ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬೆಲ್ಜಿಯಂ ವಿಶ್ವಕಪ್ ತಂಡದಿಂದ ರಾಜ್ಜಾ ನಾಂಗೋಲನ್ ಹೊರಕ್ಕೆ

By ಮೈಖೇಲ್ ತಂಡ
Romas Nainggolan left out of Belgiums World Cup squad, announces retirement

ಫುಟ್‌ಬಾಲ್ ವರ್ಲ್ಡ್ ಕಪ್‌ಗೆ ಬೆಲ್ಜಿಯಂನ 28 ಆಟಗಾರರ ತಾತ್ಕಾಲಿಕ ಪಟ್ಟಿಯಿಂದ ರಾಜ್ಜಾ ನಾಂಗೋಲನ್ ಅವರನ್ನು ಕೈಬಿಡಲಾಗಿದೆ. ತಂಡದ ಪ್ರಧಾನ ಕೋಚ್ ರಾಬರ್ಟೊ ಮಾರ್ಟಿನೆಜ್ ಈ ವಿಷಯ ದೃಢಪಡಿಸಿದ್ದಾರೆ. ರೋಮನ್ ಮಿಡ್‌ಫೀಲ್ಡರ್ ಆಟಗಾರ ನಾಂಗೋಲನ್ ಅವರ ಅವರು ಆರಂಭಿಕ ತಂಡದಿಂದ ಹೊರಬಿದ್ದ ಪ್ರಮುಖ ಆಟಗಾರರಲ್ಲೊಬ್ಬರಾಗಿದ್ದಾರೆ.

ಜೂನ್ 2ರಂದು ಪೋರ್ಚುಗಲ್ ಜೊತೆ ನಡೆಯಲಿರುವ ಸೌಹಾರ್ದ ಪಂದ್ಯದ ನಂತರ ಬೆಲ್ಜಿಯಂ ತಂಡದ ಆಟಗಾರರ ಸಂಖ್ಯೆ 23ಕ್ಕಿಳಿಯಲಿದೆ. ಆದರೆ ಈ ಮಧ್ಯೆ ತಂಡದಿಂದ ಹೊರಬಿದ್ದ ಮಿಡ್‌ಫೀಲ್ಡರ್ ಆಟಗಾರ ನಾಂಗೋಲನ್, ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.

ವಿಶ್ವಕಪ್ ಫುಟ್ಬಾಲ್ 2018 : ಸಂಪೂರ್ಣ ವೇಳಾಪಟ್ಟಿ

"ನನಗಿಷ್ಟವಿಲ್ಲದಿದ್ದರೂ ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನ ಕೊನೆಗೊಳ್ಳುತ್ತಿದೆ... ನನ್ನ ದೇಶಕ್ಕಾಗಿ ಕೈಲಾದದ್ದೆಲ್ಲವನ್ನೂ ಮಾಡಿದ್ದೇನೆ. ಈಗ ಒಂಟಿಯಾಗಿರುವುದು ನೋವು ತರುತ್ತದೆ. ಆದರೆ ಇಂದಿನಿಂದ ನನ್ನ ದೇಶದ ತಂಡಕ್ಕೆ ನಾನೇ ನಂಬರ್ ಒನ್ ಅಭಿಮಾನಿ.." ಹೀಗೆಂದು ನಾಂಗೋಲನ್ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫೀಫಾ ವಿಶ್ವಕಪ್ 2018: ರೊನಾಲ್ಡೋ ನೇತೃತ್ವದ ಪೋರ್ಚುಗಲ್ ತಂಡ ಫೀಫಾ ವಿಶ್ವಕಪ್ 2018: ರೊನಾಲ್ಡೋ ನೇತೃತ್ವದ ಪೋರ್ಚುಗಲ್ ತಂಡ

ಕೋಚ್ ಮಾರ್ಟಿನೆಜ್ ಅವರ ಜೊತೆಗೆ ನಾಂಗೋಲನ್ ಅವರ ಸಂಬಂಧ ಅಷ್ಟಕ್ಕಷ್ಟೆ ಎನ್ನುವಂತಿತ್ತು. ಆದರೂ ಸೌದಿ ಅರೇಬಿಯಾ ವಿರುದ್ಧದ ಸೌಹಾರ್ದ ಪಂದ್ಯಕ್ಕಾಗಿ ರಾಷ್ಟ್ರೀಯ ತಂಡದಲ್ಲಿ ನಾಂಗೋಲನ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಈ ಮಧ್ಯೆ 30 ವರ್ಷ ಪ್ರಾಯದ ನಾಂಗೋಲನ್ ಯಾವುದೇ ಕಾರಣ ನೀಡದೆ ಟ್ರೇನಿಂಗ್ ಕ್ಯಾಂಪ್‌ನ ಅಂತಿಮ ಅವಧಿಯಲ್ಲಿ ಗೈರುಹಾಜರಾಗಿದ್ದರು. ಆಗಲೇ ನಾಂಗೋಲನ್ ಅವರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಬಗ್ಗೆ ಅನುಮಾನಗಳು ಮೂಡಿದ್ದವು.

ಕೇವಲ ತಂತ್ರಗಾರಿಕೆಯ ದೃಷ್ಟಿಯಿಂದ ನಾಂಗೋಲನ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಮಾರ್ಟಿನೆಜ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ರೋಮ್ ತಂಡದಲ್ಲಿ ಮಿಡ್‌ಫೀಲ್ಡರ್ ಆಗಿ ನಾಂಗೋಲನ್ ವಹಿಸುವ ಪಾತ್ರವನ್ನು ಬೆಲ್ಜಿಯಂ ತಂಡದಲ್ಲಿ ವಹಿಸಲಾಗದು. ಹೀಗಾಗಿ ತಂಡದಲ್ಲಿ ಅವರನ್ನು ಪರಿಗಣಿಸಲಾಗಿಲ್ಲ ಎಂದಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಮಾರ್ಟಿನೆಜ್, "ರಾಜ್ಜಾ ಅವರೊಬ್ಬ ಶ್ರೇಷ್ಠ ಆಟಗಾರ. ಇದು ನಮಗೆಲ್ಲ ಗೊತ್ತಿರುವ ಸಂಗತಿ. ಈ ವಿಷಯದಲ್ಲಿ ನನಗೂ ಯಾವುದೇ ಸಂದೇಹವಿಲ್ಲ" ಎಂದು ಹೇಳಿದರು.

"ಇದೊಂದು ತಂತ್ರಗಾರಿಕೆಯ ವಿಷಯವಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಮ್ಮ ತಂಡ ಆಕ್ರಮಣಕಾರಿ ಆಟವಾಡಿದೆ. ರಾಜ್ಜಾ ಬಗ್ಗೆ ಹೇಳುವುದಾದರೆ ಕ್ಲಬ್ ಮಟ್ಟದಲ್ಲಿ ಅವರೊಬ್ಬ ಪ್ರಮುಖ ಆಟಗಾರರಾಗಿದ್ದಾರೆ. ಹಾಗಂತ ರಾಷ್ಟ್ರೀಯ ತಂಡದಲ್ಲಿ ಅವರಿಗೆ ಅದೇ ಪ್ರಾಮುಖ್ಯತೆ ನೀಡಲಾಗದು" ಎಂದು ಮಾರ್ಟಿನೆಜ್ ತಿಳಿಸಿದ್ದಾರೆ.

"ರಾಜ್ಜಾ ಅವರನ್ನು ನೋಡಲು ನಾನು ರೋಮ್‌ಗೆ ಹೋಗಿದ್ದೆ. ಇಬ್ಬರ ಮಧ್ಯೆ ಸೌಹಾರ್ದಯುತವಾಗಿ ಮಾತುಕತೆ ನಡೆಯಿತು. ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ಸುಲಭವಾಗಿರಲಿಲ್ಲ. ಒಬ್ಬ ಆಟಗಾರನಾಗಿ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ನನಗೆ ಅರಿವಿದೆ. ಆದರೆ ನಾವು ಈಗ ಗೆಲ್ಲುವ ತಂಡವನ್ನು ಕಟ್ಟುವ ದೃಷ್ಟಿಯಿಂದ ಮಾತ್ರ ನೋಡುತ್ತಿದ್ದೇವೆ. ಹೀಗಾಗಿ ಈ ನಿರ್ಧಾರ ಕೇವಲ ತಂತ್ರಗಾರಿಕೆಗೆ ಸಂಬಂಧಿಸಿದ್ದಾಗಿದೆ" ಎಂದು ಮಾರ್ಟಿನೆಜ್ ಮಾಹಿತಿ ನೀಡಿದ್ದಾರೆ.

ಮಾರ್ಟಿನೆಜ್ ಸೋಮವಾರವೇ ತಂಡದ ಆಯ್ಕೆಯನ್ನು ಅಂತಿಮಗೊಳಿಸುವ ನಿರೀಕ್ಷೆ ಇತ್ತು. ಆದರೂ ನಿರ್ಧಾರ ಕೈಗೊಳ್ಳಲು ಅವರು ಮತ್ತಷ್ಟು ಕಾಲಾವಕಾಶ ಪಡೆದುಕೊಂಡಿದ್ದಾರೆ.

ಹಿಮ್ಮಡಿ ಗಾಯದಿಂದ ಬೊರುಸಿಯಾ ಡಾರ್ಟಮಂಡ್‌ನ ಕೊನೆಯ ನಾಲ್ಕು ಬುಂಡೆಸ್ಲಿಗಾ ಪಂದ್ಯಗಳಲ್ಲಿ ಆಡದಿದ್ದರೂ ಮಿಶಿ ಬತ್ಸುಯಿ ತಂಡಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಕ್ರಿಸ್ಟಲ್ ಪ್ಯಾಲೇಸ್‌ನ ಸ್ಟ್ರೈಕರ್ ಆಟಗಾರ ಕ್ರಿಶ್ಚಿಯನ್ ಬೆಂಟೆಕೆ ಅವರು ಸಹ ತಂಡಕ್ಕೆ ಸೇರ್ಪಡೆ ಆಗಿದ್ದಾರೆ.

ಡೆಡ್ರಿಕ್ ಬೊಯಾಟಾ, ನಾಸೆರ್ ಚಾಡ್ಲಿ ಮತ್ತು ಅದ್ನಾನ ಜನುಜಾಝ ಅವರಿಗೂ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಅವಕಾಶ ನೀಡಲಾಗಿದೆ. ಜೂನ್ 18ರಂದು ಪನಾಮಾ ವಿರುದ್ಧ ಮೊದಲ ಆಟವಾಡುವ ಮೂಲಕ ಬೆಲ್ಜಿಯಂ ತನ್ನ ವಿಶ್ವಕಪ್ ಸರಣಿ ಆರಂಭಿಸಲಿದೆ. ಇದರ ನಂತರ ಟ್ಯುನಿಸಿಯಾ ಹಾಗೂ ಇಂಗ್ಲೆಂಡ್‌ನೊಂದಿಗೆ ಸೆಣಸಲಿದೆ.

ಬೆಲ್ಜಿಯಂನ ತಾತ್ಕಾಲಿಕ ಆಟಗಾರರ ಪಟ್ಟಿ

ಗೋಲ್‌ಕೀಪರ್ ಗಳು
ಕೋಯೆನ್ ಕಾಸ್ಟೀಲ್ಸ್ (ವೋಲ್ಫ್ಸಬರ್ಗ್)
ಥಿಬಾಯುಟ್ ಕೋರ್ಟೊಯಿಸ್ (ಚೆಲ್ಸಿಯಾ)
ಸೈಮನ್ ಮಿನೊಲೆಟ್ (ಲಿವರ್ ಪೂಲ್)
ಮ್ಯಾಟ್ಜ್ ಸೆಲ್ಸ್ (ನ್ಯೂ ಕ್ಯಾಸಲ್ ಯುನೈಟೆಡ್)

ಡಿಫೆಂಡರ್ಸ್

ಟೋಬಿ ಆಲ್ಡರ್‍ವೆರಾಲ್ಡ್ (ಟಾಟನ್‌ಹ್ಯಾಮ್)
ಡೆಡ್ರಿಕ್ ಬೊಯಾಟಾ (ಸೆಲ್ಟಿಕ್)
ಲಾರೆಂಟ್ ಸಿಮಾನ್ (ಲಾಸ್ ಎಂಜೆಲಿಸ್ ಎಫ್ ಸಿ)
ಕ್ರಿಶ್ಚಿಯನ್ ಕಬಾಸೆಲೆ (ವ್ಯಾಟ್‌ಫೋರ್ಡ್)
ವಿನ್ಸೆಂಟ್ ಕಂಪನಿ (ಮ್ಯಾಂಚೆಸ್ಟರ್ ಸಿಟಿ)
ಜೋರ್ಡಾನ್ ಲಕಾಕು (ಲಾಝಿಯೊ)
ಥಾಮಸ್ ಮುನಿಯೆರ್ (ಪ್ಯಾರಿಸ್ ಸೇಂಟ್ ಜರ್ಮನ್)
ಥಾಮಸ್ ವರ್ಮಾಲೆನ್ (ಬಾರ್ಸಿಲೋನಾ)
ಜಾನ್ ವರ್ಟೊಂಘೆನ್ (ಟಾಟೆನ್ ಹ್ಯಾಮ್)

ಮಿಡ್‌ಫೀಲ್ಡರ್ಸ್

ನಾಸೆರ್ ಚಾಡ್ಲಿ (ವೆಸ್ಟ್ ಬ್ರಾಮ್)
ಕೆವಿನ್ ಡೆ ಬ್ರುನೆ (ಮ್ಯಾಂಚೆಸ್ಟರ್ ಸಿಟಿ)
ಮೌಸಾ ಡೆಂಬೆಲೆ (ಟಾಟೆನ್ ಹ್ಯಾಮ್)
ಲಿಯಾಂಡರ್ ಡೆಂಡೊಂಕರ್ (ಆಂಡರ್ ಲೆಕ್ಟ್)
ಮರೋನೆ ಫೆಲ್ಲಾನಿ (ಮ್ಯಾಂಚೆಸ್ಟರ್ ಯುನೈಟೆಡ್)
ಅದ್ನಾನ ಜನುಜಾಝ (ರೀಯಲ್ ಸೊಸೈದಾದ್)
ಯೂರಿ ಟೆಲೆಮ್ಯಾನ್ಸ್ (ಮೊನಾಕೊ)
ಅಕ್ಸೆಲ್ ವಿಟ್ಸೆಲ್ (ಟಿಯಾಂಜಿನ್ ಕ್ವಾಂಜಿಯಾನ್)

ಫಾರ್ವರ್ಡ್ಸ್

ಮಿಶಿ ಬತ್ಸುಯಿ (ಚೆಲ್ಸಿಯಾ)
ಕ್ರಿಶ್ಚಿಯನ್ ಬೆಂಟೆಕೆ (ಕ್ರಿಸ್ಟಲ್ ಪ್ಯಾಲೇಸ್)
ಯಾನಿಕ್ ಕಾರಾಸ್ಕೊ (ಡಾಲಿಯಾನ್ ಯಿಫಾಂಗ್)
ಯೆಡೆನ್ ಹಜಾರ್ಡ್ (ಚೆಲ್ಸಿಯಾ)
ಥೊರ್ಗಾನ್ ಹಜಾರ್ಡ್ (ಬೊರುಸಿಯಾ ಮೊಂಚೆಂಗ್ ಗ್ಲಾಡ್ ಬಾಚ್)
ರೊಮೆಲು ಲಕಾಕು (ಮ್ಯಾಂಚೆಸ್ಟರ್ ಯುನೈಟೆಡ್)
ಡ್ರೀಯೆಸ್ ಮೆರ್ಟೆನ್ಸ್ (ನಾಪೋಲಿ)

Story first published: Friday, June 8, 2018, 18:18 [IST]
Other articles published on Jun 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X