ಟೋಕಿಯೋ ಒಲಿಂಪಿಕ್ಸ್: ಸ್ವಿಮ್ಮಿಂಗ್ ಫೆಡರೇಷನ್ ಎಡವಟ್ಟು, ಪೋಲಾಂಡ್‌ನ 6 ಸ್ವಿಮ್ಮರ್‌ಗಳು ವಾಪಾಸ್

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬಂದಿದ್ದ ಪೋಲಾಂಡ್‌ನ ಆರು ಸ್ವಿಮ್ಮರ್‌ಗಳ ಕನಸು ನುಚ್ಚುನೂರಾಗಿದೆ. ಆಡಳಿತಾತ್ಮಕ ಎಡವಟ್ಟಿನಿಂದಾಗಿ ಅನಿವಾರ್ಯವಾಗಿ ತವರಿಗೆ ಮರಳಬೇಕಿದೆ. ತಮ್ಮ ದೇಶದ ಸ್ವಿಮ್ಮಿಂಗ್ ಫೆಡರೇಶನ್ ಮಾಡಿದ ತಪ್ಪಿನಿಂದಾಗಿ ಟೂರ್ನಿಯಲ್ಲಿ ಭಾಗಿಯಾಗಲು ಅನರ್ಹರಾಗಿದ್ದು ತವರಿಗೆ ವಾಪಾಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈಜುಪಟುಗಳು ಕ್ರೀಡಾಕೂಟದಲ್ಲಿ ಭಾಗಿಯಾಗುವ ಸಲುವಾಗಿ ಜಪಾನ್‌ಗೆ ತೆರಳಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಪೋಲಾಂಡ್‌ನ ಸ್ವಿಮ್ಮಿಂಗ್ ಫೆಡರೇಶನ್ 17 ಸ್ವಿಮ್ಮರ್‌ಗಳನ್ನು ಈ ಬಾರಿಯ ಒಲಿಂಪಿಕ್ಸ್‌ಗೆ ಕಳುಹಿಸಬೇಕಾಗಿತ್ತು. ಆದರೆ ಮೂರ್ಖತನದಿಂದಾಗಿ 17 ಈಜುಪಟಯಗಳ ಬದಲಿಗೆ 23 ಈಜುಪಟುಗಳನ್ನು ರೋಸ್ಟರ್‌ನಲ್ಲಿ ಭರ್ತಿ ಮಾಡಿದ್ದು 23 ಮಂದಿಯ ಈಜುಪಟುಗಳ ತಂಡವನ್ನು ಕಳುಹಿಸಿತ್ತು.

ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ 2021: ಸಮಯ, ನೇರಪ್ರಸಾರ, ಸಂಪೂರ್ಣ ಮಾಹಿತಿಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ 2021: ಸಮಯ, ನೇರಪ್ರಸಾರ, ಸಂಪೂರ್ಣ ಮಾಹಿತಿ

ಪೋಲಾಂಡ್ ಸ್ವಿಮ್ಮಿಂಗ್ ಫೆಡರೇಶನ್ ಅರ್ಹತಾ ಅರ್ಜಿ ಸಲ್ಲಿಕೆಯಲ್ಲಿ ತಪ್ಪೆಸಗಿರುವುದು ಈಜುಪಟುಗಳ ತಂಡ ಟೋಕಿಯೋಗೆ ಬಂದಿಳಿದ ಬಳಿಕವೇ ತಿಳಿದುಬಂದಿತ್ತು. ಹೀಗಾಗಿ ಬಲವಂತವಾಗಿ ಆರು ಮಂದಿ ಕ್ರೀಡಾಪಟುಗಳು ಟೂರ್ನಿಯಿಂದ ಪಾಲ್ಗೊಳ್ಳದೆ ವಾಪಾಸಾಗಬೇಕಾಗಿದೆ.

ವರದಿಗಳ ಪ್ರಕಾರ ಪೋಲಾಂಡ್ ತಂಡದ ಅಲಿಜಾ ಟಿಚೋರ್ಜ್, ಬಾರ್ಟೋಸ್ಜ್ ಪಿಸ್ಕ್ಜೊರೊವಿಕ್ಜ್, ಅಲೆಕ್ಸಂಡ್ರಾ ಪೋಲನ್ಸ್ಕಾ, ಮಾಟುಸ್ಜ್ ಚೋವಾನಿಕ್, ಡೊಮಿನಿಕಾ ಕೊಸಕೊವ್ಸ್ಕಾ ಮತ್ತು ಜಾನ್ ಹೊಲಬ್ ಬಲವಂತವಾಗಿ ವಾಪಾಸಾಗಬೇಕಾದ ಈಜುಪಟುಗಳಾಗಿದ್ದಾರೆ.

ಇದರಲ್ಲಿ ಅಲಿಜಾ ಟಿಚೋರ್ಜ್ 2012ರ ಲಂಡನ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಟಿಚೋರ್ಜ್ ಮತ್ತು ಇನ್ನೋರ್ವರ್ವ ಈಜುಪಟು ಮಾಟುಸ್ಜ್ ಚೋವಾನಿಕ್ ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅನ್ಯಾಯದ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 21, 2021, 17:14 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X