ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಬಿಎಲ್‌ 2018: ಕೌಶಲಕ್ಕನುಗುಣವಾಗಿ ಹರಾಜಿನಲ್ಲಿ 150 ಆಟಗಾರರ ಆಯ್ಕೆ

IBL 2018: Teams pick up players in a gala auction

ಬೆಂಗಳೂರು, ನವೆಂಬರ್ 13: ಇಂದಿರಾನಗರ್ ಕ್ಲಬ್ ಬ್ಯಾಡ್ಮಿಂಟನ್ ಲೀಗ್‌ (ಐಬಿಎಲ್ 2018) ಟೂರ್ನಿಗಾಗಿ ಬೆಂಗಳೂರಿನಲ್ಲಿ ನಡೆದ ಹರಾಜುನಲ್ಲಿ ಒಟ್ಟು 150 ಆಟಗಾರರನ್ನು ಆಯ್ಕೆ ಮಾಡಲಾಯಿತು. ಆಟಗಾರರ ಕೌಶಲಕ್ಕನುಗುಣವಾಗಿ ಆಯ್ಕೆ ನಡೆಯಿತು.

ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!

ಐದು ತಂಡಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು. 7.5 ಕೋಟಿ ರೂ. ವೆಚ್ಚದಲ್ಲಿ ಪ್ರತೀ ತಂಡ ತಲಾ 30 ಆಟಗಾರರನ್ನು ತಮ್ಮ ಬಣಕ್ಕೆ ಸೇಪರ್ಡೆಗೊಳಿಸಿಕೊಂಡವು. ಆಟಗಾರರನ್ನು ಅವರವರ ಕೌಶಲಕ್ಕನುಗುಣವಾಗಿ ಒಟ್ಟು 9 ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು.

ದ್ವಿತೀಯ ಆವೃತ್ತಿಗಾಗಿ ಭಾನುವಾರ (ನವೆಂಬರ್ 11) ನಡೆದ ಹರಾಜಿನಲ್ಲಿ 10ರ ಹರೆಯದ ಅತೀ ಕಿರಿಯ ಆಟಗಾರರಿಂದ ಹಿಡಿದು ಸುಮಾರು 70ರ ಹರೆಯದ ಹಿರಿಯ ಆಟಗಾರರೂ ಮಾರಾಟವಾಗಿದ್ದು ವಿಶೇಷವೆನಿಸಿತು. ಸುಮಾರು 5 ಗಂಟೆಗಳ ಕಾಲ ಹರಾಜು ಪ್ರಕ್ರಿಯೆ ನಡೆಯಿತು.

ಕಾಲು ಮುರಿದಾಗ ಅಂಬೆಗಾಲಲ್ಲೇ ಓಡಿದ ಕ್ರೀಡಾಪಟು: ಮನಮಿಡಿಯುವ ವಿಡಿಯೋಕಾಲು ಮುರಿದಾಗ ಅಂಬೆಗಾಲಲ್ಲೇ ಓಡಿದ ಕ್ರೀಡಾಪಟು: ಮನಮಿಡಿಯುವ ವಿಡಿಯೋ

ಕಳೆದ 2017ರಲ್ಲಿ ಮೊದಲ ಆವೃತ್ತಿ ನಡೆದಿತ್ತು. ಈ ವೇಳೆ 116 ಆಟಗಾರರು ಟೂರ್ನಿಯಲ್ಲಿ ಆಡಿದ್ದರು. ಆದರೆ ಈ ಬಾರಿ ಆಟಗಾರರ ಸಂಖ್ಯೆ 150ಕ್ಕೆ ಏರಿದೆ. ಈ 150ರಲ್ಲಿ 33 ಮಂದಿ ಮಹಿಳಾ ಆಟಗಾರರು ಮತ್ತು 21 ಮಂದಿ ಕಿರಿಯ ಆಟಗಾರರು ಸೇರಿದ್ದಾರೆ. ನವೆಂಬರ್ 30ರಂದು ಆರಂಭಗೊಳ್ಳುವ ಈ ಕ್ರೀಡಾ ಹಬ್ಬ ಡಿಸೆಂಬರ್ 8ರಂದು ಕೊನೆಗೊಳ್ಳಲಿದೆ.

Story first published: Tuesday, November 13, 2018, 18:57 [IST]
Other articles published on Nov 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X