ಹಾಕಿ ವಿಶ್ವ ಲೀಗ್ ಗೆ ಭಾರತ ತಂಡ ಪ್ರಕಟ, ಸರ್ದಾರ್ ಸಿಂಗ್ ಔಟ್

Posted By:

ಬೆಂಗಳೂರು, ನವೆಂಬರ್ 17: ಭುವನೇಶ್ವರದಲ್ಲಿ ಆರಂಭಗೊಳ್ಳಲಿರುವ ಹಾಕಿ ವಿಶ್ವಲೀಗ್ ಫೈನಲ್ ಗೆ ಭಾರತ ತಂಡವನ್ನು ಶುಕ್ರವಾರದಂದು ಪ್ರಕಟಿಸಲಾಗಿದೆ. ಮಾಜಿ ನಾಯಕ, ಪ್ರಮುಖ ಆಟಗಾರ ಸರ್ದಾರ್ ಸಿಂಗ್ ಅವರು ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ.

ಚೀನಾ ಬಗ್ಗುಬಡಿದು ಏಷ್ಯಾಕಪ್ ಗೆದ್ದ ಭಾರತದ ವನಿತೆಯರು

ಆದರೆ, ಪೆನಾಲ್ಟಿ ಕಾರ್ನರ್ ತಜ್ಞ ಹಾಗೂ ಡಿಫೆಂಡರ್ ರುಪಿಂದರ್ ಪಾಲ್ ಸಿಂಗ್, ಮಿಡ್ ಫೀಲ್ಡರ್ ಬಿರೇಂದ್ರ ಲಾಕ್ರಾ ಅವರನ್ನು ತಂಡಕ್ಕೆ ಮತ್ತೆ ಕರೆಸಿಕೊಳ್ಳಲಾಗಿದೆ. ಕಳೆದ ತಿಂಗಳು ಢಾಕಾದಲ್ಲಿ ಏಷ್ಯಾ ಕಪ್ ನಲ್ಲಿ ಆಡಿದ ತಂಡದಲ್ಲಿದ್ದ ಸರ್ದಾರ್(31) ಅವರು ಉತ್ತಮ ಡಿಫೆಂಡರ್ ಆಗಿ ಪ್ರದರ್ಶನ ನೀಡಿದ್ದರು. ಆದರೆ, ಹಾಕಿ ಇಂಡಿಯಾದ ಆಯ್ಕೆದಾರರ ಮನ ಓಲೈಸುವಲ್ಲಿ ವಿಫಲರಾಗಿದ್ದಾರೆ.

Sardar Singh axed from India's Hockey World League Final squad

ಮನ್ ಪ್ರೀತ್ ಅವರು ತಂಡದ ನಾಯಕರಾಗಿ ಮುಂದುವರೆಯಲಿದ್ದು, ಚಿಂಗ್ಲೆಸನಾ ಸಿಂಗ್ ಅವರು ಉಪ ನಾಯಕರಾಗಿದ್ದಾರೆ. ವಿಶ್ವ ಹಾಕಿ ಲೀಗ್ ಟೂರ್ನಮೆಂಟ್ ನಲ್ಲಿ ಬಿ ಗುಂಪಿನಲ್ಲಿ ಭಾರತದ ಜತೆಗೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಹಾಗೂ ಜರ್ಮನಿ ಕೂಡಾ ಇವೆ.ಡಿಸೆಂಬರ್ 01ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ.

ತವರಿಗೆ ಬಂದಿಳಿದ ಭಾರತ ಹಾಕಿ ತಂಡಕ್ಕೆ ಭವ್ಯ ಸ್ವಾಗತ

ತಂಡ ಇಂತಿದೆ:
ಗೋಲ್ ಕೀಪರ್ಸ್: ಆಕಾಶ್ ಅನಿಲ್ ಚಿಕ್ಟೆ, ಸೂರಜ್, ಕರ್ಕೆರಾ
ಡಿಫೆಂಡರ್ಸ್: ಹರ್ಮನ್ ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ದಿಪ್ಸನ್ ಟಿರ್ಕಿ, ವರುಣ್ ಕುಮಾರ್, ರುಪೀಂದರ್ ಸಿಂಗ್, ಬಿರೇಂದ್ರ ಲಾಕ್ರಾ
ಮಿಡ್ ಫೀಲ್ದರ್ಸ್ : ಮನ್ ಪ್ರೀತ್ ಸಿಂಗ್ (ನಾಯಕ), ಚಿಂಗ್ಲೆನ್ಸಾನಾ ಸಿಂಗ್ (ಉಪ ನಾಯಕ), ಎಸ್ ಕೆ ಉತ್ತಪ್ಪ, ಸುಮಿತ್, ಕೊತಾಜಿತ್ ಸಿಂಗ್.
ಮುಂಪಡೆ: ಎಸ್ ವಿ ಸುನಿಲ್, ಆಕಾಶ್ ದೀಪ್ ಸಿಂಗ್, ಮನ್ ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ್, ಗುರ್ಜಂತ್ ಸಿಂಗ್

Story first published: Friday, November 17, 2017, 13:10 [IST]
Other articles published on Nov 17, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ