Rishabh Pant Accident: ಕಾರಿನ ಕಿಟಕಿ ಒಡೆದು ಪ್ರಾಣಾಪಾಯದಿಂದ ಪಾರಾದ ರಿಷಭ್ ಪಂತ್: 5 ಅಂಶಗಳು

ಶುಕ್ರವಾರ (ಡಿಸೆಂಬರ್ 30) ಬೆಳಗಿನ ಜಾವ 5.15ರ ಸಮಯದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಿಷಭ್ ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದಾಗ ರೂರ್ಕಿ ಸಮೀಪ ರಸ್ತೆ ಡಿವೈಡರ್‌ಗೆ ರಿಷಭ್ ಪಂತ್ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ಹೊತ್ತಿ ಉರಿದಿದೆ. ಸ್ವತಃ ರಿಷಭ್ ಪಂತ್ ಅವರೇ ಈ ಕಾರನ್ನು ಚಲಾಯಿಸುತ್ತಿದ್ದರು ಎಂದು ವರದಿಯಾಗಿದೆ.

IND vs SL: ಭಾರತ ODI ತಂಡದಿಂದ ಕೈಬಿಟ್ಟ ನಂತರ ಮೊದಲ ಬಾರಿಗೆ ನೀಡಿದ ಶಿಖರ್ ಧವನ್

ವೈದ್ಯರುಗಳ ಮಾಹಿತಿಯ ಪ್ರಕಾರ, ರಿಷಭ್ ಪಂತ್ ಅವರ ಹಣೆ, ಬೆನ್ನು ಹಾಗೂ ಕಾಲಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿದೆ. ರೂರ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್ ಅವರನ್ನು ದೆಹಲಿ ಆಸ್ಪತ್ರೆಗೆ ರವಾನಿಸುವ ಸಾಧ್ಯತೆಯಿದ್ದು, ಅಲ್ಲಿ ಪಂತ್‌ಗೆ ಪ್ಲಾಸ್ಟಿಕ್ ಸರ್ಜರಿ ನಡೆಸಲಾಗುತ್ತದೆ ಎನ್ನಲಾಗಿದೆ.

ಸ್ಥಳೀಯ ಮಾಧ್ಯಮಗಳು ವರದಿ ಮಾಡಿದಂತೆ, ಶುಕ್ರವಾರ ಮುಂಜಾನೆ ದೆಹಲಿಗೆ ಪ್ರಯಾಣಿಸುತ್ತಿದ್ದ ರಿಷಭ್ ಪಂತ್ ರಸ್ತೆಯ ಡಿವೈಡರ್‌ಗೆ ಡಿಕ್ಕಿಯಾಗಿದ್ದು, ಬಳಿಕ ಕಾರಿಗೆ ಬೆಂಕಿ ಹತ್ತಿಕೊಂಡಿತು. ಈ ಸಂದರ್ಭದಲ್ಲಿ ಸ್ಥಳೀಯರು ಪಂತ್ ಅವರನ್ನು ರಕ್ಷಿಸಿದ್ದು, ದೆಹಲಿ ರಸ್ತೆಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Rishabh Pant: ರಿಷಭ್ ಪಂತ್ ಇದರಲ್ಲಿ ಹೆಚ್ಚು ಕೆಲಸ ಮಾಡಬೇಕಿದೆ; ಶ್ರೀಲಂಕಾ ಮಾಜಿ ಕ್ರಿಕೆಟಿಗ ಸಲಹೆRishabh Pant: ರಿಷಭ್ ಪಂತ್ ಇದರಲ್ಲಿ ಹೆಚ್ಚು ಕೆಲಸ ಮಾಡಬೇಕಿದೆ; ಶ್ರೀಲಂಕಾ ಮಾಜಿ ಕ್ರಿಕೆಟಿಗ ಸಲಹೆ

ರಿಷಭ್ ಪಂತ್ ಕಾರು ಅಪಘಾತದ ಪ್ರಮುಖ 5 ಅಂಶಗಳು

1) ರಸ್ತೆ ಡಿವೈಡರ್‌ಗೆ ಡಿಕ್ಕಿಯ ನಂತರ ರಿಷಭ್ ಪಂತ್ ಅವರ ಮರ್ಸಿಡಿಸ್ ಬೆಂಜ್ ಬೆಂಕಿ ಹೊತ್ತಿ ಉರಿದಿದೆ.

2) ಅಪಘಾತದ ವೇಳೆ ರಿಷಭ್ ಪಂತ್ ಕಾರಿನಲ್ಲಿ ಒಬ್ಬರೇ ಇದ್ದು, ಸೀಟ್ ಬೆಲ್ಟ್ ಹಾಕದೆ ಚಾಲನೆ ಮಾಡುತ್ತಿದ್ದರು. ಅಪಘಾತದ ನಂತರ ಕಿಟಕಿಯ ಗಾಜು ಒಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

3) ರಿಷಭ್ ಪಂತ್ ಅವರನ್ನು ತಕ್ಷಣವೇ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

4) ರಿಷಭ್ ಪಂತ್ ಅವರಿಗೆ ದೇಹದ ತುಂಬಾ ಸುಟ್ಟ ಗಾಯಗಳಾಗಿದ್ದು, ಆದರೆ ಅವರ ಸ್ಥಿತಿ ಗಂಭೀರವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

5) 25 ವರ್ಷ ವಯಸ್ಸಿನ ರಿಷಭ್ ಪಂತ್ ಚಾಲನೆ ಮಾಡುವಾಗ ಕಾರಿನ ನಿಯಂತ್ರಣ ಕಳೆದುಕೊಂಡರು ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, December 30, 2022, 11:08 [IST]
Other articles published on Dec 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X