ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

100ನೇ ಪಂದ್ಯದಲ್ಲಿ ಮಿಂಚಿದ ಛೆಟ್ರಿ, ಭಾರತಕ್ಕೆ ಭರ್ಜರಿ ಜಯ

By Mahesh
100ನೇ ಪಂದ್ಯದಲ್ಲಿ ಮಿಂಚಿದ ಛೆಟ್ರಿ, ಭಾರತಕ್ಕೆ ಭರ್ಜರಿ ಜಯ | Oneindia Kannada
Sunil Chhetri scores brace in 100th International Cap to lead India to a 3-0 win over Kenya.

ಮುಂಬೈ, ಜೂನ್ 04: ಇಲ್ಲಿನ ಅಂಧೇರಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದಿರುವ ಇಂಟರ್ ​ಕಾಂಟಿನೆಂಟಲ್ ಕಪ್ ​ನ 2ನೇ ಪಂದ್ಯದಲ್ಲಿ ಸೋಮವಾರ ರಾತ್ರಿ ಭಾರತ ತಂಡವು ಭರ್ಜರಿ ಜಯ ದಾಖಲಿಸಿದೆ.

ವೃತ್ತಿ ಬದುಕಿನ 100ನೇ ಪಂದ್ಯವಾಡುತ್ತಿರುವ ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಅವರು ಅದ್ಭುತ ಪ್ರದರ್ಶನ ನೀಡಿ, ತಂಡದ ಪರ ಎರಡು ಗೋಲು ಗಳಿಸಿ, ತಂಡದ ಗೆಲುವಿಗೆ ಕಾರಣರಾದರು. ಕೀನ್ಯಾ ವಿರುದ್ಧ ಭಾರತ 3-0 ಅಂತರದಿಂದ ಜಯ ದಾಖಲಿಸಿತು.

ಮುಂದಿನ ವರ್ಷದ ಏಷ್ಯನ್ ಕಪ್ ಟೂರ್ನಿಗೆ ಪೂರ್ವಭಾವಿಯಾಗಿ ನಡೆದಿರುವ ಈ ಟೂರ್ನಮೆಂಟ್ ನಲ್ಲಿ ಇದು ಬ್ಲೂ ಟೈಗರ್ಸ್ ಗಳಿಗೆ ಸತತ ಎರಡನೇ ಗೆಲುವಾಗಿದೆ. ವಿಶ್ವ ಶ್ರೇಯಾಂಕದಲ್ಲಿ 97ನೇ ಸ್ಥಾನದಲ್ಲಿರುವ ಭಾರತವು ತನ್ನ ಮೊದಲ ಪಂದ್ಯದಲ್ಲಿ ಚೀನಾ ತೈಪೆ ತಂಡವನ್ನು 5-0 ಅಂತರದಿಂದ ಸೋಲಿಸಿ ಶುಭಾರಂಭ ಮಾಡಿತ್ತು. ಈ ಪಂದ್ಯದಲ್ಲಿ ಛೆಟ್ರಿ ಹ್ಯಾಟ್ರಿಕ್ ಗೋಲು ಬಾರಿಸಿದ್ದರು.

ಕೀನ್ಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಛೆಟ್ರಿ ಅವರು ಈವರೆಗೂ ಆಡಿರುವ 99 ಪಂದ್ಯಗಳಿಂದ 59 ಗೋಲು ಸಿಡಿಸಿದ್ದರು. ಈಗ 100 ಪಂದ್ಯಗಳಿಂದ 61ಗೋಲು ಗಳಿಸಿದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ತಂಡವನ್ನು 1-2 ಅಂತರದಿಂದ ಸೋಲಿಸಿದ್ದ ಕೀನ್ಯಾ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು.

ಆದರೆ, ಪಂದ್ಯ 68ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೈಕ್ ಮೂಲಕ ಛೆಟ್ರಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಭಾರತದ ಪರ ಜೆಜೆ ಲಾಲ್ಪೆಖ್ಲುಯಾ 71ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪಂದ್ಯದ ಕೊನೆ ಕ್ಷಣದಲ್ಲಿ 90+2 ನಿಮಿಷದಲ್ಲಿ ಛೆಟ್ರಿ ಮತ್ತೊಂದು ಗೋಲು ಬಾರಿಸಿದರು. ಜೂನ್ 047ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ಸೆಣಸಲಿದೆ.

Story first published: Monday, June 4, 2018, 23:45 [IST]
Other articles published on Jun 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X