ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಜಿಮ್ನಾಸ್ಟಿಕ್ಸ್ ನಲ್ಲಿ ದೀಪಾ, ಪ್ರಣತಿ, ಅರುಣ ಫೈನಲ್ ಗೆ

Asian Games 2018: Dipa Karmakar makes beam final in gymnastics

ಜಕಾರ್ತಾ, ಆಗಸ್ಟ್ 21: ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಮಂಗಳವಾರ ನಡೆದ ಜಿಮ್ನಾಸ್ಟಿಕ್ ವಾಲ್ಟ್ ವಿಭಾಗದಲ್ಲಿ ಫೈನಲ್ ಪ್ರವೇಶಿಸುವಲ್ಲಿ ಎಡವಿದರು. ಆದರೆ ದೀಪಾ ಬ್ಯಾಲನ್ಸ್ ಬೀಮ್ ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇದನ್ನು ಸರಿದೂಗಿಸಿಕೊಂಡರು.

ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದವರ ಸಂಪೂರ್ಣ ವಿವರಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದವರ ಸಂಪೂರ್ಣ ವಿವರ

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸ್ವಲ್ಪದರಲ್ಲಿ ಕಂಚನ್ನು ಕಳೆದುಕೊಂಡಿದ್ದ ದೀಪಾ, ತನ್ನ ನೆಚ್ಚಿನ ವಾಲ್ಟ್ ವಿಭಾಗದಲ್ಲಿ 13.225 ಅಂಕಗಳನ್ನಷ್ಟೇ ಗಳಿಸಿ ಫೈನಲ್ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ದೀಪಾ 8ನೇ ಸ್ಥಾನಿಗರಾಗಿ ಇದರಲ್ಲಿ ಸ್ಪರ್ಧೆ ಮುಗಿಸಿದರು.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಇದೇ ವಿಭಾಗದಲ್ಲಿ ದೀಪಾ ಅವರ ಜೊತೆ ಸ್ಪರ್ಧಿಗಳಾದ ಪ್ರಣತಿ ನಾಯಕ್ 13.425, ಅರುಣಾ ಬುದ್ದ ರೆಡ್ಡಿ 13.350 ಪಾಯಿಂಟ್ ಗಳೊಂದಿಗೆ ಕ್ರಮವಾಗಿ 6ನೇ ಮತ್ತು 7ನೇ ಸ್ಥಾನ ಗಳಿಸಿದರು. ವಾಲ್ಟ್ ವಿಭಾಗದಲ್ಲಿ ಅರುಣಾ ಮತ್ತು ಪ್ರಣತಿ ಇಬ್ಬರೂ ಪ್ರಶಸ್ತಿ ಸುತ್ತಿಗೆ ಆಯ್ಕೆಗೊಂಡಿದ್ದಾರೆ.

ವಾಲ್ಟ್ ವಿಭಾಗದಲ್ಲಿ ಸೌತ್ ಕೊರಿಯಾದ ಯೆಯೋ ಸಿಯೋಜಿಂಗ್ ಅವರು 14.450 ಪಾಯಿಂಟ್ ಗಳೊಂದಿಗೆ ಅಗ್ರ ಸ್ಥಾನ ಗಳಿಸಿದರು. ವಾಲ್ಟ್ ವಿಭಾಗದ ಫೈನಲ್ ಸ್ಪರ್ಧೆ ಆಗಸ್ಟ್ 23ರಂದು ನಡೆಯಲಿದೆ. ಬ್ಯಾಲನ್ಸ್ ಬೀಮ್ ನಲ್ಲಿ 7ನೇ ಸ್ಥಾನ ಗಳಿಸಿರುವ ದೀಪಾ 12.750 ಪಾಯಿಂಟ್ ಗೆದ್ದಿದ್ದರು. ಬ್ಯಾಲನ್ಸ್ ಬೀಮ್ ಫೈನಲ್ ಆಗಸ್ಟ್ 24ಕ್ಕೆ ನಡೆಯಲಿದೆ.

ತಂಡ ಸ್ಪರ್ಧೆ ವಿಭಾಗದಲ್ಲೂ ಭಾರತ 7ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದೆ. ತಂಡ ಸ್ಪರ್ಧೆಯ ಫೈನಲ್ ಆಗಸ್ಟ್ 22ರ ಬುಧವಾರ ನಡೆಯಲಿದೆ.

Story first published: Tuesday, August 21, 2018, 21:06 [IST]
Other articles published on Aug 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X