ವಿಶ್ವ ದಾಖಲೆ ವೀರ ನೀರಜ್ ಗೆ ಮೋದಿ ಸೇರಿ, ಎಲ್ಲರಿಂದ ಬಹುಪರಾಕ್

Posted By:

ನವದೆಹಲಿ, ಜುಲೈ 24: ಪೋಲೆಂಡ್ ನಲ್ಲಿ ನಡೆಯುತ್ತಿರುವ ಐಎಎಎಫ್‌ ವರ್ಲ್ಡ್‌ ಅಂಡರ್‌ 20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಜಾವಲಿನ್‌ ಎಸೆತಗಾರ ನೀರಜ್‌ ಚೋಪ್ರಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ನೀರಜ್ ಅವರ ಸಾಧನೆಯನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು, ಸಾರ್ವಜನಿಕರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಹರ್ಯಾಣದ ಪಾಣಿಪತ್ ಜಿಲ್ಲೆಯ ಖಾಂಡ್ರಾ ಗ್ರಾಮದ 19 ವರ್ಷ ವಯಸ್ಸಿನ ಹರೆಯದ ನೀರಜ್‌ ಈ ಹಿಂದೆ ಗುವಾಹತಿಯಲ್ಲಿ ನಡೆದ ಸೌತ್‌ ಏಷ್ಯನ್‌ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಪಡೆದಿದ್ದರು. ಇದಾದ ಬಳಿಕ ಈಗ ವಿಶ್ವದಾಖಲೆ ಬರೆದಿದ್ದಾರೆ. 2011ರಲ್ಲಿ ಲಾಟ್ವಿಯಾದ ಜಿಗಿಸ್ಮುಂಡ್ಸ್ ಸರ್ ಮಾಯಿಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ನೀರಜ್ ಮುರಿದಿದ್ದಾರೆ.

ಮೊದಲ ಪ್ರಯತ್ನದಲ್ಲಿ 79.66 ಮೀಟರ್ ದೂರ ಎಸೆದಿದ್ದ ನೀರಜ್ ಅವರು ಮುನ್ನಡೆ ಪಡೆದಿದ್ದರು. ಆದರೆ, ದಕ್ಷಿಣ ಆಫ್ರಿಕಾದ ಗ್ರಾಬ್ಲರ್ ಅವರು 80.59 ಮೀಟರ್ ಎಸೆದರು. ನಂತರ ಎರಡನೇ ಪ್ರಯತ್ನದಲ್ಲಿ 86.48 ಮೀಟರ್ ಎಸೆದ ನೀರಜ್ ಅವರು ಚಿನ್ನದ ಗೆದ್ದರು.ನೀರಜ್ ಅವರ ಸಾಧನೆಗೆ ಮೆಚ್ಚಿ 10 ಲಕ್ಷ ರು ಬಹುಮಾನ ಘೋಷಿಸಲಾಗಿದೆ.

ಲಂಡನ್ ಒಲಿಂಪಿಕ್ಸ್ ದಾಖಲೆ ಧ್ವಂಸ

ಲಂಡನ್ ಒಲಿಂಪಿಕ್ಸ್ ದಾಖಲೆ ಧ್ವಂಸ

ಲಂಡನ್ ಒಲಿಂಪಿಕ್ಸ್ 2012ರಲ್ಲಿ ಟ್ರಿನಿಡಾಡ್ ಅಂಡ್ ಟ್ಯಾಬಾಗೊದ ಕೆಶೊರ್ನ್ ವಾಲ್ಕಟ್ ಅವರು 84.58 ಮೀಟರ್ ದೂರಕ್ಕೆ ಜಾವಲನ್ ಎಸೆರಿದ್ದರು. ಈಗ ನೀರಜ್ ಇದಕ್ಕಿಂತ 1.9 ಮೀಟರ್ ಹೆಚ್ಚಿನ ದೂರಕ್ಕೆ ಜಾವಲಿನ್ ಎಸೆದಿದ್ದಾರೆ.

10 ಲಕ್ಷ ಇನಾಮು ಘೋಷಿಸಿದ ವಿಜಯ್ ಗೋಯಲ್

ನೀರಜ್ ಗೆ 10 ಲಕ್ಷ ಇನಾಮು ಘೋಷಿಸಿದ ಬಿಜೆಪಿ ಮುಖಂಡ ವಿಜಯ್ ಗೋಯಲ್

ನೀರಜ್ ರನ್ನು ಹೊಗಳಿದ ಪ್ರಧಾನಿ ಮೋದಿ

ವಿಶ್ವ ದಾಖಲೆ ವೀರ ನೀರಜ್ ರನ್ನು ಹೊಗಳಿದ ಪ್ರಧಾನಿ ಮೋದಿ

ದಾಖಲೆ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರಿ ಮಾತುಕತೆ

ನೀರಜ್ ಅವರ ದಾಖಲೆ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರಿ ಮಾತುಕತೆ, ಸಾರ್ವಜನಿಕರಿಂದ ಪ್ರಶಂಸೆ.

ಶಿವರಾಜ್ ಚೌಹಾಣ್ ರಿಂದ ಅಭಿನಂದನೆ

ಮಧ್ಯಪ್ರದೇಶದ ಸಿಎಂ ಶಿವರಾಜ್ ಚೌಹಾಣ್ ರಿಂದ ಅಭಿನಂದನೆ

ನೀರಜ್ ದಾಖಲೆ ಬಗ್ಗೆ ಹೆಚ್ಚಿನ ಮಾಹಿತಿ

ನೀರಜ್ ದಾಖಲೆ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ಟ್ವೀಟ್ ಗಳಿವೆ, ವಿಡಿಯೋ ತುಣುಕುಗಳಿವೆ

ವಿಶ್ವದಾಖಲೆ ನಂತರ ನೀರಜ್ ಹೇಳಿದ್ದೇನು?

ವಿಶ್ವದಾಖಲೆ ನಂತರ ನೀರಜ್ ಹೇಳಿದ್ದೇನು? ಇಲ್ಲಿ ಓದಿ ಎಂಬ ಟ್ವೀಟ್

ನೀರಜ್ ಮುರಿದ ದಾಖಲೆಗಳ ಪಟ್ಟಿ

ನೀರಜ್ ಮುರಿದ ದಾಖಲೆಗಳ ಪಟ್ಟಿ ಕೂಡಾ ಟ್ವೀಟ್ ಗಳಲ್ಲಿ ಲಭ್ಯ

Story first published: Sunday, July 24, 2016, 16:15 [IST]
Other articles published on Jul 24, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ