ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಚೆನ್ನೈಯಿನ್‌ಗೆ ಸೋಲಿನ ಉಡುಗೊರೆ ನೀಡಿದ ಗೋವಾ

By Isl Media
ISL 2019: Goa on song in opener against Chennaiyin FC

ಗೋವಾ, ಅಕ್ಟೋಬರ್ 24: 30ನೇ ನಿಮಿಷದಲ್ಲಿ ಸೈಮಿನ್ಲೆನ್ ದೌನ್ಗಲ್, 60ನೇ ನಿಮಿಷದಲ್ಲಿ ಫರಾನ್ ಕೊರೊಮಿನಾಸ್ ಹಾಗೂ ಕಾರ್ಲೋಸ್ ಪೆನಾ 81ನೇ ನಿಮಿಷದಲ್ಲಿ ಗಳಿಸಿದ ಅದ್ಭುತ ಗೋಲುಗಳ ನೆರವಿನಿಂದ ಕಳೆದ ಬಾರಿಯ ಚಾಂಪಿಯನ್ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನ ತನ್ನ ಮೊದಲ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.

ಬಾಲ್ ಬಾಯ್ ಆಗಿದ್ದ ಅನಿಕೇತ್ ಈಗ ಜೇಮ್ಶೆಡ್ಪುರ ಕ್ಲಬ್‌ನ ಪ್ರಮುಖ ಆಟಗಾರಬಾಲ್ ಬಾಯ್ ಆಗಿದ್ದ ಅನಿಕೇತ್ ಈಗ ಜೇಮ್ಶೆಡ್ಪುರ ಕ್ಲಬ್‌ನ ಪ್ರಮುಖ ಆಟಗಾರ

ಚೆನ್ನೈಯಿನ್ ತಂಡದ ಸೋಲಿನ ಅಭಿಯಾನ ಮುಂದುವರಿದಿದೆ. ಪ್ರಥಮಾರ್ಧದಲ್ಲಿ ಇತ್ತಂಡಗಳ ನಡುವೆ ಉತ್ತಮ ರೀತಿಯ ಹೋರಾಟ ಕಂಡುಬಂದಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಚೆನ್ನೈಯಿನ್ ತನ್ನ ಹಳೇ ಚಾಳಿಯನ್ನು ಮುಂದುವರಿಸಿತು. ಕಳೆದ ಋತುವಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ್ದ ಫರಾನ್ ಕೊರೊಮಿನಾಸ್ ಈ ಬಾರಿಯೂ ಚಿನ್ನದ ಬೂಟ್ ಗಾಗಿ ಉತ್ತಮ ರೀತಿಯಲ್ಲಿ ಹೆಜ್ಜೆ ಇಟ್ಟರು. ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹ ಹಾಗೂ ಮೊದಲಾರ್ಧದಲ್ಲಿ ಕಂಡ ಮುನ್ನಡೆ ಗೋವಾ ತಂಡಕ್ಕೆ ಜಯದ ಹಾದಿಯನ್ನು ಸುಗಮಗೊಳಿಸಿತು, ಕಳೆದ ಬಾರಿ ರನ್ನರ್ ಅಪ್ ಗೋವಾ ಈ ಬಾರಿ ಚಾಂಪಿಯನ್ ಆಗುವ ಗುರಿ ಹೊಂದಿದ್ದು, ಅದೇ ರೀತಿಯಲ್ಲಿ ಜಯದ ಹೆಜ್ಜೆ ಇಟ್ಟಿತು.

ISL 2019: Goa on song in opener against Chennaiyin FC

ಗೋವಾ ಮೇಲುಗೈ
30ನೇ ನಿಮಿಷದಲ್ಲಿ ಸೈಮಿನ್ಲೆನ್ ದೌನ್ಗಲ್ ಗಳಿಸಿದ ಗೋಲಿನಿಂದ ಚೆನ್ನೈ ವಿರುದ್ಧದ ಮೊದಲ ಪಂದ್ಯದ ಪ್ರಥಮಾರ್ಥದಲ್ಲಿ ಗೋವಾ ಎಫ್ ಸಿ ಮೇಲುಗೈ ಸಾಧಿಸಿತು. ಚೆನ್ನೈಯಿನ್ ತಂಡ ಈಬಾರಿ ಅಷ್ಟು ಸುಲಭವಾಗಿ ಗೋವಾಕ್ಕೆ ಬಗ್ಗಲಿಲ್ಲ. ಪ್ರಥಮಾರ್ಧ ಅತ್ಯಂತ ಕುತೂಲಹಲದ ಕ್ಷಣಗಳಿಗೆ ಸಾಕ್ಷಿಯಾಯಿತು. ಇತ್ತಂಡಗಳ ಗೋಲ್ ಕೀಪರ್ ಗಳು ಸಾಕಷ್ಟು ಚುರುಕಿನಲ್ಲಿದ್ದ ಕಾರಣ ಗೋಲು ಗಳಿಕೆಗೆ ಕಡಿವಾಣ ಬಿತ್ತು. ವಿಶಾಲ್ ಕೈಥ್ ಉತ್ತಮ ರೀತಿಯಲ್ಲಿ ಚೆಂಡನ್ನು ತಡೆಯದೇ ಇರುತ್ತಿದ್ದರೆ, ಫರಾನ್ ಕೊರೊಮಿನಾಸ್ ಅವರ ಹೆಸರಲ್ಲಿ ಗೋಲು ದಾಖಲಾಗಿರುತ್ತಿತ್ತು. ಇತ್ತಂಡಗಳು ಚೆಂಡಿಯಾನ್ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿದವು. ಆತಿಥೇಯ ಗೋವಾ ಗೋಲ್ ಬಾಕ್ಸ್ ಕೆಡೆಗೆ ಹೆಚ್ಚಿನ ಗುರಿ ಇಟ್ಟಿತ್ತು. ಚೆನ್ನೈಯಿನ್ ತಂಡ ಗೋಲ್ ಗಳಿಕೆಗೆ ಹಲವು ಅವಕಾಶಗಳನ್ನು ನಿರ್ಮಿಸಿಕೊಂಡಿತ್ತು. ಆದರೆ ಮೊಹಮ್ಮದ್ ನವಾಜ್ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಲಾಲಿಯಂಜುವಲಾ ಚಾಂಗ್ಟ್ 41ನೇ ನಿಮಿಷದಲ್ಲಿ ಗೋಲ್ ಗಳಿಸಿದರೂ ಅದು ಆಫ್ ಸೈಡ್ ಆಗಿತ್ತು,.

ಚೆನ್ನೈಯಿನ್‌ಗೆ ಅಗ್ನಿ ಪರೀಕ್ಷೆ
ಕಳೆದ ಋತುವಿನಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರುವಲ್ಲಿ ವಿಫಲವಾದ ಚೆನ್ನಾಯಿನ್ ಎಫ್ ಸಿ ಈಗ ಹೊಸ ಆಟಗಾರರೊಂದಿಗೆ ಮೈ ಕೊಡವಿ ನಿಂತಿದ್ದು, ಮೊದಲ ಪಂದ್ಯದಲ್ಲೇ, ಕಳೆದ ಬಾರಿಯ ಫೈನಲಿಸ್ಟ್ ಎಫ್ ಸಿ ಗೋವಾ ತಂಡವನ್ನು ಎದುರಿಸಲು ಸಜ್ಜಾಯಿತು. ಲೂಸಿಯನ್ ಗೋಯನ್ ನಾಯಕನಾಗಿ ಜವಾಬ್ದಾರಿ ನಿಭಾಯಿಸಬೇಕಾಗಿದೆ. ಎಲಿ ಸಾಬಿಯ, ಮಸೀಹ್ ಸೈಘಾನಿ, ಜೆರ್ರಿ ಲಾಲರಿಂಜುವಾಲ, ಅನಿರುಧ್ ಥಾಪ ಮತ್ತು ಧನಪಾಲ್ ಗಣೇಶ್ ತಂಡದ ಪ್ರಮಖ ಶಕ್ತಿ,. ಕಳೆದ ಋತುನಿನಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿರುವುದೇ ತಂಡ ಕೊನೆಯ ಸ್ಥಾನ ತಲುಪಲು ಕಾರಣವಾಯಿತು.

ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!

ಎದುರಾಳಿ ತಂಡದ ಮೇಲೆ ಸುಲಭವಾಗಿ ಒತ್ತಡ ಹೇರಿ ಗೋಲು ಗಳಿಸುವಲ್ಲಿ ನೈಪುಣ್ಯತೆ ಹೊಂದಿರುವ ಗೋವಾ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸ್ಥಿರ ಪ್ರದರ್ಶನ ತೋರುವ ತಂಡ ಎಂದು ಖ್ಯಾತಿ ಪಡೆದಿದೆ. ಫರಾನ್ ಕೊರೊಮಿನಾಸ್ ಗೋಲು ಗಳಿಕೆಯಲ್ಲಿ ಅಗ್ರ ಸ್ಥಾನ ಗಳಿಸಿದ್ದು, ಗೋವಾ ತಂಡದ ಸ್ಟಾರ್ ಆಟಗಾರ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರೆನಿದ್ದಾರೆ. ಎಡು ಬೇಡಿಯ, ಕಾರ್ಲೋಸ್ ಪೆನಾ, ಹ್ಯೂಗೋ ಬೌಮಸ್,

ಬ್ರ್ಯಾಂಡನ್ ಫೆರ್ನಾಂಡೀಸ್, ಲೆನ್ನಿ ರಾಡ್ರಿಗಸ್ ಮತ್ತು ಮೌರ್ತದಾ ಫಾಲ್ ಇವರನ್ನು ನಿಯಂತ್ರಿಸಿ ಗೋಲ್ ಗಳಿಸುವುದು ಅಷ್ಟು ಸುಲಭವಲ್ಲ. ಫುಟ್ಬಾಲ್ ಅಂಗಣದಲ್ಲಿ ಎಲ್ಲವೂ ನಿರೀಕ್ಷಿದಂತೆ ನಡೆಯೋಲ್ಲ, ಚೆನ್ನೈಯಿನ್ ತಂಡ ಹೊಸತನದೊಂದಿಗೆ ಹೆಜ್ಜೆ ಇಟ್ಟಿದೆ. ಅವರ ಗುರಿ ಈಗ ಹಿಂದಿನದನ್ನು ಸ್ಮರಿಸುವುದಾಗಿಲ್ಲ, ಬದಲಾಗಿ ಹೊಸತನ್ನು ಕಂಡುಕೊಳ್ಳುವುದು, ಅದಕ್ಕೆ ಜಯವೊಂದೇ ಮಂತ್ರ.

Story first published: Thursday, October 24, 2019, 12:09 [IST]
Other articles published on Oct 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X