ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup: ಸೆನೆಗಲ್ ವಿರುದ್ಧ ಸುಲಭ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್

Fifa World Cup 2022: England Defeat Senegal By 3-0 Goals And Reach Quarter Final

ಸೋಮವಾರ ಅಲ್‌ಬೈತ್ ಕ್ರಿಡಾಂಗಣದಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೆನೆಗಲ್ ವಿರುದ್ಧ 3-0 ಗೋಲುಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ 2022ರ ಫಿಫಾ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದೆ.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಪೊಲೆಂಡ್ ವಿರುದ್ಧ 3-1 ಗೋಲುಗಳ ಜಯ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯಿತು. ಕ್ವಾರ್ಟರ್ ಫೈನಲ್‌ನಲ್ಲಿ ಡಿಸೆಂಬರ್ 10ರಂದು ಇಂಗ್ಲೆಂಡ್ ಮತ್ತು ಫ್ರಾನ್ಸ್ ಮುಖಾಮುಖಿಯಾಗಲಿವೆ.

ಇಂಗ್ಲೆಂಡ್ ಪರವಾಗಿ ಗೋಲು ಗಳಿಸುವ ಮೂಲಕ ಜೋರ್ಡನ್ ಹೆಂಡರ್ಸನ್, ಬುಕಾಯೋ ಸಕಾ ಮತ್ತು ಹ್ಯಾರಿ ಕೇನ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದ ಹೀರೋಗಳೆನಿಸಿಕೊಂಡರು. ಫಿಫಾ ವಿಶ್ವಕಪ್‌ 2022ರ ಆವೃತ್ತಿಯಲ್ಲಿ ಇಂಗ್ಲೆಂಡ್ ಈವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದುವರೆಗೂ 4 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ 12 ಗೋಲುಗಳನ್ನು ಗಳಿಸಿದೆ. ಈ ಮೂಲಕ 2018ರ ಫಿಫಾ ವಿಶ್ವಕಪ್‌ನಲ್ಲಿ ರಷ್ಯಾ ಮಾಡಿದ್ದ ದಾಖಲೆಯನ್ನು ಸಮವಾಗಿಸಿಕೊಂಡಿದೆ.

ನಿಧಾನಗತಿಯಲ್ಲಿ ಆಟವನ್ನು ಆರಂಭಿಸಿದ ಇಂಗ್ಲೆಂಡ್ ನಂತರ ತಮ್ಮ ಲಯವನ್ನು ಕಂಡುಕೊಂಡಿತು. ಆಟ ಆರಂಭವಾದ 38ನೇ ನಿಮಿಷದಲ್ಲಿ ಜೋರ್ಡನ್ ಹೆಂಡರ್ಸನ್ ಮೊದಲ ಗೋಲು ದಾಖಲಿಸುವ ಮೂಲಕ ಇಂಗ್ಲೆಂಡ್ ತಂಡದ ಗೋಲಿನ ಖಾತೆ ತೆರೆದರು. ನಂತರ ಹ್ಯಾರಿ ಕೇನ್ ಮೊದಲಾರ್ಧದ ಅಂತ್ಯಕ್ಕೆ ಕೆಲವೇ ನಿಮಿಷಗಳ ಮೊದಲು ಗೋಲು ಬಾರಿಸುವ ಮೂಲಕ ಇಂಗ್ಲೆಂಡ್ 2-0 ಗೋಲುಗಳ ಮುನ್ನಡೆ ಸಾಧಿಸಿತು.

Fifa World Cup 2022: England Defeat Senegal By 3-0 Goals And Reach Quarter Final

ದ್ವಿತೀಯಾರ್ಧದಲ್ಲಿ ಉತ್ತಮ ಆಟ ಮುಂದುವರೆಸಿದ ಇಂಗ್ಲೆಂಡ್

ದ್ವಿತೀಯಾರ್ಧದಲ್ಲಿ ಕೂಡ ಇಂಗ್ಲೆಂಡ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಸೆನೆಗಲನ್‌ನಲ್ಲಿ ರಕ್ಷಣಾ ಕೋಟೆಯನ್ನು ಛಿದ್ರಗೊಳಿಸುವಲ್ಲಿ ಯಶಸ್ವಿಯಾದ ಬುಕಾಯೋ ಸಕಾ 57ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸಂಭ್ರಮಿಸಿದರು. ಫಿಲ್ ಫೋಡೆನ್ ಎಡಭಾಗದಿಂದ ಪೆನಾಲ್ಟಿ ಪ್ರದೇಶಕ್ಕೆ ನೀಡಿದ ಕ್ರಾಸ್‌ ಅನ್ನು ಸಾಕಾ 10 ಅಡಿಗಳ ಅಂತರದಿಂದ ಗೋಲ್ ಹೊಡೆಯುವಲ್ಲಿ ಯಶಸ್ವಿಯಾದರು.

ಇಂಗ್ಲೆಂಡ್ ರಕ್ಷಣಾ ವಿಭಾಗ ಸೆನೆಗಲ್‌ಗೆ ಒಂದು ಗೋಲನ್ನು ಗಳಿಸಲು ಕೂಡ ಅವಕಾಶ ನೀಡಲಿಲ್ಲ. 1966ರಲ್ಲಿ ಇಂಗ್ಲೆಂಡ್ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 11 ಗೋಲುಗಳನ್ನು ಗಳಿಸಿತ್ತು. ಆ ವರ್ಷ ಅವರು ಚಾಂಪಿಯನ್ ಆಗಿದ್ದರು. ಈ ಬಾರಿ ಕೂಡ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಆದರೆ, ಅದಕ್ಕೂ ಮುನ್ನ ಡಿಸೆಂಬರ್ 10 ಹಾಲಿ ಚಾಂಪಿಯನ್, ಬಲಿಷ್ಠ ಫ್ರಾನ್ಸ್ ವಿರುದ್ಧ ಸೆಣೆಸಲಿದ್ದು, ರೋಚಕ ಹಣಾಹಣಿಯನ್ನು ನೋಡಬಹುದಾಗಿದೆ.

Story first published: Monday, December 5, 2022, 8:50 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X