ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ದಂತಕತೆ ಬಲ್ಬೀರ್ ಸಿಂಗ್ ತೀವ್ರ ಅಸ್ವಸ್ಥ: ಕೊರೊನಾ ಪರೀಕ್ಷೆ

Hockey Legend Balbir Singh SR Hospitalised in Critical Condition

ಭಾರತೀಯ ಹಾಕಿ ಕ್ರೀಡೆಯ ದಂತಕತೆ ಬಲ್ಬೀರ್ ಸಿಂಗ್ (96) ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಬಲ್ಬೀರ್ ಸಿಂಗ್ ಸ್ವಾಭಾವಿಕವಾಗಿ ಉಸಿರಾಟವನ್ನು ನಡೆಸಲು ಅಶಕ್ತರಾಗಿದ್ದಾರೆ. ಪ್ರಸ್ತುತ ಅವರಿಗೆ ವೆಂಟಿಲೇಟರ್ ಮೂಲಕ ಉಸಿರಾಟ ಪ್ರಕ್ರಿಯೆ ನಡೆಸಲಾಗುತ್ತಿದೆ.

ಚಂಡಿಗಢದಲ್ಲಿ ಪುತ್ರಿ ಹಾಗೂ ಮೊಮ್ಮಗನೊಂದಿಗೆ ವಾಸವಾಗಿರುವ ಬಲ್ಬೀರ್ ಸಿಂಗ್, ನ್ಯೂಮೊನಿಯದ ಜತೆಗೆ ಅಧಿಕ ಜ್ವರದಿಂದ ಬಳಲುತ್ತಿದ್ದಾರೆ. ಶನಿವಾರ ಅವರ ಆರೋಗ್ಯದಲ್ಲಿ ತೀರ್ವ ಏರುಪೇರು ಕಂಡ ತಕ್ಷಣವೇ ಅವರನ್ನು ಕೂಡಲೇ ಅವರನ್ನು ಚಂಡಿಗಢದ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಗೂಲಿ or ಧೋನಿ; ಕೊಹ್ಲಿ or ಸಚಿನ್: ಕೈಫ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳುಗಂಗೂಲಿ or ಧೋನಿ; ಕೊಹ್ಲಿ or ಸಚಿನ್: ಕೈಫ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು

ಆಸ್ಪತ್ರೆಗೆ ದಾಖಲಾಗಿರುವ ಬಲ್ಬೀರ್ ಅವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ ಫಲಿತಾಂಶಗಳು ಇನ್ನಷ್ಟೇ ಬರಬೇಕಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬಲ್ಬೀರ್ ಸಿಂಗ್ ಅವರಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.

ಭಾರತ ಹಾಕಿ ತಂಡ ಸಾಧಿಸಿದ ಹಲವು ಗೆಲುವುಗಳಲ್ಲಿ ಬಲ್ಬೀರ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ೧೯೪೮, ೧೯೫೨, ೧೯೫೬ರಲ್ಲಿ ನಡೆದ ಒಲಿಂಪಿಕ್ಸ್ ಭಾರತ ಪದಕ ಮುಡಿಗೇರಿಸಿಕೊಂಡಿತ್ತು. ಆಗಿನ ಭಾರತೀಯ ಹಾಕಿ ತಂಡದಲ್ಲಿ ಬಲ್ಬೀರ್ ಸಿಂಗ್ ಸದಸ್ಯರಾಗಿದ್ದರು.

Story first published: Sunday, May 10, 2020, 20:39 [IST]
Other articles published on May 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X