WWE ಅಖಾಡಕ್ಕೆ 'ಭೀಮಸೇನ' ಸೌರವ್ ಗುರ್ಜಾರ್

Posted By:
Another Indian to debut in WWE as wrestler

ಬೆಂಗಳೂರು, ಫೆಬ್ರವರಿ 05: ಪ್ರಪಂಚದಾದ್ಯಂತ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಹೊಡಿ ಬಡಿ ಆಟ WWE ಗೆ ಭಾರತದ ಮತ್ತೊಬ್ಬ ಯುವಕ ಎಂಟ್ರಿ ಕೊಟ್ಟಿದ್ದಾನೆ.

WWE ರಿಂಗ್‌ನಲ್ಲಿ ಅಸಾಧ್ಯ ಭೀತಿ ಮೂಡಿಸಿದ್ದ ಗ್ರೇಟ್‌ ಖಲಿ ಬಳಿಕ ಹಿಂದಿ ಟಿವಿ ಸ್ಟಾರ್ ಸೌರವ್ ಗುರ್ಜಾರ್ WWE ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಹಾಭಾರತ ಧಾರವಾಹಿಯಲ್ಲಿ ಭೀಮ ಪಾತ್ರ ಹಾಗೂ ಸಂಕಟ ಮೋಚನ ಮಹಾಬಲಿ ಹನುಮಾನ್ ಧಾರವಾಹಿಯಲ್ಲಿ ವಾಲಿ ಮತ್ತು ರಾವಣ ಪಾತ್ರ ನಿರ್ವಹಿಸುತ್ತಿರುವ ಸೌರವ್ ಅವರು ನೋಡಲು ಭೀಮ ಕಾಯರೇ ಹಾಗಾಗಿ ಅವರಿಗೆ WWE ಇಂದ ರಿಂಗ್‌ಗೆ ಬುಲಾವ್ ಬಂದಿದೆ.

ಹರ್ಯಾಣ ಪರ ಬಾಕ್ಸಿಂಗ್ ಮತ್ತು ಕಿಕ್‌ ಬಾಕ್ಸಿಂಗ್ ಆಡಿರುವ ಸೌರವ್ ಅವರು ಅಂಗಸೌಷ್ಟವ ನಂಬಿಕೊಂಡೆ ಧಾರವಾಹಿಗೆ ಬಂದವರು. ಆ ನಂತರ ನಟನೆಯಲ್ಲಿ ಹಿಡಿತ ಸಿಕ್ಕಿ ಇಲ್ಲೇ ಉಳಿದಿದ್ದರು ಆದರೆ ಈಗ ತಮ್ಮ ನೆಚ್ಚಿನ ಕ್ರೀಡೆಯಾದ ರೆಸಲಿಂಗ್‌ಗೆ ಮರಳಿದ್ದಾರೆ.

ಪ್ರಸ್ತುತ ಅಮೆರಿಕದಲ್ಲಿ ತಮ್ಮ ಮೊದಲ WWE ಪಂದ್ಯಕ್ಕಾಗಿ ತರಬೇತಿ ಪಡೆಯುತ್ತಿರುವ ಸೌರವ್‌ WWE ರಿಂಗ್‌ನಲ್ಲಿ ವಿಶೇಷವಾದ ಸಾಧನೆ ಮಾಡಲೆಂದೇ WWE ಆರಿಸಿಕೊಂಡಿದ್ದಾಗಿ ಹೇಳಿದ್ದಾರೆ.

Story first published: Monday, February 5, 2018, 14:58 [IST]
Other articles published on Feb 5, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ