ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: ಜಯದ ಒತ್ತಡದಲ್ಲಿ ಪುಣೆ, ಚೆನ್ನೈಯಿನ್

By Isl Media
ISL: FCPC vs CFC: Preview, Timings, Live Streaming

ಪುಣೆ, ನವೆಂಬರ್ 6: ಕಳೆದ ಬಾರಿ ಚಾಂಪಿಯನ್ ಪಟ್ಟ ಗೆದ್ದಿದ್ದ ಚೆನ್ನೈಯಿನ್ ಎಫ್ ಸಿ ಹಾಗೂ ಪ್ಲೇ ಆಫ್ ಹಂತ ತಲುಪಿದ್ದ ಪುಣೆ ಎಫ್ಸಿ ತಂಡಗಳು ಬಾರಿ ಜಯದ ಖಾತೆ ತೆರೆಯಲು ಹರಸಾಹಸ ಪಡುತ್ತಿವೆ. ಕಳೆದ ಬಾರಿ ಉತ್ತಮ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟ ಗೆದ್ದಿದ್ದ ಚೆನ್ನೈ ತಂಡ ಈ ಬಾರಿ ಪ್ಲೇ ಆಫ್ ತಲಪುವುದೂ ಕಷ್ಟವೆನಿಸಿದೆ. ಈ ಎರಡೂ ತಂಡಗಳು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ.
ಕೊನೆಯ ಸ್ಥಾನದಲ್ಲಿರುವ ಎರಡೂ ತಂಡಗಳು ಇಲ್ಲಿನ ಛತ್ರಪತಿ ಶಿವಾಜಿ ಅಂಗಣದಲ್ಲಿ ಮಂಗಳವಾರ (ನವೆಂಬರ್ 6) ಅಳಿವು ಉಳಿವಿನ ಪ್ರಶ್ನೆ ಎಂಬತೆ ಹೋರಾಟ ನಡೆಸಲಿವೆ.

ಪಂದ್ಯದ Live Score, ಸ್ಕೋರ್ ಕಾರ್ಡ್ ಕೆಳಗಿದೆ

1
1022326

'ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಸೆಣಸಿದ್ದ ಎರಡು ತಂಡಗಳು ಇಂದು ಈ ಸ್ಥಿತಿಯಲ್ಲಿರುತ್ತವೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಋತುವಿನ ಮೂರನೇ ಒಂದು ಭಾಗದಷ್ಟು ಪಂದ್ಯಗಳನ್ನು ಆಡಿ ಆಗಿದೆ. ನಾವು ಎಲ್ಲಿರಬಾರದಿತ್ತೋ ಆ ಸ್ಥಿತಿಯಲ್ಲಿ ಇದ್ದೇವೆ. ಈ ಹಂತದಿಂದ ಮೇಲಕ್ಕೇರಲು ಯತ್ನಿಸಬೇಕಾಗಿದೆ,' ಎಂದು ಮಧ್ಯಂತರ ಕೋಚ್ ಪ್ರದ್ಯುಮ್ನ ರೆಡ್ಡಿ ಹೇಳಿದರು.

ಮ್ಯುಗಲ್ ಏಂಜಲ್ ಪೋರ್ಚುಗಲ್ ಅವರನ್ನು ಕೋಚ್ ಹುದ್ದೆಯಿಂದ ಹೊರಗಟ್ಟಿದ ನಂತರ ರೆಡ್ಡಿ ಅವರು ತಂಡದ ನಿರ್ವಹಣೆ ಮಾಡುತ್ತಿದ್ದಾರೆ. ತಂಡವನ್ನು ಜಯದ ಹಾದಿಗೆ ತರಬೇಕೆಂಬ ಅವರ ಯತ್ನಕ್ಕೆ ಇದುವರೆಗೂ ಯಶಸ್ಸು ಸಿಗಲಿಲ್ಲ. ಗೋವಾ ವಿರುದ್ಧದ ಮೊದಲ ಪಂದ್ಯದಲ್ಲೇ 2-4 ಗೋಲಿನಿಂದ ಸೋತರು. ನಂತರ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಡ್ರಾ ಕಂಡಿತ್ತು. ಬ್ರೆಜಿಲ್ ಮೂಲದ ಆಟಗಾರ ಡಿಯಾಗೋ ಕಾರ್ಲೋಸ್ ರೆಡ್ ಕಾರ್ಡ್ ಪಡೆದು ತಂಡದಿಂದ ಹೊರಗುಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಮಿಂಚಿನ ಗೋಲು ಗಳಿಸಿದ್ದ ಮಾರ್ಕೋ ಸ್ಟಾನ್ಕೋವಿಕ್ ಗಾಯದ ಕಾರಣ ನಾಳೆಯ ಪಂದ್ಯದಿಂದ ವಂಚಿತರಾಗಿದ್ದಾರೆ.

ಅಲ್ಫಾರೋ ವಿಫಲ

ಅಲ್ಫಾರೋ ವಿಫಲ

ನಂಬುಗೆ ಆಟಗಾರ ಎಮಿಲಿಯಾನೋ ಅಲ್ಫಾರೋ ಈ ಬಾರಿ ತಮ್ಮ ನೈಜ ಆಟ ತೋರುವಲ್ಲಿ ವಿಲರಾಗಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಸಿಕ್ಕ ಎರಡು ಪೆನಾಲ್ಟಿ ಅವಕಾಶಗಳನ್ನು ಗೋಲಾಗಿಸುವಲ್ಲಿ ಅವರು ವಿಫಲರಾದರು. ಮಾರ್ಸೆಲಿನೋ ಕೂಡ ಇನ್ನೂ ತಮ್ಮ ನೈಜ ಆಟ ತೋರಲಿಲ್ಲ.

10ನೇ ಸ್ಥಾನದಲ್ಲಿ ಚೆನ್ನೈಯಿನ್

10ನೇ ಸ್ಥಾನದಲ್ಲಿ ಚೆನ್ನೈಯಿನ್

ಅಟ್ಯಾಕ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ನೀರಸ ಪ್ರದರ್ಶನ ತೋರಿರುವ ಜಾನ್ ಗ್ರೆಗೋರಿ ಅವರ ಚೆನ್ನೈಯಿನ್ ತಂಡ 10ನೇ ಸ್ಥಾನದಲ್ಲಿದೆ. ಪುಣೆಯ ಜತೆಯಲ್ಲೇ ಎದುರಾಳಿ ತಂಡಕ್ಕೆ 11 ಗೋಲುಗಳು ನೀಡಿರುವ ಚೆನ್ನೈಯಿನ್ ಡಿಫೆನ್ಸ್ ವಿಭಾಗದ ಕತೆ ಹೇಳುತ್ತಿದೆ.

ಮುಜುಗರದ ಪರಿಸ್ಥಿತಿ

ಮುಜುಗರದ ಪರಿಸ್ಥಿತಿ

‘ಇದುವರೆಗೂ ನಾವು ಋತುವಿಲನಲ್ಲಿ ಅತ್ಯಂತ ಮುಜುಗರದ ಪರಿಸ್ಥಿತಿಯನ್ನು ಕಂಡಿದ್ದೇವೆ, ಆರು ಪಂದ್ಯಗಳಿಂದ ಗಳಿಸಿರುವುದು ಕೇವಲ ಒಂದು ಅಂಕ. ಇಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಅಂಗಣದಲ್ಲಿ ಮಾತಾಡಬೇಕಾಗಿದೆ. ಗೋಲು ಗಳಿಸಲು ಯಾವ ಆಟಗಾರರು ಉತ್ಸುಕರಾಗಿದ್ದಾರೋ ಅವರಿಗೆ ಅವಕಾಶ ನೀಡಬೇಕು. ಯಾವ ಆಟಗಾರರಿಗೆ ಮೂರು ಅಂಕಗಳ ಅಗತ್ಯವಿದೆಯೋ ಅವರಿ ಅವಕಾಶ ನೀಡಲಾಗುವುದು,‘ ಎಂದರು.

ಕದನ ಕುತೂಹಲ

ಕದನ ಕುತೂಹಲ

ಇದುವರೆಗೂ ಆಡದ ಆಟಗಾರರಿಗೆ ಅವಕಾಶ ಸಿಗಲಿದೆ ಎಂಬ ಅಂಶ ಗ್ರೆಗೋರಿ ಅವರ ಮಾತಿನಿಂದ ಸ್ಪಷ್ಟವಾಗಿದೆ. ಕರಣ್‌ಜಿತ್ ಸಿಂಗ್ ಅವರ ಸ್ಥಾನವನ್ನು ಸಂಜೀವನ್ ಘೋಷ್ ಅವರು ಪಡೆದುಕೊಳ್ಳುವ ಸಾಧ್ಯತೆ ಇದೆ. ಜಯಕ್ಕಾಗಿ ಹಾತೋರೆಯುತ್ತಿರುವ ಎರಡೂ ತಂಡಗಳಲ್ಲಿ ಯಾರ ಯೋಜನೆ ಕಾರ್ಯರೂಪಕ್ಕೆ ಬರುವುದು ಎಂಬ ಕುತೂಹಲ ಸಹಜವಾಗಿದೆ.

Story first published: Tuesday, November 6, 2018, 0:42 [IST]
Other articles published on Nov 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X