ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್: ಸೈನಾ, ಪ್ರಣಯ್ ಗೆ ಸೋಲು

Posted By: Sadashiva
Badminton Asia Championships: Saina, Prannoy Crash Out in Semis

ವುಹಾನ್ (ಚೀನಾ), ಏ. 28: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಉದಯೋನ್ಮುಖ ಆಟಗಾರ ಎಚ್‌ಎಸ್ ಪ್ರಣಯ್ ಚೀನಾದ ವುಹಾನ್‌ನಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನ ಸೆಮಿಫೈನಲ್ ನಲ್ಲಿ ಸೋತಿದ್ದಾರೆ. ಇದರೊಂದಿಗೆ ಈ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಈ ತಿಂಗಳಾರಂಭದಲ್ಲಿ ಗೋಲ್ಡ್‌ ಕೋಸ್ಟ್ ಕಾಮನ್ ವೆಲ್ತ್ ಗೇಮ್ಸ್ ನ ವನಿತಾ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದ ಸೈನಾ, ಶನಿವಾರ ನಡೆದ ವನಿತಾ ಸಿಂಗಲ್ಸ್ನಲ್ಲಿ ವಲ್ಡ್ ನಂ. 2 ಆಟಗಾರ್ತಿ ಚೈನೀಸ್ ತೈಪೆಯ ತೈ ಝ ಯಿಂಗ್ ಎದುರು 25-27, 19-17ರ ಅಂತರದಿಂದ ಸೋತು ಶರಣಾದರು. ಆದರೆ ಭಾರತದ ಬಲಾಡ್ಯೆ ಸೈನಾ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದ್ದು ಎಲ್ಲರ ಗಮನ ಸೆಳೆಯಿತು.

ಪುರುಷರ ಸಿಂಗಲ್ಸ್ ನಲ್ಲಿ 10ನೇ ಶ್ರೇಯಾಂಕಿತ ಪ್ರಣಯ್, ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ವಿರುದ್ಧ 25-27, 19-21ರ ಅಂತರದಿಂದ ಸೋಲೊಪ್ಪಿಕೊಂಡರು. ಇಬ್ಬರ ನಡುವೆ 52 ನಿಮಿಷಗಳ ಕಾದಾಟ ನಡೆಯಿತು.

ನೆನ್ನೆಯ ಕ್ವಾಟರ್ ಫೈನಲ್‌ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಸಿಂಧು ಮತ್ತು ವಿಶ್ವ ನಂ. 1 ಆಟಗಾರ ಕಿದಂಬಿ ಶ್ರೀಕಾಂತ್‌ ಇಬ್ಬರೂ ಹೊರ ನಡೆದಿದ್ದರಿಂದ ಸೈನಾ ಮತ್ತು ಪ್ರಣಯ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿತ್ತು. ಆದರೆ ಇಂದಿನ ಪಂದ್ಯ ನಿರೀಕ್ಷೆಯನ್ನು ಸುಳ್ಳಾಗಿಸಿದೆ.

Story first published: Saturday, April 28, 2018, 18:24 [IST]
Other articles published on Apr 28, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ