ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವ ಶ್ರೇಯಾಂಕ: 103ನೇ ಸ್ಥಾನಕ್ಕೆ ಜಾರಿದ ಭಾರತ

Sunil Chhetri 2019

ಹೊಸದಿಲ್ಲಿ, ಜುಲೈ 25: ಸುನಿಲ್‌ ಛೆಟ್ರಿ ಸಾರಥ್ಯದ ಭಾರತ ಫುಟ್ಬಾಲ್‌ ತಂಡ, ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನೀಡಿದ ಕಳಾಹೀನ ಪ್ರದರ್ಶನದ ಪರಿಣಾಮ ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಸ್ಥೆಗಳ ಒಕ್ಕೂಟ (ಫಿಫಾ) ಬಿಡುಗಡೆ ಮಾಡಿರುವ ನೂತನ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನ ಕಳೆದುಕೊಂಡು 103ನೇ ಸ್ಥಾನ ಪಡೆದಿದೆ.

ಇದೇ ತಿಂಗಳ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ ಭಾರತ ತಂಡ, ಎರಡು ಸೋಲು ಮತ್ತೊಂದು ಪಂದ್ಯದಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿತ್ತು.

ಶುಭಾಶಯ ಕೋರುವ ಭರದಲ್ಲಿ ಎಡವಟ್ಟು: ಸದ್ಗುರುಗೆ ಮಂಗಳಾರತಿ!ಶುಭಾಶಯ ಕೋರುವ ಭರದಲ್ಲಿ ಎಡವಟ್ಟು: ಸದ್ಗುರುಗೆ ಮಂಗಳಾರತಿ!

ಭಾರತ ತಂಡ ಟೂರ್ನಿಯಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ತಜಕಿಸ್ತಾನ ವಿರುದ್ಧ 2-4 ಗೋಲ್‌ಗಳ ಸೋಲನುಭವಿಸಿ, ಬಳಿಕ ಉತ್ತರ ಕೊರಿಯಾ ವಿರುದ್ಧ 2-5 ಗೋಲ್‌ಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿತ್ತು. ತದನಂತರ ನಡೆದ ಮೂರನೇ ಲೀಗ್‌ ಪಂದ್ಯದಲ್ಲಿ ಗೆಲ್ಲುವ ಉತ್ತಮ ಅವಕಾಶವನ್ನು ಕೈಚೆಲ್ಲಿ ಸಿರಿಯಾ ವಿರುದ್ಧ 1-1 ಗೋಲ್‌ಗಳ ಸಮಬಲಕ್ಕೆ ತೃಪ್ತಿಪಟ್ಟಿತ್ತು.

ಸುನಿಲ್‌ ಛೆಟ್ರಿ ಪಡೆ ಸದ್ಯಕ್ಕೆ ವಿಶ್ವ ಶ್ರೇಯಾಂಕಪಟ್ಟಿಯಲ್ಲಿ ಒಟ್ಟು 1214 ಅಂಕಗಳನ್ನು ಹೊಂದಿದೆ. ಕಳೆದ ಬಾರಿ ಪ್ರಕಟಿಸಿದ್ದ ಶ್ರೇಯಾಂಕಪಟ್ಟಿಗಿಂತಲೂ ಭಾರತ ತಂಡ ಈ ಬಾರಿ ಒಟ್ಟು 5 ಅಂಕಗಳನ್ನು ಕಳೆದುಕೊಂಡಿದೆ.

ಟಿ20 ಸರಣಿಯಲ್ಲಿ ಭಾರತಕ್ಕೆ ವಿಂಡೀಸ್‌ನ ಈ ಆಟಗಾರರಿಂದ ಅಪಾಯ!ಟಿ20 ಸರಣಿಯಲ್ಲಿ ಭಾರತಕ್ಕೆ ವಿಂಡೀಸ್‌ನ ಈ ಆಟಗಾರರಿಂದ ಅಪಾಯ!

ಇದರೊಂದಿಗೆ ಏಷ್ಯಾ ಭಾಗದ ಶ್ರೇಯಾಂಕದಲ್ಲಿ ಭಾರತ ತಂಡ 18ನೇ ಸ್ಥಾನದಲ್ಲಿದ್ದು, ವಿಶ್ವ ಶ್ರೇಯಾಂಕದಲ್ಲಿ 23ನೇ ಸ್ಥಾನದಲ್ಲಿರುವ ಇರಾನ್‌, ಏಷ್ಯಾ ಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಜಪಾನ್‌ (33), ಕೊರಿಯಾ (37), ಆಸ್ಟ್ರೇಲಿಯಾ (46) ಮತ್ತು ಕತಾರ್‌ (62) ನಂತರದ ಸ್ಥಾನಗಳಲ್ಲಿವೆ. ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಬೆಲ್ಜಿಯಂ ತಂಡ ಅಗ್ರ ಸ್ಥಾನದಲ್ಲಿದ್ದರೆ, ಬ್ರೆಜಿಲ್‌, ಫ್ರಾನ್ಸ್‌, ಇಂಗ್ಲೆಂಡ್‌ ಮತ್ತು ಉರುಗ್ವೆ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳನ್ನು ಅಲಂಕರಿಸಿವೆ.

Story first published: Thursday, July 25, 2019, 23:03 [IST]
Other articles published on Jul 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X