ಸಂತ್ರಸ್ತ ಕುಟುಂಬವೇ ಬೆಳ್ಳಿ ಪದಕ ಇಟ್ಟುಕೊಳ್ಳಲಿ-ಯೋಗೇಶ್ವರ್ ದತ್

Posted By: ಕ್ರೀಡಾ ಡೆಸ್ಕ್

ನವದೆಹಲಿ ಆ 31: : ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಬೆಳ್ಳಿ ಪದಕ ಗೆದ್ದಿದ್ದ ರಷ್ಯಾದ ಬೆಸಿಕ್ ಕುಡುಖಾವ್ ಅವರ ಪದಕವನ್ನು ಸ್ವೀಕರಿಸಲು ಭಾರತದ ಹೆಮ್ಮೆಯ ಕುಸ್ತಿಪಟು ಯೋಗೇಶ್ವರ್ ದತ್ ನಿರಾಕರಿಸಿದ್ದಾರೆ. 2012ರ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ 60 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಕಂಚು ಪದಕ ಗೆದ್ದಿದ್ದ ಯೋಗೇಶ್ವರ್ ದತ್ ಅವರ ಕಂಚಿನ ಪದಕ ಬೆಳ್ಳಿ ಪದಕಕ್ಕೆ ಬಡ್ತಿ ಪಡೆದಿತ್ತು.

ಬೆಳ್ಳಿ ಪದಕ ವಿಜೇತ ರಷ್ಯಾದ ಕುಸ್ತಿಪಟು ಬೆಸಿಕ್ ಕುಡುಖಾವ್ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರಿಂದ ಅವರ ಬೆಳ್ಳಿ ಪದಕವನ್ನು ಯೋಗೇಶ್ವರ್ ದತ್ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಆದರೆ ಆ ಬೆಳ್ಳಿ ಪದಕವನ್ನು ಸ್ವೀಕರಿಸಲು ಯೋಗೇಶ್ವರ್ ದತ್ ನಿರಾಕರಿಸಿದ್ದಾರೆ.

Yogeshwar refuses to take London silver medal, wants deceased wrestler’s family to keep it

ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ದತ್, ಒಬ್ಬ ಅಥ್ಲೆಟ್ ಆಗಿ ಮತ್ತೊಬ್ಬ ಅಥ್ಲೆಟ್ ನನ್ನು ಗೌರವಿಸುವುದು ನನ್ನ ಕರ್ತವ್ಯ ಹೀಗಾಗಿ ನಾನು ಪದಕ ಸ್ವೀಕರಿಸುದಿಲ್ಲವೆಂದು ಹೇಳಿದ್ದಾರೆ. ಆ ಬೆಳ್ಳಿ ಪದಕವನ್ನು ಬೆಸಿಕ್ ಕುಡುಖಾವ್ ಅವರ ಕುಟುಂಬಸ್ಥರೇ ಇಟ್ಟುಕೊಳ್ಳಲಿ ಎಂದು ಯೋಗೇಶ್ವರ್ ದತ್ ಟ್ವೀಟ್ ಮಾಡಿದ್ದಾರೆ.

ನಾಲ್ಕು ಬಾರಿ ವಿಶ್ವ ಚಾಂಪಿಯನ್ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಕುಡುಖಾವ್ ಅವರು 2013ರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು, 2012ರ ಕ್ರೀಡಾಕೂಟದ ಬಳಿಕ ಸ್ಯಾಂಪಲ್ ಪಡೆದುಕೊಳ್ಳಲಾಗಿತ್ತು.

Story first published: Wednesday, August 31, 2016, 16:06 [IST]
Other articles published on Aug 31, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ