ಫಿಫಾ Rankingನಲ್ಲಿ ಭಾರತಫುಟ್‌ಬಾಲ್‌ ತಂಡಕ್ಕೆ 99 ನೇ ಸ್ಥಾನ

Posted By:

ನವ ದೆಹಲಿ, ಮಾರ್ಚ್ 16: ಭಾರತ ಫುಟ್‌ಬಾಲ್‌ಗೆ 2017-18 ಪರ್ವಕಾಲ ಐಎಸ್‌ಎಲ್‌ ಭಾರಿ ಯಶಸ್ವಿ ಆಗುತ್ತಿರುವ ಬೆನ್ನಲ್ಲೆ ಮತ್ತೊಂದು ಸಿಹಿ ಸುದ್ದಿ ಫುಟ್‌ಬಾಲ್‌ ಪ್ರೇಮಿಗಳಿಗಾಗಿ ಬಂದಿದೆ.

ಈ ವರ್ಷ ಮೊದಲ ಬಾರಿಗೆ ಭಾರತ ಫುಟ್‌ಬಾಲ್ ತಂಡವು ಅಂತರರಾಷ್ಟ್ರೀಯ ಫುಟ್‌ಬಾಲ್ ರ್ಯಾಂಕಿಂಗ್‌ನಲ್ಲಿ 100 ರ ಒಳಗೆ ಸ್ಥಾನ ಪಡೆದಿದೆ.

ಗುರುವಾರ ಫಿಫಾ (ಫುಟ್‌ಬಾಲ್ ಫೆಡರೇಷನ್‌) ಫುಟ್‌ಬಾಲ್‌ ರ್ಯಾಂಕಿಂಗ್ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದು, ಇದರ ಅನುಸಾರ 399 ರ್ಯಾಂಕ್‌ ಗಳಿಸಿರುವ ಭಾರತವು 99 ರ್ಯಾಂಕಿಂಗ್‌ನಲ್ಲಿದೆ. ಲಿಬಿಯಾ ಕೂಡಾ ಇಷ್ಟೆ ಪಾಯಿಂಟ್ಸ್‌ ಪಡೆದಿದ್ದು, ಭಾರತ ಜೊತೆಗೆ ಸ್ಥಾನ ಹಂಚಿಕೊಂಡಿದೆ. ಕಳೆದ ವರ್ಷ ಕೂಡ ಭಾರತವು ಮೂರು ಬಾರಿ ನೂರರ ಒಳಗೆ ಸ್ಥಾನ ಪಡೆದಿತ್ತು.

India football team is in 99th rank according to FIFA rankings

ಏಷ್ಯಾದಲ್ಲಿ ಭಾರತಕ್ಕೆ 13 ನೇ ಸ್ಥಾನ ದೊರೆತಿದೆ. ಕತಾರ್, ಒಮನ್‌, ಜೋರ್ಡನ್‌, ಬಹರೇನ್‌ ಮತ್ತು ಉತ್ತರ ಕೊರಿಯ ತಂಡಗಳು ಭಾರತದ ನಂತರದ ಸ್ಥಾನಗಳಲ್ಲಿವೆ. ಭಾರತ ತಂಡವು ಇದೇ ಮಾರ್ಚ್‌27ರಂದು ನಡೆಯುವ ಎಎಫ್‌ಸಿಏಷ್ಯನ್‌ ಕಪ್‌ ಕ್ವಾಲಿಫೈಯರ್ ಪಂದ್ಯದಲ್ಲಿ ಕಿರ್ಗಿಸ್‌ ರಿಪಬ್ಲಿಕ್‌ ಎದುರು ಆಡಲಿದೆ. ಆ ಪಂದ್ಯದ ನಂತರ ಭಾರತದ ಸ್ಥಾನ ಇನ್ನಷ್ಟು ಉತ್ತಮವಾಗುವ ಸಾಧ್ಯತೆ ಇದೆ.

ಫುಟ್‌ಬಾಲ್ ದೈತ್ಯ ವಿಶ್ವ ಚಾಂಪಿಯನ್ ಜರ್ಮನಿ ತಂಡ ಅಗ್ರಸ್ಥಾನದಲ್ಲಿದ್ದು, ಆ ನಂತರ ಬ್ರೆಜಿಲ್, ಪೋರ್ಚುಗಲ್, ಅರ್ಜೆಂಟೀನಾ ತಂಡಗಳು ಇವೆ.

Story first published: Friday, March 16, 2018, 11:11 [IST]
Other articles published on Mar 16, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ