ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ಗೆ ತೆರಳಿದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ಆಘಾತ ಉಂಟಾಗಿದೆ. ಮೂವರು ಆಟಗಾರರು ಹಾಗೂ ಓರ್ವ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಭಾರತೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಮಥಿಯಸ್ ಬೋಯಿ ಪ್ರಶ್ನೆಯನ್ನು ಮಾಡಿದ್ದಾರೆ.
"ನಮ್ಮ ತಂಡದ 3 ಆಟಗಾರರು ಹಾಗೂ ಓರ್ವ ಬೆಂಬಲ ಸಿಬ್ಬಂದಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಎರಡು ವಾರಗಳ ಹಿಂದೆ ಸ್ವಿಸ್ ಓಪನ್ ಪ್ರಾರಂಭವಾದಾಗಿನಿಂದ ನಾವು ಜುರಿಚ್‌ನಲ್ಲಿ ಪ್ರತ್ಯೇಕವಾಗಿದ್ದೇವೆ. ಇದರ ಹೊರತಾಗಿಯೂ ಇದು ಹೇಗೆ ಸಂಭವಿಸಬಹುದು ಎಂಬುದು ಪ್ರಶ್ನೆಯಾಗಿದ್ದು ಸಂಪೂರ್ಣವಾಗಿ ಅಸಂಬದ್ಧವೆಂದು ನಾನು ಭಾವಿಸುತ್ತೇನೆ" ಎಂದು ಕೋಚ್ ಮಥಿಯಸ್ ಬೋಯಿ ಪ್ರತಿಕ್ರಿಯಿಸಿದ್ದಾರೆ.
ಇಂಗ್ಲೆಂಡ್ ಓಪನ್ನಿಂದ ಹಿಂದೆ ಸರಿದ ಕರೋಲಿನಾ ಮರಿನ್: ಲಾಭ ಪಡೆಯಲು ಪಿವಿ ಸಿಂಧು ಸಜ್ಜು
"14 ದಿನಗಳಲ್ಲಿ ನಾವು 5 ಬಾರಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದೇವೆ. ಎಲ್ಲಾ ಪರೀಕ್ಷೆಗಳಲ್ಲೂ ನೆಗೆಟಿವ್ ವರದಿಯಾಗಿದೆ. ಆದರೆ ಇದ್ದಕ್ಕಿದ್ದಂತೆ ಅವರು ಕೊರೊನಾ ವೈರಸ್ ಪಾಸಿಟಿವ್ ಹೇಗೆ ಬರಲು ಸಾಧ್ಯವಿದೆ?" ಎಂದು ಡೆನ್ಮಾರ್ಕ್ ಮೂಲದ ಮಾಜಿ ಬ್ಯಾಡ್ಮಿಂಟನ್ ಪಟು ಭಾರತೀಯ ತಂಡದ ಕೋಚ್ ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಈ ಪ್ರತಿಷ್ಟಿತ ಟೂರ್ನಿಯಲ್ಲಿ 3 ದೇಶಗಳ 7 ಆಟಗಾರರಿಗೆ ಕೊರೊನಾ ವೈರಸ್ ಪಾಸಿಟಿವ್ ವರದಿ ಬಂದಿದೆ. ಹಿಗಾಗಿ ಟೂರ್ನಿಯ ಆರಂಭವನ್ನು 5 ಗಂಟೆ ತಡವಾಗಿ ಆರಂಭವಾಗಿದೆ. ಆದರೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(BWF) ಬುಧವಾರ ಈ ಪರೀಕ್ಷಾ ಫಲಿತಾಂಶಗಳನ್ನು 'ಅನಿರ್ದಿಷ್ಟ' ಎಂದು ಪರಿಗಣಿಸಲಾಗಿದೆ. ಹೀಗಾಗಿ ಫಲಿತಾಂಶಕ್ಕಾಗಿ ಮಾದರಿಗಳನ್ನು ಮರು ಸಂಗ್ರಹಿಸಲಾಗುತ್ತದೆ ಎಂದಿದೆ.
ಇನ್ನು ಈ ಕೊರೊನಾ ಪರೀಕ್ಷಾ ಫಲಿತಾಂಶದ ಬಗ್ಗೆ ಹಾಗೂ ವ್ಯವಸ್ಥೆಗಳ ಬಗ್ಗೆ ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಪರುಪ್ಪಲ್ಲಿ ಕಶ್ಯಪ್, ಸೈನಾ ನೆಹ್ವಾಲ್ ಟ್ವಿಟ್ಟರ್‌ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.