ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2023: ಬೆಂಗಳೂರು ಬುಲ್ಸ್‌ನ ಭರತ್ ಅಬ್ಬರಕ್ಕೆ ಸೈಲೆಂಟಾದ ದಬಾಂಗ್ ಡೆಲ್ಲಿ

PKL 2022: Powerfull Performance by Bharat Helps Bengaluru Bulls Beat Dabang Delhi

ಬೆಂಗಳೂರು ಬುಲ್ಸ್ ರೋಮಾಂಚಕಾರಿ ಜಯದ ಮೂಲಕ ಪ್ರೋ ಕಬಡ್ಡಿ ಲೀಗ್‌ನ ಸೀಸನ್ 9ರಲ್ಲಿ ಗೆಲುವಿನ ಹಳಿಗೆ ಮರಳಿದೆ. ಭಾನುವಾರ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆಸಿ ವಿರುದ್ಧ 52-49 ಅಂಕಗಳ ಭರ್ಜರಿ ಜಯ ಸಾಧಿಸಿತು.

ಮೊದಲಾರ್ಧದಲ್ಲಿ ಯಾವ ಪ್ರತಿರೋಧವನ್ನು ತೋರದ ಬೆಂಗಳೂರು ಗೂಳಿಗಳು ದ್ವಿತೀಯಾರ್ಧದಲ್ಲಿ ಮಾತ್ರ ಅಬ್ಬರಿಸಿದವು. ಪ್ರಥಮಾರ್ಧದ ವೇಳೆಗೆ 16-25 ಅಂಕಗಳೊಂದಿಗೆ ಹಿಂದೆ ಬಿದ್ದಿದ್ದ ಬೆಂಗಳೂರು ಬುಲ್ಸ್ ದ್ವಿತೀಯಾರ್ಧದಲ್ಲಿ ಅಕ್ಷರಶಃ ಆರ್ಭಟಿಸಿತು.

ಬುಲ್ಸ್‌ ತಂಡದ ಸ್ಟಾರ್ ರೈಡರ್ ಒಂದೇ ಒಂದ್ಯದಲ್ಲಿ 23 ರೈಡಿಂಗ್ ಅಂಕಗಳನ್ನು ಗಳಿಸುವ ಮೂಲಕ ದಬಾಂಗ್ ಡೆಲ್ಲಿ ತಂಡಕ್ಕೆ ಆಘಾತ ನೀಡಿದರು. ಭರತ್ ಬೆಂಬಲವಾಗಿ ವಿಕಾಸ್ ಖಂಡೋಲಾ ಕೂಡ 10 ರೈಡಿಂಗ್ ಅಂಕಗಳನ್ನು ಪಡೆದು ಮಿಂಚಿದರು.

ದಬಾಂಗ್ ಡೆಲ್ಲಿ ಕೆ.ಸಿ.ಯ ನವೀನ್ ಕುಮಾರ್ ಮೊದಲಾರ್ಧದಲ್ಲಿ ಕೇವಲ ಎರಡು ಅಂಕಗಳನ್ನು ದಾಖಲಿಸಿದರು, ನಂತರ ಇತರೆ ಆಟಗಾರರು ಕೂಡ ಆಕ್ರಮಣಕಾರಯಾಗಿ ಆಡಿದರು. ಆಶು ಮಲಿಕ್ ಮತ್ತು ವಿಜಯ್ ಮಲಿಕ್ ಸರಂಧ್ರ ರೈಡಿಂಗ್ ಪಾಯಿಂಟ್‌ಗಳನ್ನು ಗಳಿಸಿದರು.

ಪಂದ್ಯ ಆರಂಭವಾದ 8 ನಿಮಿಷಗಳಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಡೆಲ್ಲಿ 13-7 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಅದಾದ ಐದು ನಿಮಿಷಗಳಲ್ಲೇ ಮತ್ತೊಮ್ಮೆ ಆಲೌಟ್ ಆಗುವ ಮೂಲಕ 13 ಪಾಯಿಂಟ್‌ಗಳ ಮುನ್ನಡೆಯನ್ನು ಸಾಧಿಸಿದರು.

ಆದರೆ, ಪಂದ್ಯದ ಮೊದಲಾರ್ಧ ಮುಕ್ತಾಯಕ್ಕೆ ಕೆಲ ಸೆಕೆಂಡ್‌ಗಳಿರುವಾಗ ಸೂಪರ್ ರೈಡ್ ಮಾಡಿದ ಬುಲ್ಸ್‌ನ ಖಂಡೋಲಾ 3 ಪಾಯಿಂಟ್‌ಗಳನ್ನು ಪಡೆದರು. ವಿರಾಮದ ವೇಳೆಗೆ ದಬಾಂಗ್ ಡೆಲ್ಲಿ ಕೆ.ಸಿ. 25-16ರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.

PKL 2022: Powerfull Performance by Bharat Helps Bengaluru Bulls Beat Dabang Delhi

ದ್ವಿತೀಯಾರ್ಧದಲ್ಲಿ ತಿರುಗಿಬಿದ್ದ ಗೂಳಿಗಳು

ಮೊದಲಾರ್ಧದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಡೆಲ್ಲಿ ದ್ವಿತೀಯಾರ್ಧದ ಆರಂಭದಲ್ಲಿ ಕೂಡ 10 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡಿತು. ದ್ವಿತೀಯಾರ್ಧ ಆರಂಭವಾದ ಕೆಲ ಕ್ಷಣಗಳಲ್ಲಿಯೇ ಬುಲ್ಸ್ ಮತ್ತೊಮ್ಮೆ ಆಲೌಟ್ ಆಯಿತು.

ಈ ಸೀಸನ್‌ನಲ್ಲಿ ಕೊನೆಯ ನಿಮಿಷಗಳಲ್ಲಿ ಪಂದ್ಯದ ಫಲಿತಾಂಶವನ್ನು ಹಲವು ಬಾರಿ ಬದಲಾಯಿಸಿರುವ ಬುಲ್ಸ್, ಡೆಲ್ಲಿ ವಿರುದ್ಧ ಕೂಡ ಅದನ್ನು ಮುಂದುವರೆಸಿತು.

ಬುಲ್ಸ್‌ನ ಸ್ಟಾರ್ ರೈಡ್ ಅಬ್ಬರಕ್ಕೆ ದಬಾಂಗ್ ಡೆಲ್ಲಿ ಮಂಕಾಯಿತು. ಪ್ರತಿ ದಾಳಿಯಲ್ಲೂ ಕೂಡ ಒಂದು, ಎರಡು ಅಂಕಗಳನ್ನು ಪಡೆಯುತ್ತಿದ್ಧ ಭರತ್ ಅಂಕಗಳ ಅಂತರವನ್ನು ಕಡಿಮೆ ಮಾಡಿದರು.

ಪಂದ್ಯ ಕೊನೆಯಾಗಲು ಇನ್ನೂ ಮೂರು ನಿಮಿಷ ಬಾಕಿ ಇರುವಾಗ ದಬಾಂಗ್ ಡೆಲ್ಲಿ ತಂಡವನ್ನು ಆಲೌಟ್ ಮಾಡಿತು. ಕೊನೆಯ 90 ಸೆಕೆಂಡುಗಳು ಆಟ ಬಾಕಿ ಇರುವಾಗ ಬುಲ್ಸ್ 51-46 ಅಂಕಗಳ ಮುನ್ನಡೆ ಸಾಧಿಸಿತು. ನಂತರ ಮತ್ತೆ ಮೂರು ಅಂಕಗಳನ್ನು ಬಿಟ್ಟುಕೊಟ್ಟ ಬೆಂಗಳೂರು ಬುಲ್ಸ್ 52-49 ಅಂಕಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿಯಿತು.

Story first published: Sunday, November 27, 2022, 23:37 [IST]
Other articles published on Nov 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X