ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್‌: ಭಾರತೀಯ ಮಕ್ಕಳಿಗೆ ಲಾ ಲೀಗ ಕ್ಲಬ್‌ಗಳಲ್ಲಿ ತರಬೇತಿ!

Indian kids to train with a La Liga

ಮುಂಬಯಿ, ಏಪ್ರಿಲ್‌ 22: ಭಾರತದಲ್ಲಿರುವ ಸ್ಪೇನ್‌ನ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರುವ ಲಾ ಲೀಗ ಅಧಿಕಾರಿಗಳು, ಭಾರತದ ವಿದ್ಯಾರ್ಥಿಗಳನ್ನುಲಾ ಲೀಗ ಫುಟ್ಬಾಲ್‌ ಸ್ಕೂಲ್‌ ಸ್ಕಾಲರ್‌ಷಿಪ್‌ಗೆ 2018-19ರ ಅವಧಿಯಿಂದ ಪ್ರತಿ ವರ್ಷ ಆಯ್ಕೆ ಮಾಡುವ ಯೋಜನೆ ಹೊಂದಿದ್ದಾರೆ.

ಭಾರತದಲ್ಲಿ ಲಾ ಲೀಗ ನಡೆಸುವ ಗ್ರಾಸ್‌ ರೂಟ್‌ ಅಭಿವೃದ್ಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ದ ವಿದ್ಯಾರ್ಥಿಗಳಿಗೆ ಸ್ಪೇನ್‌ಗೆ ತೆರಳಿ ಲಾ ಲೀಗ ಕ್ಲಬ್‌ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುವ ಅವಕಾಶ ಲಭ್ಯವಾಗಲಿದೆ.

ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ 32 ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ, ನಂತರ ಜನವರಿಯಲ್ಲಿ ಮೆಟ್ರೊ ನಗರಗಳಲ್ಲಿ ಅಂತಿಮ ಹಂತದ ಆಯ್ಕೆ ನಡೆಸಲಾಗುತ್ತದೆ.

ಆಯ್ಕೆಯಾದ ವಿದ್ಯಾರ್ಥಿಗಳು ಸ್ಪೇನ್‌ಗೆ ಪ್ರಯಾಣ ಬೆಳೆಸಲಿದ್ದು, ಮೇ ತಿಂಗಳಿನಲ್ಲಿ ಲಾ ಲೀಗದ ಫುಟ್ಬಾಲ್‌ ಅಕಾಡೆಮಿಗಳಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ಜೊತೆಗೆ ಸ್ಪೇನ್‌ನ ಶ್ರೇಷ್ಠ ಯುವ ಫುಟ್ಬಾಲ್‌ ಆಟಗಾರರೊಂದಿಗೆ ಬೆರೆತು ಆಡುವ ಅವಕಾಶವೂ ಸಿಗಲಿದೆ.

"ಭಾರತದಲ್ಲಿನ ಯುವ ಪೀಳಿಗೆಯಲ್ಲಿ ಫುಟ್ಬಾಲ್‌ ಕ್ರೀಡೆಯ ಮೇಲಿನ ಒಲವು ಹೆಚ್ಚುವಂತೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ. ಭಾರತದಲ್ಲಿಈ ರೀತಿಯ ಯೋಜನೆ ಇದೇ ಮೊದಲಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಯೋಜನೆಗಳನ್ನು ತರುವ ಆಲೋಚನೆಯಲ್ಲಿದ್ದೇವೆ,'' ಎಂದು ಲಾ ಲೀಗ ಇಂಡಿಯಾದ ವ್ಯವಷ್ಥಾಪಕ ನಿರ್ದೇಶಕ ಜೋಸ್‌ ಆಂಥೋನಿಯೊ ಕಶಾಝಾ ಹೇಳಿದ್ದಾರೆ.

2018-19ರ ಅವಧಿಯಲ್ಲಿ ದೇಶದಾದ್ಯಂತ 14 ನಗರಗಳಲ್ಲಿ 40 ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, ಈಗಾಗಲೇ 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡಿದ್ದಾರೆ.

Story first published: Monday, April 22, 2019, 15:18 [IST]
Other articles published on Apr 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X