ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಚಿನ್ನದ ಬೂಟು ಧರಿಸಲು ಮತ್ತೊಮ್ಮೆ ಕೊರೊಮಿನಾಸ್ ಸಜ್ಜು

By Isl Media
ISL 2018: Wearing a Golden Boot, Coro sets the pace again

ಮುಂಬೈ ನವೆಂಬರ್ 13: ಗೋವಾ ತಂಡದ ಆಟಗಾರ ಫೆರಾನ್ ಕೊರೊಮಿನಾಸ್ ಅವರ ಈ ಬಾರಿಯ ಗೋಲಿನ ಸಂಭ್ರಮವನ್ನು ಕಂಡು ಸೋಲಿನ ಆಘಾತ ಅನುಭವಿಸಿದ ಇತ್ತೀಚಿನ ತಂಡ ಕೇರಳ ಬ್ಲಾಸ್ಟರ್ಸ್. ಸ್ಪೇನ್ ಮೂಲದ ಆಟಗಾರ ಕೊರೊಮಿನಾಸ್ ಕಳೆದ ಋತುವಿನಲ್ಲೂ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿ ಚಿನ್ನದ ಬೂಟು ಗೆದ್ದಿದ್ದರು. ಕಳೆದ ಋತುವಿನಲ್ಲಿ ಅವರು 18 ಗೋಲುಗಳನ್ನು ಗಳಿಸಿ ಅದ್ಭುತ ಸಾಧನೆ ಮಾಡಿದ್ದರು.

ಕಾಲು ಮುರಿದಾಗ ಅಂಬೆಗಾಲಲ್ಲೇ ಓಡಿದ ಕ್ರೀಡಾಪಟು: ಮನಮಿಡಿಯುವ ವಿಡಿಯೋಕಾಲು ಮುರಿದಾಗ ಅಂಬೆಗಾಲಲ್ಲೇ ಓಡಿದ ಕ್ರೀಡಾಪಟು: ಮನಮಿಡಿಯುವ ವಿಡಿಯೋ

ಈ ಋತುವಿನಲ್ಲಿ ಅವರು ಆಡುವ ರೀತಿಯನ್ನು ನೋಡಿದಾಗ ಈ ಬಾರಿಯೂ ಸ್ಪೇನ್‌ನ ಆಟಗಾರನಿಗೆ ಗೋಲ್ಡನ್ ಬೂಟನ್ನು ಗಳಿಸುವುದು ಸ್ಪಷ್ಟ. ಆಡಿರುವ ಆರು ಪಂದ್ಯಗಳಲ್ಲಿ ಅವರು ಈಗಾಗಲೇ ಎಂಟು ಗೋಲುಗಳನ್ನು ಗಳಿಸಿರುತ್ತಾರೆ. ನಾರ್ತ್ ಈಸ್ಟ್ ಯುನೈಟೆಡ್‌ನ ಬಾರ್ತಲೋಮಿಯೊ ಒಗ್ಬಚೆ ಆರು ಗೋಲುಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!

ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ವಿರಾಸ ಸಿಗುವುದಕ್ಕೆ ಮುನ್ನ ಕೊರೊ ಮತ್ತೆರಡು ಗೋಲು ಗಳಿಸಿದರು. ಕೇರಳದ ಡಿೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೂ ಕೊರೊ ಅವರಿಂದ ಗೋಲು ಗಳಿಸುವುದನ್ನು ತಡೆಯಲಾಗಲಿಲ್ಲ. ಹೆಡರ್ ಮೂಲಕ ಗಳಿಸಿದ ಮೊದಲ ಗೋಲನ್ನು ತಡೆಯಲು ಎದುರಾಳಿ ತಂಡದ ಗೋಲ್‌ಕೀಪರ್‌ಗೆ ಯಾವುದೇ ಅವಕಾಶ ಇರಲಿಲ್ಲ. ಎರಡನೇ ಗೋಲು ಕೂಡ ಅದ್ಭುತವಾಗಿತ್ತು.

ಪ್ರಶ್ನಾತೀತ ಗೋಲುಗಳು

ಪ್ರಶ್ನಾತೀತ ಗೋಲುಗಳು

ಕೊರೊ ಅವರು ದಾಖಲಿಸಿದ ಗೋಲುಗಳು ಪ್ರಶ್ನಾತೀತ. ನನ್ನ ಪ್ರಕಾರ ಅವರು ಲೀಗ್‌ನಲ್ಲೇ ಉತ್ತಮ ಆಟಗಾರ. ಅವರಿಗೆ ಅವಕಾಶ ಕೊಟ್ಟರೇ ನಿಜವಾಗಿಯೂ ಗೋಲು ಗಳಿಸುತ್ತಾರೆ,‘ ಎಂದು ಕೇರಳ ಬ್ಲಾಸ್ಟರ್ಸ್ ತಂಡದ ಕೋಚ್ ಡೇವಿಡ್ ಜೇಮ್ಸ್ ಹೇಳಿದ್ದಾರೆ.

ತಪ್ಪಾದ ಊಹೆ

ತಪ್ಪಾದ ಊಹೆ

ಋತುವಿನ ಆರಂಭದಲ್ಲಿ ಮ್ಯಾನ್ವೆಲ್ ಲಾನ್ಜೆರೋಟ್ ಇಲ್ಲದೆ ಕೊರೊಮಿನಾಸ್ ಮಿಂಚುವುದು ಕಷ್ಟ ಎಂದು ಎಲ್ಲರೂ ಊಹಿಸಿದ್ದರು. ಆದರೆ ಕೊರೊಮಿನಾಸ್ ಅವರ ಗೋಲು ಗಳಿಕೆಗೆ ಯಾವುದೇ ರೀತಿಯ ಅಡ್ಡಿಯಾಗಲಿಲ್ಲ. ಎಡು ಬೇಡಿಯಾ ಹಾಗೂ ಹ್ಯೂಗೊ ಬೌಮೌಸ್ ಅವರ ನೆರವಿನಿಂದ ಕೊರೊಮಿನಾಸ್ ಗೋಲು ಗಳಿಕೆಯನ್ನು ಮುಂದುವರಿಸಿದ್ದಾರೆ.

ಪ್ರತಿ 66 ನಿಮಿಷಗಳಿಗೊಂದು

ಪ್ರತಿ 66 ನಿಮಿಷಗಳಿಗೊಂದು

ಅಂಗಣದಲ್ಲಿ ಚಲನವಲನ, ಪಾಸ್‌ಗಳ ನಿಖರತೆ, ಸಿಕ್ಕ ಪಾಸ್‌ಗೆ ಅಷ್ಟೇ ಉತ್ತಮ ರೀತಿಯಲ್ಲಿ ಸ್ಪಂದಿಸುವುದು ಇವುಗಳನ್ನು ಗಮನಿಸಿದಾಗ ಈ ಬಾರಿಯ ಲೀಗ್‌ನಲ್ಲಿ ಕೊರೊಮಿನಾಸ್‌ಗೆ ಸವಾಲೊಡ್ಡುವವರು ವಿರಳ ಅನಿಸುತ್ತಿದೆ. ಪ್ರತಿ 66 ನಿಮಿಷಗಳಿಗೊಂದು ಗೋಲು ಗಳಿಸಿರುವ ಕೊರೊಮಿನಾಸ್, ಇದುವರೆಗೂ ಒಮ್ಮೆ ಮಾತ್ರ ಅವಕಾಶವನ್ನು ಕೈಚೆಲ್ಲಿದ್ದಾರೆ. ಕೊರೊಮಿನಾಸ್ ಸಿಕ್ಕ ಅವಕಾಶವನ್ನು ಬಿಟ್ಟಿದ್ದೇ ಕಡಿಮೆ. ಆದರೆ ಪ್ರತಿ 90 ನಿಮಿಷಗಳಿಗೊಂದು ಗೋಲು ಗಳಿಸುವ ಒಗ್ಬಚೆ ಈಗಾಗಲೇ ಎರಡು ಅವಕಾಶಗಳನ್ನು ಕೈ ಚೆಲ್ಲಿದ್ದಾರೆ. ಸುನಿಲ್ ಛೆಟ್ರಿ, ಬೇಡಿಯಾ, ಮಿಕು ಅವರಿಗೆ ಕೊರೊ ಅವರನ್ನು ಹಿಂದಿಕ್ಕುವುದು ಕಷ್ಟವೆನಿಸಲಿದೆ.

ಗೋಲು ಗಳಿಸೋದೇ ಗುರಿಯಲ್ಲ

ಗೋಲು ಗಳಿಸೋದೇ ಗುರಿಯಲ್ಲ

ಕೇವಲ ಗೋಲು ಗಳಿಸುವುದೇ ಕೊರೊ ಅವರ ಗುರಿಯಾಗಿರುತ್ತಿರಲಿಲ್ಲ. ಅವರರು ಉತ್ತಮ ರೀತಿಯಲ್ಲಿ ಗೋಲ್ ಗಳಿಕೆಗೆ ನೆರವಾಗುತ್ತಾರರೆ. ಬೇಡಿಯಾ, ಬೌಮೌಸ್ ಹಾಗೂ ಜಾಕಿಚಾಂದ್ ಸಿಂಗ್ ಅವರಿಗೆ ಗೋಲು ಗಳಿಸಲು ನಾಲ್ಕು ಬಾರಿ ನೆರವಾಗಿದ್ದಾರೆ. ಆದರೆ ಒಗ್ಬಚೆ ಇದುವರೆಗೂ ಇತರರ ಗೋಲಿಗೆ ನೆರವಾಗಿಲ್ಲ. (ಚಿತ್ರ ಕೃಪೆ: ಐಎಸ್‌ಎಲ್‌)

ಗುಣಮಟ್ಟದ ಆಟಗಾರ

ಗುಣಮಟ್ಟದ ಆಟಗಾರ

ಗೋಲು ಗಳಿಕೆಯಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಕೊರೊ ಈ ಬಾರಿ ಗೋವಾ ತಂಡ ಹೆಚ್ಚು ಗೋಲು ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಗೋವಾ ಈಗಾಗಲೇ 21 ಗೋಲುಗಳನ್ನು ಗೋಳಿಸಿದೆ. ತಂಡದ ಇತರ ಆಟಗಾರರು ಉತ್ತಮ ರೀತಿಯಲ್ಲಿ ಪ್ರೋತ್ಸಾ ನೀಡುತ್ತಿರುವಾಗ ಸ್ಪೇನ್ ಈ ಆಟಗಾರನ ಚಿನ್ನದ ಬೂಟನ್ನು ಇತರರಿಗೆ ಸಿಗುವುದು ಕಠಿಣವೆನಿಸಿದೆ. (ಚಿತ್ರ ಕೃಪೆ: ಐಎಸ್‌ಎಲ್‌)

Story first published: Tuesday, November 13, 2018, 19:34 [IST]
Other articles published on Nov 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X