ಚಿತ್ರಗಳಲ್ಲಿ : ಪಟ್ನಾ ಪೈರೇಟ್ಸ್ ಗೆ ಪಿಕೆಎಲ್ ನಲ್ಲಿ ಹ್ಯಾಟ್ರಿಕ್ ಕಿರೀಟ

Posted By:

ಚೆನ್ನೈ, ಅಕ್ಟೋಬರ್ 29: ಪ್ರೊ ಕಬಡ್ಡಿ ಲೀಗ್ ನ ಐದನೇ ಆವೃತ್ತಿಯ ಅಂತಿಮ ಹಣಾಹಣಿಯಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿದ ಪಟ್ನಾ ಪೈರೇಟ್ಸ್ ತಂಡ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಸೀಸನ್ 3,4 ಹಾಗೂ 5ರಲ್ಲಿ ಸತತ ಮೂರು ಬಾರಿ ಕಪ್ ಎತ್ತಿದ ಸಾಧನೆಯನ್ನು ಪಟ್ನಾ ತಂಡ ಮಾಡಿದೆ.

ಪ್ರೊ ಕಬಡ್ಡಿ ಲೀಗ್‌ ನ ಐದನೇ ಆವೃತ್ತಿಯ ಫೈನಲ್‌ ನಲ್ಲಿ ಗುಜರಾತ್ ಫಾರ್ಚೂನ್‌ ಜೈಂಟ್ಸ್ ತಂಡವನ್ನು 55-38ರಿಂದ ಪಟ್ನಾ ಪೈರೇಟ್ಸ್ ಗೆಲುವು ಸಾಧಿಸಿದೆ.

ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಪೈರೇಟ್ಸ್ ನಾಯಕ ಪ್ರದೀಪ್ ನರ್ವಾಲ್ ಮತ್ತೊಮ್ಮೆ ತಮ್ಮ ಅದ್ಭುತ ರೈಡಿಂಗ್ ಚಾಕಚಕ್ಯತೆ ಮೂಲಕ ಗೆಲುವು ತಂದು ಕೊಟ್ಟರು.

ಪ್ರದೀಪ್ ಅವರು ಈ ಪಂದ್ಯದಲ್ಲಿ ಒಟ್ಟು 19 ಪಾಯಿಂಟ್ ಕಲೆ ಹಾಕಿ ಗೆಲುವಿಗೆ ತಮ್ಮದೇ ಕಾಣಿಕೆ ನೀಡಿದರು. ಇದರ ಜತೆಗೆ ಪಿಕೆಎಲ್ 5ರಲ್ಲಿ ಒಟ್ಟು 369 ಅಂಕಗಳನ್ನು ಕಲೆ ಹಾಕಿ, ಟೂರ್ನಮೆಂಟ್ ನ ಆಟಗಾರ ಎನಿಸಿಕೊಂಡರು.

ಗುಜರಾತ್‌ ಫಾರ್ಚೂನ್‌ ಜೈಂಟ್ಸ್ ತಂಡ

ಗುಜರಾತ್‌ ಫಾರ್ಚೂನ್‌ ಜೈಂಟ್ಸ್ ತಂಡ

ಫಜಲ್ ಅತ್ರಾಚಲಿ ನಾಯಕತ್ವದ ಗುಜರಾತ್‌ ಫಾರ್ಚೂನ್‌ ಜೈಂಟ್ಸ್ ತಂಡ ಆರಂಭದಿಂದಲೇ ಉತ್ತಮ ಪೈಪೋಟಿ ನೀಡಿತು. ಮಧ್ಯಂತರ ಅವಧಿಯಲ್ಲಿ 21-18ರ ಮುನ್ನಡೆ ಸಾಧಿಸಿತ್ತು.

ದ್ವಿತೀಯಾರ್ಧದಲ್ಲಿ ಪೈರೇಟ್ಸ್ ಉತ್ತಮ ಆಟ

ದ್ವಿತೀಯಾರ್ಧದಲ್ಲಿ ಪೈರೇಟ್ಸ್ ಉತ್ತಮ ಆಟ

ಪ್ರದೀಪ್ ನರ್ವಾಲ್ ಪರಿಣಾಮಕಾರಿ ರೈಡಿಂಗ್ ಮೂಲಕ ದ್ವಿತೀಯಾರ್ಧದಲ್ಲಿ ಪೈರೇಟ್ಸ್ ಉತ್ತಮ ಆಟವಾಡಿತು. ಪಂದ್ಯದಲ್ಲಿ ಒಟ್ಟು 24 ರೈಡ್ ಮಾಡಿದ ಅವರು 19 ಪಾಯಿಂಟ್ ಕಲೆ ಹಾಕಿದರು.

ನಾಯಕ ಪ್ರದೀಪ್ ನರ್ವಾಲ್

ನಾಯಕ ಪ್ರದೀಪ್ ನರ್ವಾಲ್

ನಾಯಕ ಪ್ರದೀಪ್ ನರ್ವಾಲ್ ಅವರು ಗೆಲುವಿನ ನಂತರ ಸೆಲ್ಫಿ ಚಿತ್ರ ತೆಗೆದುಕೊಳ್ಳುತ್ತಿದ್ದಾರೆ.

ಕನ್ನಡಿಗ ಸುಖೇಶ್‌ ಹೆಗಡೆ

ಕನ್ನಡಿಗ ಸುಖೇಶ್‌ ಹೆಗಡೆ

ಗುಜರಾತ್ ತಂಡದ ಪರ ಕನ್ನಡಿಗ ಸುಖೇಶ್‌ ಹೆಗಡೆ ಕೇವಲ ಎರಡು ಪಾಯಿಂಟ್ ಗಳಿಸಿ ನಿರಾಸೆಗೊಳಿಸಿದರು.

ಪಟ್ನಾ ತಂಡದ ಸಾಧನೆ

ಪಟ್ನಾ ತಂಡದ ಸಾಧನೆ

ಪ್ರೊ ಕಬಡ್ಡಿ ಲೀಗ್ ನ ಐದನೇ ಆವೃತ್ತಿಯ ಅಂತಿಮ ಹಣಾಹಣಿಯಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿದ ಪಟ್ನಾ ಪೈರೇಟ್ಸ್ ತಂಡ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಸೀಸನ್ 3,4 ಹಾಗೂ 5ರಲ್ಲಿ ಸತತ ಮೂರು ಬಾರಿ ಕಪ್ ಎತ್ತಿದ ಸಾಧನೆಯನ್ನು ಪಟ್ನಾ ತಂಡ ಮಾಡಿದೆ.

Story first published: Sunday, October 29, 2017, 16:05 [IST]
Other articles published on Oct 29, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ