ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: 'ಕೂ' ಸೇರಿದ ಬೆಂಗಳೂರು ಬುಲ್ಸ್

Pro Kabaddi Team Bengaluru Bulls joins Koo

ಬೆಂಗಳೂರು: ಇನ್ನೇನು ಕಬ್ಬಡಿ ಹಬ್ಬ ಶುರುವಾಗಲಿದೆ, ಇದೆ ವೇಳೆ ಸ್ಥಳೀಯ ಭಾಷೆಗಳಲ್ಲಿ ಅಭಿಮಾನಿಗಳೊಂದಿಗೆ ಬೆರೆಯಲು ಅತ್ಯಂತ ಭರವಸೆಯ ಪ್ರೊ ಕಬಡ್ಡಿ ಲೀಗ್ ತಂಡಗಳಲ್ಲಿ ಒಂದಾದ ಬೆಂಗಳೂರು ಬುಲ್ಸ್ ಇತ್ತೀಚೆಗೆ ಭಾರತದ ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಅನ್ನು ಸೇರಿದೆ.

ತಮ್ಮ ಅಧಿಕೃತ ಹ್ಯಾಂಡಲ್ @bengalurubullsofficial ನಿಂದ ಕೂ ಮಾಡಿದ್ದು, ತಂಡವು ತಮ್ಮ ಸ್ಟಾರ್ ಆಟಗಾರರೊಬ್ಬರು ತೂಕ ಎತ್ತುವ ವೀಡಿಯೊವನ್ನು ಹಂಚಿಕೊಂಡಿದೆ. ಲೀಗ್‌ನ ಎಂಟನೇ ಸೀಸನ್‌ಗೆ ಬೆಂಗಳೂರು ಬುಲ್ಸ್ ಆಟಗಾರರು ಸಜ್ಜಾಗುತ್ತಿದ್ದು, ಇದೇ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಬೆಂಗಳೂರು ಬುಲ್ಸ್ "ನಾವು ನಿಮಗೆ ಗೆಲುವು ಬಿಟ್ಟುಕೊಡುವುದಿಲ್ಲ, ಇದು ನಿಜವಾದ ಯುದ್ಧವಾಗಿದೆ ಮತ್ತು ಮೃಗದ ರೀತಿ ನಮ್ಮ ಗೂಳಿಗಳು ಸಿದ್ಧವಾಗುತ್ತಿದ್ದಾರೆ!" ಎಂದು ಬರೆದುಕೊಳ್ಳುವುದರ ಮೂಲಕ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಿಂಚಲು ಸಿದ್ಧರಿದ್ದೇವೆ ಎಂಬುದನ್ನು ತಿಳಿಸಿದೆ. ವೃತ್ತಿಪರತೆಯ ಹೊಸ ಹಂತಗಳನ್ನು ಒಳಗೊಳ್ಳುವ ಹಾಗೂ ಉದಯೋನ್ಮುಖ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಮಹತ್ವಾಕಾಂಕ್ಷೆ ರೂಪಿಸುವ ಮೂಲಕ ಪ್ರೊ ಕಬಡ್ಡಿ ಲೀಗ್ ಸ್ಥಳೀಯ ಆಟವಾದ ಕಬಡ್ಡಿಗೆ ಹೆಚ್ಚು ಆಕರ್ಷಣೆಯನ್ನು ತಂದಿದೆ. ಇತ್ತೀಚೆಗೆ, ಯು ಮುಂಬಾ, ಯುಪಿ ಯೋದ್ಧ, ಪುಣೇರಿ ಪಲ್ಟನ್, ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್‌ನಂತಹ ಇತರ ಪ್ರೊ ಕಬಡ್ಡಿ ಲೀಗ್ ತಂಡಗಳು ಕೂಡ ಕೂಗೆ ಸೇರಿವೆ. ಈ ಜನಪ್ರಿಯ ತಂಡಗಳ ಉಪಸ್ಥಿತಿಯು ಸ್ವಯಂ ಅಭಿವ್ಯಕ್ತಿ ವೇದಿಕೆಯಾದ ಕೂ ನಲ್ಲಿ ತೀವ್ರ ಚಟುವಟಿಕೆಯನ್ನು ಸೃಷ್ಟಿಸಲಿದೆ ಮತ್ತು ಬಳಕೆದಾರರಿಗೆ ಕ್ರೀಡಾ ತಲ್ಲೀನತೆ ಅನುಭವವನ್ನು ನೀಡುತ್ತದೆ.

ಕೂ ಬಗ್ಗೆ:
ಕೂ ಅನ್ನು ಮಾರ್ಚ್ 2020 ರಲ್ಲಿ ಸ್ಥಾಪಿಸಲಾಯಿತು, ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಭಾರತೀಯ ಭಾಷೆಗಳಲ್ಲಿ ಮತ್ತು ಈಗ ಭಾರತದಾದ್ಯಂತ 15 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಇದು ಬಹು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಾವು ವ್ಯಕ್ತಪಡಿಸಬಹುದು. ಕೇವಲ 10% ಇಂಗ್ಲಿಷ್ ಮಾತನಾಡುವ ನಮ್ಮ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ತಲ್ಲೀನಗೊಳಿಸುವ ಭಾಷೆಯ ಅನುಭವಗಳನ್ನು ನೀಡಲು ಮತ್ತು ಅವರನ್ನು ಸಂಪರ್ಕಿಸಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯ ಆಳವಾದ ಅವಶ್ಯಕತೆ ಇದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ಉತ್ತಮ ಬಳಕೆದಾರ ಸ್ನೇಹಿ ವೇದಿಕೆಯನ್ನು ಒದಗಿಸುತ್ತದೆ.

ಐಸಿಸಿ ನೂತನ ಟಿ20 ರ‍್ಯಾಂಕಿಂಗ್: ಟಾಪ್ 10ರಲ್ಲಿ ಇರುವ ಏಕೈಕ ಭಾರತೀಯ ಈತ; ಹೊರಬಿದ್ದ ಕೊಹ್ಲಿ!ಐಸಿಸಿ ನೂತನ ಟಿ20 ರ‍್ಯಾಂಕಿಂಗ್: ಟಾಪ್ 10ರಲ್ಲಿ ಇರುವ ಏಕೈಕ ಭಾರತೀಯ ಈತ; ಹೊರಬಿದ್ದ ಕೊಹ್ಲಿ!

ಕೇವಲ ಕಬಡ್ಡಿ ಫ್ರಾಂಚೈಸಿಗಳು ಮಾತ್ರವಲ್ಲದೇ ಭಾರತದ ಹಲವಾರು ಪ್ರಸಿದ್ಧ ಮಾಜಿ ಕ್ರಿಕೆಟಿಗರು ಕೂಡ ಕ್ಕೂ ಅಪ್ಲಿಕೇಶನ್ ಮೂಲಕ ಖಾತೆಗಳನ್ನು ತೆರೆದಿದ್ದು ತಮ್ಮ ಅನಿಸಿಕೆಗಳನ್ನು ಈ ಅಪ್ಲಿಕೇಷನ್ ಬಳಕೆದಾರರ ಜತೆ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಪ್ಲಿಕೇಶನ್‌ನಲ್ಲಿ ಹೆಚ್ಚಾಗಿ ಸಕ್ರಿಯವಾಗಿದ್ದು ಕೂ ಸೇರಿದ 15 ದಿನಗಳಲ್ಲಿಯೇ 1 ಲಕ್ಷ ಅನುಯಾಯಿಗಳನ್ನು ಸಂಪಾದಿಸಿದ್ದರು.

ಹಾಗೂ ಇತ್ತೀಚೆಗಷ್ಟೇ ಮುಕ್ತಾಯವಾದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತಾಗಿಯೂ ಕ್ಕೂ ಅಪ್ಲಿಕೇಶನ್ ವಿವಿಧ ಚರ್ಚೆಯ ವೇದಿಕೆಗಳನ್ನು ಬಳಕೆದಾರರಿಗೆ ತಮ್ಮದೇ ಆದ ಭಾಷೆಗಳಲ್ಲಿ ಏರ್ಪಡಿಸಿಕೊಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಕುರಿತು ಹೆಚ್ಚಿನ ಚರ್ಚೆ ಆಗುವುದಕ್ಕೆ ಕಾರಣವಾಯಿತು. ಹೀಗೆ ಕೂ ಅಪ್ಲಿಕೇಷನ್ ಬಳಕೆದಾರರು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕುರಿತು ಪೋಸ್ಟ್ ಮಾಡುವ ಮೂಲಕ ಈ ಚರ್ಚೆಗಳನ್ನು ನಡೆಸಿದರು. ಅದೇ ರೀತಿ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಪ್ರೊ ಕಬಡ್ಡಿಯ ಕುರಿತಾಗಿಯೂ ಕೂ ಅಪ್ಲಿಕೇಷನ್ ಹಲವಾರು ಚರ್ಚಾವೇದಿಕೆಗಳನ್ನು ನಿರ್ಮಿಸುವ ನಿರೀಕ್ಷೆಯಲ್ಲಿದ್ದಾರೆ ಬಳಕೆದಾರರು.

Story first published: Thursday, November 25, 2021, 10:11 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X