ಯದಲ್ಲಿ ಪ್ರಾಂಜಲ್ ಭೂಮಿಜ್ ಹೊಡೆದ ಗೋಲಿನ ಬಗ್ಗೆ ಹೆಚ್ಚು ಹೇಳಬಯಸುವುದಿಲ್ಲ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆಂಡ್ರಿಜಾ ಆಫ್ ಸೈಡ್‌ನಲ್ಲಿದ್ದರು. ಸಂದೇಶ್ ಜಿಂಗಾನ್ ಗಾಯಗೊಂಡಾಗ ಅದು ಆ್‌ಸೈಡ್ ಆಗಿತ್ತು' ಎಂದು ಕೇರಳದ ಕೋಚ್ ಹೇಳಿದರು.

ತೀರ್ಪು ನಮ್ಮ ಪರವಾಗಿ ಇರಲಿಲ್ಲ

ತೀರ್ಪು ನಮ್ಮ ಪರವಾಗಿ ಇರಲಿಲ್ಲ

ನಾರ್ತ್ ಈಸ್ಟ್ ವಿರುದ್ದದ ಪಂದ್ಯದಲ್ಲಿ ಸಂದೇಶ್‌ಗೆ ವಿರುದ್ಧವಾಗಿ ಪೆನಾಲ್ಟಿ ನೀಡಲಾಗಿತ್ತು. ನಾವು 11ರ ವಿರುದ್ಧ 10 ಆಟಗಾರರ ಆಡಬೇಕಾಯಿತು. ರೆರಿಗಳು ನೀಡಿದ ತೀರ್ಪು ನಮ್ಮ ಪರವಾಗಿ ಇದ್ದಿರಲಿಲ್ಲ, ಎಂದು ಇಂಗ್ಲೆಂಡ್‌ನ ಮಾಜಿ ಗೋಲ್‌ಕೀಪರ್ ಹೇಳಿದರು.

Story first published: Thursday, November 29, 2018, 16:24 [IST]
Other articles published on Nov 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X