ಬ್ಯಾಡ್ಮಿಂಟನ್: ಸ್ವೀಡಿಶ್ 2018 ಟೂರ್ನಿ ಜಯಿಸಿದ ಸಿದ್ದಾರ್ಥ್‌

Posted By:
India's Siddharth Pratap Singh won Swedish Open 2018 Badminton championship

ಬೆಂಗಳೂರು, ಜನವರಿ 22: ಬ್ಯಾಡ್‌ಮಿಂಟನ್‌ನಲ್ಲಿ ಭಾರತದ ಮತ್ತೊಂದು ಪ್ರತಿಭೆಯ ಉದಯವಾಗಿದೆ, ಬ್ಯಾಡ್ಮಿಂಟನ್ ಆಟಗಾರ ಸಿದ್ದಾರ್ಥ ಪ್ರತಾಪ್ ಸಿಂಗ್ ಸ್ವೀಡಿಶ್ ಓಪನ್ 2018 ಟೂರ್ನಿಯಲ್ಲಿ ವಿಜಯ ಸಾಧಿಸಿ ಇತಿಹಾಸ ಬರೆದಿದ್ದಾರೆ.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ಮ್ಯಾಡ್ ಕ್ರಿಸ್ಟೋಫರ್‌ಸೆನ್ ಅವರನ್ನು 21-15, 21-11 ನೇರ ಸೆಟ್‌ಗಳಿಂದ ಸೋಲಿಸಿ ಸ್ವೀಡಿಶ್ ಓಪನ್ ಟೂರ್ನಿಯ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಕಳೆದ ವರ್ಷದಿಂದ ತಮ್ಮ ranking ಅನ್ನು ಉತ್ತಮ ಪಡಿಸಿಕೊಳ್ಳುತ್ತಲೇ ಬರುತ್ತಿರುವ ಸಿದ್ದಾರ್ಥ್ ಅವರು ಭವಿಷ್ಯದ ಭಾರತದ ಬ್ಯಾಡ್‌ಮಿಂಟನ್ ತಾರೆ ಎನ್ನಲಾಗುತ್ತಿದೆ, ಪ್ರಸ್ತುತ ಅವರ ಅಂತರರಾಷ್ಟ್ರೀಯ ranking 211 ಇದೆ.

ಕಳೆದ ವರ್ಷದ ಟಾಟಾ ಓಪನ್ ಕ್ರೀಡಾವಳಿಯಲ್ಲಿ ಕೂಡ ಸಿದ್ದಾರ್ಥ್ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಕೆಲವು ಖ್ಯಾತ ಬ್ಯಾಡ್‌ಮಿಂಟನ್ ಆಟಗಾರರನ್ನು ಎದುರಿಸಿದ ಅವರು ಕಠಿಣ ಪೈಪೋಟಿ ನೀಡಿದ್ದರು.

Story first published: Monday, January 22, 2018, 15:26 [IST]
Other articles published on Jan 22, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ