ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ಯಾರಾಲಿಂಪಿಕ್ಸ್: ಹೈ ಜಂಪ್‌ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್, ಭಾರತಕ್ಕೆ ಎರಡನೇ ಪದಕ

Tokyo Paralympics: Indias Nishad Kumar Wins Silver in Mens High Jump

ಟೋಕಿಯೋ, ಆಗಸ್ಟ್ 29: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ಪದಕದ ಸಾಧನೆ ಮಾಡಿದೆ. ಹೈ ಜಂಪ್‌ನಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕವನ್ನು ಗೆದ್ದಿದ್ದು ಭಾರತ ಇಂದು ಎರಡನೇ ಪದಕವನ್ನು ಗೆದ್ದುಕೊಂಡಂತಾಗಿದೆ. ಟೋಕಿಯೋ 2020ಯ ಟಿ47 ವಿಭಾಗದಲ್ಲಿ ನಿಶಾದ್ ಕುಮಾರ್ ಈ ಸಾಧನೆ ಮಾಡಿ ಬೀಗಿದ್ದಾರೆ.

ಭಾರತದ ಅಥ್ಲೆಟಿಕ್ಸ್ ತಂಡದ 24ರ ಹರೆಯದ ಆಟಗಾರ ನಿಶಾದ್ ಕುಮಾರ್ ಬಹು ದೊಡ್ಡ ಸಾಧನೆ ಮಾಡಿ ಮಿಂಚಿದ್ದಾರೆ. ಪುರುಷರ ಹೈ ಜಂಪ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ನಿಶಾದ್ ಕುಮಾರ್ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದರು. ಆದರೆ ಸಾಕಷ್ಟು ಸವಾಲಿನ ಮಧ್ಯೆಯೂ ನಿಶಾದ್ ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತೀಯ ಕ್ರೀಡಾಪ್ರೇಮಿಗಳು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಿಮಾಚಲ ಪ್ರವೇಶದ ಸಣ್ಣ ಊರು ಉನಾದವರಾದ ನಿಶಾದ್ ಕ್ರೀಡಾ ಕ್ಷೇತ್ರದಲ್ಲಿ ಹರಸಾಹಸ ಪಟ್ಟು ಈ ಮಟ್ಟಕ್ಕೆ ತಲುಪಿದ್ದು ಈಗ ಇಡೀ ದೇಶವೇ ಹುಬ್ಬೇರಿಸುವಂತಾ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಹೈ ಜಂಪ್ ಸ್ಪರ್ಧೆಯಲ್ಲಿ ನಿಶಾದ್ ಕುಮಾರ್ 2.06 ಮೀಟರ್ ಜಂಪ್ ಮಾಡುವ ಮೂಲಕ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೋರ್ವ ಸ್ಪರ್ಧಿ ರಾಮ್‌ಪಾಲ್ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

2019ರಲ್ಲಿ ದುಬೈನಲ್ಲಿ ನಡೆದ ವಿಶ್ವ ಪ್ಯಾರಾ ಆಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿಶಾದ್ ಕುಮಾರ್ 2 ಮೀಟರ್ ಜಿಗಿದು ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಟೋಕಿಯೋ ಪ್ಯಾರಾಲಿಂಒಇಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದರು. ಅಂದು ಈ ಜಂಪ್‌ನ ಮೂಲಕ ನಿಶಾದ್ ಕಂಚಿನ ಪದಕವನ್ನು ಗೆದ್ದಿದ್ದರು. ಈ ಮೂಲಕ ಭಾರತದ ಈ ಆಥ್ಲೀಟ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸಾಧನೆ ಮಾಡುವ ಆತ್ಮವಿಶ್ವಾಸವನ್ನು ಪಡೆದುಕೊಂಡಿದ್ದರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದ ಬಳಿಕ ತಮ್ಮ ಮುಂದಿನ ಗುರಿಯನ್ನು ನಿರ್ಧಿರಿಸಿದ್ದರು ನಿಶಾದ್. ಅವರ ಕೋಚ್ ಕೂಡ ನಿಶಾದ್ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನು ಆಡಿದ್ದರು. ನಿಶಾದ್ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲಬಲ್ಲ ಭಾರತದ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಕೋಚ್ ಸತ್ಯನಾರಾಯಣ ವಿಶ್ವಾಸವನ್ನು ವ್ಯಕ್ತಡಿಸಿದ್ದರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಭವಾನಿಬೆನ್ ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಐತಿಹಾಸಿಕ ಬೆಳ್ಳಿ ಪದಕವನ್ನು ಗೆಲುವ ಮೂಲಕ ಪದಕದ ಸಾಧನೆ ಮಾಡಿದೆ. 12ನೇ ಶ್ರೇಯಾಂಕದ ಪಟೇಲ್ ವಿಶ್ವದ ನಂಬರ್ 1 ಹಾಗೂ ಲಂಡನ್ ಗೇಮ್ಸ್‌ನ ಚಿನ್ನದ ಪದಕದ ವಿಜೇತ ಸ್ಪರ್ಧಿ ಚೀನಾದ ಝು ಯಿಂಗ್ ವಿರುದ್ಧ 7-11, 7-11, 6-11 ಅಂತರದಿಂದ ಫೈನಲ್‌ನಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ

Story first published: Monday, August 30, 2021, 10:13 [IST]
Other articles published on Aug 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X