ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup: ಕೆನಡಾ ವಿರುದ್ಧ ಗೆದ್ದು ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊರೊಕ್ಕೊ

Fifa World Cup 2022: Morocco Beat Canada And Enter To Round of 16

ಹಲವು ಅಚ್ಚರಿಯ ಫಲಿತಾಂಶಗಳನ್ನು ನೀಡುವುದನ್ನು ಫಿಫಾ ವಿಶ್ವಕಪ್ 2022 ಮುಂದುವರೆಸಿದೆ. ಬಲಿಷ್ಠ ಬೆಲ್ಜಿಯಂ, ಕೆನಡಾ ತಂಡಗಳನ್ನು ವಿಶ್ವಕಪ್‌ನಿಂದ ಹೊರದಬ್ಬಿರುವ ಮೊರೊಕ್ಕೊ ಮತ್ತು ಕ್ರೊವೇಷಿಯಾ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

ಫಿಫಾ ವಿಶ್ವಕಪ್ 2022 ರ 16 ರ ರೌಂಡ್‌ಗೆ ಪ್ರವೇಶಿಸಲು ಮೊರೊಕ್ಕೊ ಕೆನಡಾ ವಿರುದ್ಧ 2-1 ಅಂತರದ ವಿಜಯವನ್ನು ಸಾಧಿಸಿತು. ಹಕೀಮ್ ಝಿಯಾಶ್ ಆರಂಭಿಕ ಗೋಲು ಗಳಿಸಿದರೆ, ಯೂಸೆಫ್ ಅಲ್ ನಸೀರಿ ಮತ್ತೊಂದು ಗೋಲು ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲಲು ಸಹಾಯ ಮಾಡಿದರು.

Ind vs Ban: ಢಾಕಾ ತಲುಪಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಸ್ವಾಗತ ಕೋರಿದ ಮಕ್ಕಳುInd vs Ban: ಢಾಕಾ ತಲುಪಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಸ್ವಾಗತ ಕೋರಿದ ಮಕ್ಕಳು

ಈ ಜಯದೊಂದಿಗೆ ಮೊರೊಕ್ಕೊ ಎಫ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ 16 ಘಟ್ಟಕ್ಕೆ ಪ್ರವೇಶ ಪಡೆದರೆ, ಬಲಿಷ್ಠ ಬೆಲ್ಜಿಯಂ ಟೂರ್ನಿಯಿಂದಲೇ ಹೊರ ಬೀಳುವ ಮೂಲಕ ಆಘಾತ ಅನುಭವಿಸಿತು. ಮೊರೊಕ್ಕೊ 3 ಪಂದ್ಯಗಳಿಂದ 7 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು. ಅವರು ಆಡಿರುವ 3 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರು.

ಕ್ರೊವೇಷಿಯಾ 3 ಪಂದ್ಯಗಳಲ್ಲಿ 1 ಗೆಲುವು 2 ಡ್ರಾ ಮೂಲಕ 5 ಅಂಕಗಳನ್ನು ಗಳಿಸಿ ಎಫ್ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ನಾಕೌಟ್ ಹಂತವನ್ನು ಪ್ರವೇಶಿಸಿದೆ.

Fifa World Cup 2022: Morocco Beat Canada And Enter To Round of 16

4ನೇ ನಿಮಿಷದಲ್ಲೇ ಮೊದಲು ಗೋಲು

ಗುರುವಾರ ಅಲ್‌ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮೊರೊಕ್ಕೊ ಕೆನಡಾ ವಿರುದ್ಧ ಆರಂಭದಲ್ಲೇ ಗೋಲು ಬಾರಿಸುವ ಮೂಲಕ ಆಘಾತ ನೀಡಿತು. ಮೊರೊಕ್ಕೊ ತಂಡದ ಪರವಾಗಿ ಹಕೀಮ್ ಝಿಯಾಶ್ ಪಂದ್ಯದ ಆರಂಭದ 4ನೇ ನಿಮಿಷದಲ್ಲೇ ಗೋಲು ದಾಖಲಿಸಿ ಸಂಭ್ರಮಿಸಿದರು.

ನಂತರ ಪಂದ್ಯದ 23ನೇ ನಿಮಿಷದಲ್ಲಿ ಮೊರೊಕ್ಕೊದ ಮತ್ತೊಬ್ಬ ಆಟಗಾರ ಯೂಸುಫ್ ಅಲ್ ನಸೀರಿ ಮತ್ತೊಂದು ಗೋಲು ಗಳಿಸುವ ಮೂಲಕ ಮೊರೊಕ್ಕೊ 2-0 ಗೋಲುಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು. ಪಂದ್ಯದ 40ನೇ ನಿಮಿಷದಲ್ಲಿ ಕೆನಡಾದ ಆಟಗಾರ ನಾಯಿಫ್ ಅಕ್ರದ್ ಗೋಲು ಗಳಿಸುವ ಮೂಲಕ ಅಂತರ ಕಡಿಮೆ ಮಾಡಿದರು ಕೂಡ, ಕೆನಡಾ ಸೋಲನ್ನು ತಪ್ಪಿಸಲಾಗಲಿಲ್ಲ.

ದ್ವಿತೀಯಾರ್ಧದಲ್ಲಿ ಕೆನಡಾ ಗೋಲು ಗಳಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಮೊರೊಕ್ಕೊ ಭದ್ರವಾದ ರಕ್ಷಣಾ ಗೋಡೆ ಕಟ್ಟುವ ಮೂಲಕ ಕೆನಡಾದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದರು.

Story first published: Thursday, December 1, 2022, 23:54 [IST]
Other articles published on Dec 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X