ಕುಸ್ತಿ ಪಟು ನರಸಿಂಗ್ ಯಾದವ್ ಗೆ ನಾಲ್ಕು ವರ್ಷ ನಿಷೇಧ

Posted By: ಕ್ರೀಡಾ ಡೆಸ್ಕ್

ರಿಯೋ ಡಿ ಜನೈರೋ ಆಗಸ್ಟ್, 19: ವಿವಾದಗಳ ಮೂಲಕವೇ 2016ರ ರಿಯೋ ಒಲಿಂಪಿಕ್ಸ್ ಅರ್ಹತೆ ಪಡೆದುಕೊಂಡಿದ್ದ ನರಸಿಂಗ್ ಯಾದವ್ ಪದಕದ ಕನಸು ನುಚ್ಚು ನೂರಾಗಿದೆ. ರಷ್ಯನ್ ಆಟಗಾರರಿಗೆ ಕಾಡಿದ್ದ ಡೋಪಿಂಗ್ ಈಗ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಗೆ ಅಂಟಿಕೊಂಡಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಾಷ್ಟ್ರೀಯ ಉದ್ದೀಪನ ನಿಗ್ರಹ ದಳ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ವಿವಾದ ಸೃಷ್ಟಿಸಿದ್ದ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಅವರನ್ನು ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ಸಂಸ್ಥೆ (ಸಿಎಎಸ್) ನಾಲ್ಕು ವರ್ಷ ಕ್ರೀಡೆಯಿಂದ ನಿಷೇಧ ಹೇರಿದೆ.

ಇದಕ್ಕೂ ಮುನ್ನ ಯಾದವ್​ ವಿಚಾರಣೆ ನಡೆಸಿ ನಾಡಾ ಅವರಿಗೆ ಕ್ಲೀನ್​ಚೀಟ್​ ನೀಡಿತ್ತು. ಆದರೆ ಅಂತಾರಾಷ್ಟ್ರೀಯ ಉದ್ದೀಪನ ನಿಗ್ರಹ ದಳ(WADA) ನರಸಿಂಗ್​ ಯಾದವ್​ ಅವರ ವಿಚಾರಣೆ ನಡೆಸುವಂತೆ ಮೇಲ್ಮನವಿ ಸಲ್ಲಿಸಿತ್ತು.

Wrestler Narsingh Yadav banned for 4 years, Olympics dream over

ಮೇಲ್ಮನವಿಯನ್ನು ಸುಮಾರು ನಾಲ್ಕು ಗಂಟೆ ವಿಚಾರಣೆ ನಡೆಸಿದ ಸಿಎಎಸ್ ವಿಚಾರಣೆ ಈ ವೇಳೆ ನರಸಿಂಗ್ ಯಾದವ್ ಅವರು ನೀಡಿರುವ ಸಮರ್ಥನೆ ತೀರ್ಪುಗಾರರಿಗೆ ಸರಿ ಕಾಣಿಸಲಿಲ್ಲ. ಇದರಿಂದ ಬ್ರೇಜಿಲ್​ನ ಕೋರ್ಟ್​ ಆಫ್ ಆರ್ಬಿಟ್ರೇಷನ್ ಯಾದವ್ ​ ಅವರಿಗೆ ನಾಲ್ಕು ವರ್ಷ ನಿಷೇಧ ಹೇರಿದೆ.

ಇದರಿಂದ ಯಾದವ್ 4 ವರ್ಷಗಳ ಕಾಲ ಕುಸ್ತಿ ಕ್ರೀಡೆಯಿಂದ ದೂರ ಉಳಿಯಬೇಕಿದೆ. 74 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಭಾರತದ ಏಕೈಕ ಕುಸ್ತಿಪಟು ನರಸಿಂಗ್ ಯಾದವ್ ಇಂದು (ಆ.19 ರಂದು) ಒಲಿಂಪಿಕ್ಸ್​ ನಲ್ಲಿ ಮೊದಲ ಕುಸ್ತಿ ಪಂದ್ಯವನ್ನ ಅಡಬೇಕಿತ್ತು. ಕೋರ್ಟ್​ ಆದೇಶದಿಂದಾಗಿ ಯಾದವ್​ ಒಲಿಂಪಿಕ್ಸ್​ನಿಂದ ಹೊರಬೀಳಲಿದ್ದಾರೆ.

ಕಳೆದ ಜೂನ್ 25ರಂದು ನಾಡಾ ನಡೆಸಿದ ಉದ್ದೀಪನ ಮದ್ದು ತಡೆಯಲ್ಲಿ ನರಸಿಂಗ್ ಯಾದವ್ ರಕ್ತದ ಮಾದರಿಯಲ್ಲಿ ನಿಷೇಧಿತ ಉದ್ದೀಪನ ಮದ್ದಿನ ಅಂಶ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ಅವರನ್ನು ರಿಯೋ ಒಲಿಂಪಿಕ್ಸ್ ನಿಂದ ಕೈ ಬಿಡಲಾಗಿತ್ತು. ಭಾರತದ ಮತ್ತೋರ್ವ ಕುಸ್ತಿ ಸುಶೀಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದ ನರಸಿಂಗ್ ಯಾದವ್ ಪರವಾಗಿ ನ್ಯಾಯಾಲಯ ತೀರ್ಪು ನೀಡಿತ್ತು. ಅಲ್ಲದೆ ನಾಡಾ ಕೂಡ ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಯಾರೋ ಮಾಡಿದ ತಪ್ಪಿಗೆ ನರಸಿಂಗ್ ಈಗ ಬಲಿಯಾಗಿದ್ದಾರೆ.

Story first published: Friday, August 19, 2016, 10:59 [IST]
Other articles published on Aug 19, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ