ಹಾಕಿ: ಗೋಲಿನ ಸುರಿಮಳೆಗೈದ ಆಸ್ಟ್ರೇಲಿಯಾ, ಭಾರತಕ್ಕೆ ಭಾರೀ ಸೋಲು

ಟೋಕಿಯೋ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಹಾಕಿ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಭರ್ಜರಿ ಪ್ರದರ್ಶನದ ಮುಂದೆ ಭಾರತ ತಂಡ ಮಂಕಾಗಿದೆ. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ಗೋಲಿನ ಮೇಲೆ ಗೋಲು ಗಳಿಸುತ್ತಾ ಸಾಗಿತು. ಅಂತಿಮವಾಗಿ 7-1ರ ಬೃಹತ್ ಅಂತರದಿಂದ ಭಾರತ ತಂಡವನ್ನು ಮಣಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.

ಮೊದಲಾರ್ಧದಲ್ಲಿಯೇ 4-0 ಅಂತರದಿಂದ ಮುನ್ನಡೆಯನ್ನು ಸಾಧಿಸಿತ್ತು ಬಲಿಷ್ಠ ಆಸ್ಟ್ರೇಲಿಯಾ. ಇದೇ ಆಟವನ್ನು ಪಂದ್ಯದ ಅಂತ್ಯದವರೆಗೂ ಮುಂದುವರಿಸಿಕೊಮಡು ಸಾಗಿತ್ತು. ಭಾರತದ ರಕ್ಷಣಾ ಕೋಟೆಯನ್ನು ಕೆಡವುತ್ತಾ ಸಾಗಿದ ಆಸಿಸ್ ಸುಲಭವಾಗಿ ಪಂದ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಅಂತಿಮ ಹಂತದವರೆಗೂ ಸ್ಥಿರ ಪ್ರದರ್ಶನ ನೀಡಲು ಯಶಸ್ವಿಯಾದ ಆಸ್ಟ್ರೇಲಿಯಾ ಭಾರತ ತಂಡದ ವಿರುದ್ಧ ಭಾರೀ ಗೆಲುವು ಸಾಧಿಸಿದೆ.

ದ್ವಿತಿಯಾರ್ಧದಲ್ಲಿ ಭಾರತ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತಾದರೂ ಇದರಿಂದ ಹೆಚ್ಚಿನ ಉಪಯೋಗವೇನೂ ಆಗಲಿಲ್ಲ. ದ್ವಿತೀಯಾರ್ಧದ ಮೊದಲ ಕ್ವಾರ್ಟರ್(ಮೂರನೇ ಕ್ವಾರ್ಟರ್) ಅವಧಿಯಲ್ಲಿ ಒಂದು ಗೋಲುಗಳಿಸಲಷ್ಟೇ ಭಾರತ ತಂಡ ಶಕ್ತವಾಯಿತು. ದಿಲ್‌ಪ್ರೀತ್ ಸಿಂಗ್ ಭಾರತದ ಪರವಾಗಿ ಏಕೈಕ ಗೋಲು ಬಾರಿಸಲು ಶಕ್ತರಾದರು.

ಮೂರನೇ ಕ್ವಾರ್ಟರ್‌ನಲ್ಲಿಯೂ ಆಸ್ಟ್ರೇಲಿಯಾ ಮತ್ತೆರಡು ಗೋಲು ಗಳಿಸಲು ಶಕ್ತವಾಯಿತು. ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ಆಸ್ಟ್ರೇಲಿಯಾ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಮತ್ತೊಂದು ಪೆನಾಲ್ಟಿ ಕಾರ್ನರ್ ಪಡೆದ ಆಸ್ಟ್ರೇಲಿಯಾ ಅದರಲ್ಲಿಯೂ ಗೋಲುಗಳಿಸಲು ಶಕ್ತವಾಗಿತ್ತು. ಈ ಮೂಲಕ ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ ಎರಡು ತಂಡಗಳ ನಡುವಿನ ಅಂತರ 6-1 ಆಗಿತ್ತು.

ನಾಲ್ಕನೇ ಕ್ವಾರ್ಟರ್‌ನಲ್ಲಿಯೂ ಆಸ್ಟ್ರೇಲಿಯಾ ತಂಡದ ಪರಾಕ್ರಮ ಮುಂದಿವರಿದಿತ್ತು. ಟಿಮ್ ಬ್ರಾಂಡ್ ಆಸ್ಟ್ರೇಲಿಯಾ ತಂಡಕ್ಕೆ ಏಳನೇ ಗೋಲನ್ನು ಸೇರ್ಪಡೆಗೊಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಅಮೋಘ ಗೆಲುವನ್ನು ಸಾಧಿಸಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, July 25, 2021, 16:41 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X