ಫ್ಲ್ಯಾಶ್‌ಬ್ಯಾಕ್‌ 2020: ಬದುಕಿಗೆ ವಿದಾಯ ಹೇಳಿದ ದಿಗ್ಗಜ ಆಟಗಾರರು

2020 ಕ್ಯಾಲೆಂಡರ್ ವರ್ಷ ಅಂತ್ಯವಾಗಲು ದಿನಗಣನೆ ಆರಂಭವಾಗಿದೆ. ಕೊರೊನಾ ವೈರಸ್‌ನಿಂದ ಕೆಂಗೆಟ್ಟು ಕ್ರೀಡಾಲೋಕವೂ ಈ ಬಾರಿ ಸಾಕಷ್ಟು ಉತ್ತಮ ಕ್ಷಣಗಳನ್ನು ಕಳೆದುಕೊಂಡಿದೆ. ಆದರೆ ಈ ಮಧ್ಯೆ ಕೆಲ ದಿಗ್ಗಜ ಕ್ರೀಡಾಪಟುಗಳು 2020ರಲ್ಲಿ ತಮ್ಮ ಬದುಕಿಗೆ ವಿದಾಯ ಹೇಳಿ ಹೋಗಿದ್ದಾರೆ. ಕ್ರೀಡಾಲೋಕದಲ್ಲಿ ಸುದೀರ್ಘಕಾಲ ಮಿಂಚಿ ಈ ವರ್ಷ ಮರೆಯಾದ ಪ್ರಮುಖ ಆಟಗಾರರು ಆಟಗಾರರು ಯಾರು ಎಂಬುದನ್ನು ಮುಂದೆ ನೋಡೋಣ.

ಕೋಬ್‌ ಬ್ರೆಯೆಂಟ್ : ಬಾಸ್ಕೆಟ್ ಬಾಲ್‌ನ ದಿಗ್ಗಜ ಆಟಗಾರ ಕೋಬ್‌ ಕೋಬ್ರಿಯೆಂಟ್ ತನ್ನ ಮಗಳು ಜಿಗಿ ಜೊತೆಗೆ ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುವಾಗ ಕ್ಯಾಲಿಫೋರ್ನಿಯಾದಲ್ಲಿ ಅಪಘಾತವಾಗಿ ಪ್ರಾಣವನ್ನು ಕಳೆದುಕೊಂಡರು. ಜನವರಿ 26ರಂದು ನಡೆದ ಈ ಅಪಘಾತ ಕ್ರೀಡಾಲೋಕಕ್ಕೆ ಆಘಾತ ನೀಡಿತ್ತು.

ಟಿ20 ಕ್ರಿಕೆಟ್‌ನ ವರ್ಷದ ತಂಡ: ಅತ್ಯುತ್ತಮ ವರ್ಷದ ಟಿ20ಐ ತಂಡದಲ್ಲಿ ಯಾರಿಗೆಲ್ಲ ಸ್ಥಾನ?

ಸರ್ ಎವೆರ್ಟನ್ ವೀಕ್ಸ್‌: ವೆಸ್‌ ಇಮಡೀಸ್‌ನ ಬ್ಯಾಟ್ಸ್‌ಮನ್ ಸರ್ ಎವರ್ಟನ್ ವೀಕ್ ಜುಲೈ 1ರಂದು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಚೇತನ್ ಚೌಹಾಣ್: ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ಚೇತನ್ ಚೌಹಾಣ್ ಆಗಸ್ಟ್ 16ರಮದು ಕೊನೆಯುಸಿರೆಳೆದರು. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಚೌಹಾಣ್ ತಮ್ಮ 76ನೇ ವಯಸ್ಸಿನಲ್ಲಿ ವಿಧಿವಶರಾದರು.

ಡೀನ್ ಜಾನ್ಸ್: ಆಸ್ಟ್ರೇಲಿಯಾ ಕ್ರಿಎಕಟ್‌ನ ಮಾಜಿ ಆಟಗಾರ ಡೀನ್ ಜಾನ್ಸ್ ಸೆಪ್ಟೆಂಬರ್ 24ರಂದು ಮುಂಬೈನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಐಪಿಎಲ್‌ನ ಕಾಮೆಂಟೇಟರ್ ಆಗಿ ಮುಂಬೈನಿಮದ ಕರ್ತವ್ಯ ನಿರ್ವಹಿಸುತ್ತಿದ್ದ ಡೀನ್ ಜಾನ್ಸ್ 59ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

ಡಿಯಾಗೋ ಮರಡೋನಾ: ಫುಟ್ಬಾಲ್ ಕಂಡ ಸರ್ವಶ್ರೇಷ್ಠ ಆಟಗಾರರಿಲ್ಲಿ ಒಬ್ಬರಾಗಿರುವ ಡಿಯಾಗೊ ಮರಡೋನಾ ಹೃದಯಾಘಾತಕ್ಕೆ ಒಳಗಾಗಿ ತಮ್ಮ 60ನೇ ವಯಸ್ಸಿನಲ್ಲಿ ಮೃತಪಟ್ಟರು. ಇಡೀ ಕ್ರೀಡಾಲೋಕವೇ ಟಿಯಾಗೋ ಅಗಲಿಕೆಗೆ ಆಘಾತವನ್ನು ವ್ಯ್ತಪಡಿಸಿತು.

2020ರ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳು ಹಾಗೂ ಮುಖ್ಯಾಂಶಗಳು

ಪೌಲೋ ರೋಸ್ಸಿ: ಇಟೆಲಿಯ ವಿಶ್ವಕಪ್ ಹೀರೋ ಪೌಲೋ ದಿಗ್ಗಜ ಫುಟ್ಬಾಲ್ ಆಟಗಾರ ರೋಸ್ಸಿ ಡಿಸೆಂಬರ್ 9 ರಂದು ತಮ್ಮ 64ನೇ ವಯಸ್ಸಿನಲ್ಲಿ ಮೃತಪಟ್ಟರು. ಇಟಾಲಿಯನ್ ಟಿವಿ ಚಾನೆಲ್ ರಾಯ್ ಸ್ಪೋರ್ಟ್ಸ್‌ ರೋಸ್ಸಿ "ಗುಣಪಡಿಸಲಾಗದ ಖಾಯಿಲೆ"ಯಿಂದ ಮೃತಪಟ್ಟರು ಎಂದು ವರದಿ ಮಾಡಿತ್ತು.

For Quick Alerts
ALLOW NOTIFICATIONS
For Daily Alerts
Story first published: Friday, December 25, 2020, 16:30 [IST]
Other articles published on Dec 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X