ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಕೊರೊ ಇಲ್ಲದೆ ಗೋವಾಕ್ಕೆ ಕಠಿಣ ಸವಾಲಾಗಲಿದೆ ಜೆಮ್ಷೆಡ್ಪುರ್

Sans Coro, Goa face true test of Lobera’s philosophy

ಜೆಮ್ಷೆಡ್ಪುರ, ಅಕ್ಟೋಬರ್ 31: ಗೋವಾ ಎಫ್ಸಿ ತಂಡಕ್ಕೆ ಜೆಮ್ಷೆಡ್ಪುರ ಈ ಬಾರಿ ಕಠಿಣ ಸವಾಲಾಗಲಿದೆ. ಕಳೆದ ಬಾರಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೋವಾ ತಂಡ ಜೆಮ್ಷೆಡ್ಪುರ ವಿರುದ್ಧ ಪ್ರಭುತ್ವ ಸಾಧಿಸಿತ್ತು. ಆದರೆ ಈಗ ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ತಂಡದಿಂದ ಶಕ್ತಿಯ ನೈಜ ಪ್ರದರ್ಶನ ನೀಡಿಸುವುದರಲ್ಲಿದ್ದಾರೆ. ಗುರುವಾರ (ನವೆಂಬರ್ 1) ಇತ್ತಂಡಗಳು ಮುಖಾಮುಖಿಯಾಗುವುದರಲ್ಲಿವೆ.

ಗೋಲ್ ಬಾರಿಸಿ ಗೆಳತಿಗೆ 'ಪ್ರಪೋಸ್' ಮಾಡಿದ ಬೆಲ್ಲೊಗೆ ಯೆಲ್ಲೋ ಕಾರ್ಡ್!ಗೋಲ್ ಬಾರಿಸಿ ಗೆಳತಿಗೆ 'ಪ್ರಪೋಸ್' ಮಾಡಿದ ಬೆಲ್ಲೊಗೆ ಯೆಲ್ಲೋ ಕಾರ್ಡ್!

ಚೆಂಡನ್ನು ಹೆಚ್ಚು ಕಾಲ ನಿಯಂತ್ರಣದಲ್ಲಿರಿಸಿಕೊಳ್ಳುವುದು ಲೊಬೆರಾ ಅವರ ರಣತಂತ್ರ. ಕಳೆದ ಋತುವಿನಿಂದಲೂ ತಮ್ಮ ತಂಡ ಚೆಂಡನ್ನು ಹೆಚ್ಚು ಕಾಲ ನಿಯಂತ್ರಣದಲ್ಲಿರಿಸಿಕೊಳ್ಳುವ ತತ್ವವನ್ನು ಬಳಸುತ್ತಿರುವುದನ್ನು ಗಮನಿಸಿದ್ದಾರೆ. ಅದನ್ನು ಒಪ್ಪಿಯೂಕೊಂಡಿದ್ದಾರೆ. ಇದುವರೆಗೂ ಅವರ ಯೋಜನೆ ನಡೆದುಕೊಂಡು ಬಂದಿದೆ. ಆದರೆ ಫೆರಾನ್ ಕೊರೊಮಿನಾಸ್ ರೆಡ್ ಕಾರ್ಡ್ ಪಡೆದು ಅಮಾನತುಗೊಂಡಿರುವ ಕಾರಣ ವೈಯಕ್ತಿಕ ಆಟಗಾರರನ್ನು ನಂಬಿಕೊಂಡಿರುವ ತಂಡದ ಸಮಸ್ಯೆ ಇಮ್ಮಡಿಗೊಂಡಿದೆ.

ಐಎಸ್‌ಎಲ್ 2018: ಎಫ್‌ಸಿ ಪುಣೆ ಸಿಟಿ ವಿರುದ್ಧ ಗೋಲ್ಮಳೆಯಲ್ಲಿ ಗೆದ್ದ ಗೋವಾಐಎಸ್‌ಎಲ್ 2018: ಎಫ್‌ಸಿ ಪುಣೆ ಸಿಟಿ ವಿರುದ್ಧ ಗೋಲ್ಮಳೆಯಲ್ಲಿ ಗೆದ್ದ ಗೋವಾ

ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ ಕೊರೊಮಿನಾಸ್ ರೆಡ್ ಕಾರ್ಡ್ ಪಡೆದ ಕಾರಣ ಜೆಮ್ಷೆಡ್ಪುರಕ್ಕೆ ಪ್ರಯಾಣಿಸಿಲ್ಲ. ಪುಣೆ ವಿರುದ್ಧದ ಪಂದ್ಯದಲ್ಲಿ ಗೋವಾ 4-2 ಅಂತರದಲ್ಲಿ ಜಯ ಗಳಿಸಿತ್ತು. ಕೊರೊಮಿನಾಸ್ ಎರಡು ಗೋಲುಗಳನ್ನು ಗಳಿಸಿ ತಂಡದಲ್ಲಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಲೊಬೆರಾ ಅವರ ಪ್ರಮುಖ ಅಸ್ತ್ರ ಕೂಡ ಕೊರೊಮಿನಾಸ್. ಅಟ್ಯಾಕ್ ವಿಭಾಗದಲ್ಲಿ ರಣತಂತ್ರ ರೂಪಿಸಲು ಲೊಬೆರೊ ಅವರಿಗೆ ಕೊರೊಮಿನಾಸ್ ಬಿಟ್ಟರೆ ಬೇರೆ ಅಸ್ತ್ರ ಇಲ್ಲ. ಗೋವಾದ ಪರ 24 ಪಂದ್ಯಗಳನ್ನಾಡಿರುವ ಕೊರೊಮಿನಾಸ್ 24 ಗೋಲುಗಳನ್ನು ಗಳಿಸಿದ್ದಾರೆ. ಕೊರೊಮಿನಾಸ್ ಅನುಪಸ್ಥಿತಿ ಕೋಚ್ ಲೊಬೆರಾ ಅವರ ಯೋಜನೆಗಳಿಗೆ ಅಡ್ಡಿಯಾಗುವುದು ಸಹಜ.

ತಂಡದ ಶ್ರಮ ಮುಖ್ಯ

ತಂಡದ ಶ್ರಮ ಮುಖ್ಯ

'ವೈಯಕ್ತಿಕ ಆಟಗಾರರಿಗಿಂತ ತಂಡದ ಶ್ರಮ ಪ್ರಮುಖ ಎಂಬುದನ್ನು ನಾನು ಕಾಯ್ದುಕೊಂಡು ಬಂದವ. ನಮ್ಮ ತಂಡ ಉತ್ತಮ ಅವಕಾಶಗಳನ್ನು ನಿರ್ಮಿಸುವ ತಂಡ. ಅದಕ್ಕೆ ನಾನು ಚಿರಋಣಿಯಾಗಿದ್ದೇನೆ. ಕೊರೊ ಅವರಂಥ ಸ್ಟ್ರೈಕರ್ ಇರುವುದು ನಮ್ಮ ಅದೃಷ್ಟ. ಆದರೆ ನಮ್ಮಲ್ಲಿ ಬೆಂಚ್‌ನಲ್ಲಿರುವ ಆಟಗಾರರೂ ಗೋಲು ಗಳಿಸುವ ಸಾಮರ್ಥ್ಯ ಹೊಂದಿರುವುದು ಖುಷಿಯ ವಿಚಾರ' ಎಂದು ಲಾಸ್ ಪಾಮ್ಸ್‌ನ ಮಾಜಿ ಕೋಚ್ ಹೇಳಿದ್ದಾರೆ. ಸಾಕಷ್ಟು ದಾಳಿಯನ್ನು ಮಾಡುವ ಆಟಗಾರರನ್ನು ಹೊಂದಿರುವ ಕಾರಣ ಅತಿ ಹೆಚ್ಚು ಗೋಲು ಗಳಿಸಿದ ತಂಡವಾಗಿ ಗೋವಾ ಅಗ್ರ ಸ್ಥಾನದಲ್ಲಿದೆ. ಕಳೆದ ಬಾರಿ ಚಾಂಪಿಯನ್ ತಂಡ ಚೆನ್ನೈಯಿನ್ ವಿರುದ್ಧ ಪ್ಲೇ ಆ್‌ನಲ್ಲಿ ಗೋವಾ ಸೋತಿತ್ತು. ಈ ಬಾರಿ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ ನಂತರ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಪ್ರಭುತ್ವ ಹೊಂದಿದೆ.

31 ಗೋಲುಗಳು

31 ಗೋಲುಗಳು

ಕಳೆದ ಬಾರಿ ಆಡಿರುವ 18 ಲೀಗ್ ಪಂದ್ಯಗಳಲ್ಲಿ ತಂಡ 42 ಗೋಲು ಗಳಿಸಿ ಪ್ರೇಕ್ಷಕರಿಗೆ ಫುಟ್ಬಾಲ್‌ನ ಸವಿ ನೀಡಿತ್ತು. ಕೊರೊಮಿನಾಸ್ ಹಾಗೂ ಮ್ಯಾನ್ವೆಲ್ ಲಾನ್ಜರೋಟ್ ಅವರು ಒಟ್ಟಾಗಿ 31 ಗೋಲುಗಳನ್ನು ಗಳಿಸಿರುವುದು ವಿಶೇಷ. ಲಾನ್ಜರೋಟ್ ಈಗ ಎಟಿಕೆ ಪರ ಆಡುತ್ತಿರುವುದು ಗೋವಾಕ್ಕೆ ತುಂಬಲಾರದ ನಷ್ಟ. ಅವರ ಅನುಪಸ್ಥಿತಿ ತಂಡದ ಮೇಲೆ ಪರಿಣಾಮ ಬೀರಿರುವುದು ಸ್ಪಷ್ಟ.

ಆಡಿದ್ದು ಕೇವಲ 44 ನಿಮಿಷ

ಆಡಿದ್ದು ಕೇವಲ 44 ನಿಮಿಷ

ಲಾನ್ಜರೋಟ್ ಅವರ ಅನುಪಸ್ಥಿತಿಯಲ್ಲೂ ಲೊಬೆರಾ ತಂಡದ ಅಟ್ಯಾಕ್ ವಿಭಾಗದಲ್ಲಿ ಸಮತೋಲವನ್ನು ಕಾಯ್ದುಕೊಂಡಿದ್ದಾರೆ. ವಿಂಗರ್ ವಿಭಾಗದಲ್ಲಿ ಮಂದಾರ ರಾವ್ ದೇಸಾಯಿ ಈ ಬಾರಿ ಫುಲ್ ಬ್ಯಾಕ್ ನಲ್ಲಿದ್ದಾರೆ. ಎಡು ಬೇಡಿಯಾ ಈಗ ವಿಂಗರ್ ವಿಭಾಗದಲ್ಲಿದ್ದಾರೆ. ಸ್ಪೇನ್‌ಮೂಲದ ಆಟಗಾರ ಮಿಗ್ವೆಲ್ ಪಲಾಂಕಾ ಅವರು ಲಾನ್ಜರೋಟ್ ಅವರ ಸ್ಥಾನವನ್ನು ತುಂಬುತ್ತಿದ್ದಾರೆ. ಆದರೆ ಅವರು ಇದುವರೆಗೂ ಆಡಿದ್ದು ಕೇವಲ 44 ನಿಮಿಷ.

ಸಾಮರ್ಥ್ಯ ತೋರುವ ಅವಕಾಶ

ಸಾಮರ್ಥ್ಯ ತೋರುವ ಅವಕಾಶ

ಈಗ ಪಲಾಂಕಾ ಅವರಿಗೆ ತಮ್ಮ ನೈಜ ಸಾಮರ್ಥ್ಯವನ್ನು ತೋರುವ ಅವಕಾಶ. ಮುಂಬೈ ಸಿಟಿ ವಿರುದ್ಧದ ಪಂದ್ಯದಲ್ಲಿ ಪಲಾಂಕಾ ಎರಡು ಗೋಲು ಗಳಿಸಿದ್ದರು. ಆ ಪಂದ್ಯದಲ್ಲಿ ಗೋವಾ 5-0 ಅಂತರದಲ್ಲಿ ಗೆದ್ದಿತ್ತು. ಮುಂದಿನ ಪಂದ್ಯದಲ್ಲೂ ಪಲಾಂಕಾ ಅದೇ ರೀತಿಯಲ್ಲಿ ಗೋಲು ಗಳಿಸಿದರೆ ಗೋವಾ ತಂಡ ಕೊರೊ ಅವರನ್ನು ಯಾವಾಗಲೂ ನಂಬಿಕೊಂಡಿರುವುದರಿಂದ ಹೊರ ಬರಲಿದೆ. ಆದರೂ ಗೋವಾ ತಂಡಕ್ಕೆ ಜೆಮ್ಷೆಡ್ಪುರ ನಿಜವಾದ ಅಗ್ನಿಪರೀಕ್ಷೆ.

Story first published: Wednesday, October 31, 2018, 16:32 [IST]
Other articles published on Oct 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X