ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ ಲೀಗ್‌ಗೆ ತಂಡಗಳು ಪ್ರಕಟ

Indo International Premier Kabaddi League 2019 (IPKL) Team List

ಬೆಂಗಳೂರು, ಏಪ್ರಿಲ್‌ 23: ಚೊಚ್ಚಲ ಆವೃತ್ತಿಯ ಇಂಡೋ ಇಂಟರ್‌ನ್ಯಾಷನಲ್‌ ಕಬಡ್ಡಿ ಲೀಗ್‌ (ಐಪಿಕೆಎಲ್‌) ಟೂರ್ನಿಗೆ ವಿವಿಧ ಫ್ರಾಂಚೈಸಿ ತಂಡಗಳನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಮೇ 13ರಿಂದ ಜೂನ್‌ 4ರವರೆಗೆ ಚೊಚ್ಚಲ ಆವೃತ್ತಿಯ ಐಪಿಕೆಎಲ್‌ ಕಬಡ್ಡಿ ಟೂರ್ನಿಯು ಪುಣೆ, ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ನಡೆಯಲಿದೆ. ವಿವಿಧ ನಗರಗಳ ಒಟ್ಟು 8 ಫ್ರಾಂಚೈಸಿ ತಂಡಗಳು ಈ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತಿ ತಂಡದಲ್ಲಿ ಸಮತೋಲನ ತರುವ ಉದ್ದೇಶದಿಂದ ಕನಿಷ್ಠ ಇಬ್ಬರು ಲಿಸ್ಟ್‌ 'ಎ' ಆಟಗಾರರನ್ನು ಹೊಂದುವಂತೆ ಮಾಡಲಾಗಿದೆ. ವಿವಿಧ ಫ್ರಾಂಚೈಸಿ ತಂಡಗಳಲ್ಲಿ ಆಡುವ ಲಿಸ್ಟ್‌ 'ಎ' ಆಟಗಾರರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.

ಸ್ಥಳೀಯ ಆಟಗಾರರಿಗೆ ಹೆಚ್ಚು ಆದ್ಯತೆ ನೀಡುವ ಉದ್ದೇಶದಿಂದ ನೂತನ ಕಬಡ್ಡಿ ಸಂಘಟನೆಯು ಆಯೋಜಿಸುತ್ತಿರುವ ಟೂರ್ನಿಯಲ್ಲಿ ಈ ಬಾರಿ ಒಟ್ಟಾರೆ 146 ಮಂದಿ ಭಾರತೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮುಂಬರುವ ದಿನಗಳಲ್ಲಿ ವಿದೇಶಿ ಆಟಗಾರರು ಕೂಡ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು ರೈನೋಸ್‌

ಬೆಂಗಳೂರು ರೈನೋಸ್‌

1. ಆರುಮುಗಮ್‌ (ರೈಟ್‌ ಕವರ್‌/ರೇಡರ್‌; ರಾಜ್ಯ: ಕರ್ನಾಟಕ), ಭಾರತ ತಂಡದ ಪರ ಮತ್ತು ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಿದ ಅನುಭವ.
2. ವಿಪಿನ್‌ ಮಲಿಕ್‌ (ಲೆಫ್ಟ್‌ 3/ರೇಡರ್‌; ರಾಜ್ಯ: ಉತ್ತರ ಪ್ರದೇಶ), ದಬಾಂಗ್‌ ಡೆಲ್ಲಿ ತಂಡದ ಮಾಜಿ ಆಟಗಾರ.

ಚೆನ್ನೈ ಚಾಲೆಂಜರ್ಸ್‌
1. ಸಿಎಚ್‌ ಮನೋಜ್‌ ಕುಮಾರ್‌ (ಆಲ್‌ರೌಂಡರ್‌; ರಾಜ್ಯ: ಆಂಧ್ರ ಪ್ರದೇಶ), ರಾಷ್ಟ್ರೀಯ ತಂಡದ ಆಟಗಾರ, ಪ್ರೊ ಕಬಡ್ಡಿ ಲೀಗ್‌ನ ಮಾಜಿ ಆಟಗಾರ.
2. ಮೋಫಿ ಮೊಂಡಲ್‌ (ಲೆಫ್ಟ್‌ ಕವರ್‌; ರಾಜ್ಯ: ಪಶ್ಚಿಮ ಬಂಗಾಳ).

ಮುಂಬಯಿ ಚೆ ರಾಜೆ

ಮುಂಬಯಿ ಚೆ ರಾಜೆ

1. ಶಶಾಂಕ್‌ ವಾಂಖೆಡೆ (ಲೆಫ್ಟ್‌ ಕವರ್‌/ ಡಿಫೆಂಡರ್‌; ರಾಜ್ಯ: ಮಹಾರಾಷ್ಟ್ರ), ಪ್ರೊ ಕಬಡ್ಡಿ ಲೀಗ್‌ನನ ಮಾಜಿ ಆಟಗಾರ ಮತ್ತು ರಾಷ್ಟ್ರೀಯ ತಂಡದ ಶ್ರೇಷ್ಠ ಡಿಫೆಂಡರ್‌ಗಳಲ್ಲಿ ಒಬ್ಬ.
2. ವಿಜಯ್‌ ಸಿಂಗ್‌ ಸಾವ್ನರ್‌ (ರೇಡರ್‌; ರಾಜ್ಯ: ಮಧ್ಯ ಪ್ರದೇಶ), ರಾಷ್ಟ್ರೀಯ ಮಟ್ಟದ ಕಬಟ್ಟಿ ಆಟಗಾರ.

ಪುದುಚರಿ ಪ್ರೆಡೆಟರ್ಸ್‌
1. ಕರಮ್‌ಬೀರ್‌ (ಆಲ್‌ರೌಂಡರ್‌; ರಾಜ್ಯ: ಹರಿಯಾಣ).
2. ಪ್ರವೀಣ್‌ ಕುಮಾರ್‌ (ರೇಡರ್‌; ರಾಜ್ಯ : ಹರಿಯಾಣ), 2014ರಲ್ಲಿ ನಡೆದ ಇಂಚಿಯಾನ್‌ ಏಷ್ಯನ್‌ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಆಟಗಾರ ಮತ್ತು ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಿದ ಅನುಭವ.

 ಪುಣೆ ಪ್ರೈಡ್‌

ಪುಣೆ ಪ್ರೈಡ್‌

1. ಜೀತೇಂದ್ರ ಯಾದವ್‌ (ಲೆಫ್ಟ್‌ ಕವರ್‌/ ರೇಡರ್‌; ರಾಜ್ಯ: ರಾಜಸ್ಥಾನ), ರಾಷ್ಟ್ರೀಯ ಕಬಡ್ಡಿ ಆಟಗಾರ ಮತ್ತು ವಿಶ್ವಕಪ್‌ನಲ್ಲಿ ಆಡಿದ ಭಾರತ ತಂಡದ ಸದಸ್ಯ.
2. ವಿ. ವಿಮಲ್‌ ರಾಜ್‌ (ರೇಡರ್‌; ರಾಜ್ಯ: ತಮಿಳುನಾಡು), ಪ್ರೊ ಕಬಡ್ಡಿ ಲೀಗ್‌ನ ತಮಿಳ್‌ ತಲೈವಾಸ್‌ ತಂಡದ ಮಾಜಿ ಆಟಗಾರ.

ತೆಲುಗು ಬುಲ್ಸ್‌
1. ಹರ್ವಿಂದರ್‌ ಸಿಂಗ್‌ (ರೈಟ್‌ ಕವರ್‌; ರಾಜ್ಯ: ಪಂಜಾಬ್‌), ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟನ್‌ ತಂಡದ ಪರ ಆಡಿದ ಅನುಭವ.
2. ನಾಗೇಶ್ವರ್‌ ಸಿಂಗ್‌ (ರೇಡರ್‌; ರಾಜ್ಯ: ಉತ್ತರ ಪ್ರದೇಶ).

ದಿಲರ್‌ ದಿಲ್ಲಿ

ದಿಲರ್‌ ದಿಲ್ಲಿ

1. ಸುನಿಲ್‌ ಜಯಪಾಲ್‌ (ಆಲ್‌ರೌಂಡರ್‌; ತಂಡ: ಪಶ್ಚಿಮ ರೈಲ್ವೇ ), ಪ್ರೊ ಕಬಡ್ಡಿ ಲೀಗ್‌, ಬೆಂಗಳೂರು ಬುಲ್ಸ್‌, ಬೆಂಗಾಲ್‌ ವಾರಿಯರ್ಸ್‌ನ ಮಾಜಿ ಆಟಗಾರ.
2. ಪಿ ಅರುಣಾಚಲಂ (ರೇಡರ್‌; ರಾಜ್ಯ: ತಮಿಳುನಾಡು).

ಹರಿಯಾಣ ಹೀರೋಸ್‌
1. ಸತ್ನಾಮ್‌ ಸಿಂಗ್‌ (ರೇಡರ್‌; ರಾಜ್ಯ: ಹಿಮಾಚಲ ಪ್ರದೇಶ).
2. ಸಾಗರ್‌ ಸಿಂಗ್‌ (ರೇಡರ್‌; ರಾಜ್ಯ: ಪಂಜಾಬ್‌)

Story first published: Tuesday, April 23, 2019, 17:45 [IST]
Other articles published on Apr 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X