ಬ್ಯಾಡ್‌ಮಿಂಟನ್: ಭಾರತದ ಕಿದಂಬಿ ಶ್ರೀಕಾಂತ್‌ಗೆ ವಿಶ್ವ ನಂ.1 ಪಟ್ಟ

Posted By:
Kidambi Srikanth become world no.1 in Badminton

ಭಾರತದ ಸ್ಟಾರ್ ಬ್ಯಾಡ್‌ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ವಿಶ್ವ ಬ್ಯಾಡ್‌ಮಿಂಟನ್ ರ್ಯಾಂಕಿಂಗ್‌ನಲ್ಲಿ ವಿಶ್ವ ನಂ1 ಸ್ಥಾನಕ್ಕೆ ಏರಿದ್ದಾರೆ.

ಬ್ಯಾಡ್‌ಮಿಂಟನ್‌ನಲ್ಲಿ ವಿಶ್ವ ನಂ1 ಪಟ್ಟಕ್ಕೇರುತ್ತಿರುವ ಮೊದಲ ಭಾರತೀಯ ಪುರುಷ ಆಟಗಾರ ಶ್ರೀಕಾಂತ್ ಆಗಿದ್ದು, ಅವರು ಕಳೆದ ವರ್ಷದ ನವೆಂಬರ್‌ನಿಂದಲೂ ವಿಶ್ವ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದ್ದರು.

ವಿಶ್ವ ನಂ1 ಸ್ಥಾನದಲ್ಲಿದ್ದ ಡೆನ್ಮಾರ್ಕ್‌ನ ವಿಕ್ಟರ್‌ ಅಲೆಕ್ಸೆನ್ ಅವರು ಮಲೇಷ್ಯಾ ಓಪನ್ ಚಾಲೆಂಜ್ ಅನ್ನು ಸೋತ ಕಾರಣ ಅವರು 1600 ಪಾಯಿಂಟ್ ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 76,895 ಪಾಯಿಂಟ್ ಪಡೆದು ನಂ.1 ಸ್ಥಾನಕ್ಕೆ ಏರಿದ್ದಾರೆ.

ಈ ಮುಂಚೆ ಭಾರತ ಸೈನಾ ನೆಹ್ವಾಲ್ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ ನಂ1 ಸ್ಥಾನಕ್ಕೆ ಏರಿದ್ದರು. ಪುರುಷರ ವಿಭಾಗದಲ್ಲಿ ಈ ವರೆಗೂ ಯಾರೂ ಸಹ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ 1 ಸ್ಥಾನಕ್ಕೆ ಏರಿಯೇ ಇರಲಿಲ್ಲ.

ಪ್ರಸ್ತುತ ಕಾಮನ್‌ವೆಲ್ತ್‌ನಲ್ಲಿ ಆಡುತ್ತಿರುವ ಶ್ರೀಕಾಂತ್ ಅವರು ಈಗಾಗಲೇ ಮಿಕ್ಸ್‌ಡ್ ಟೀಮ್ ವಿಭಾಗದಲ್ಲಿ ಆಡಿ ಭಾರತಕ್ಕೆ ಚಿನ್ನ ಗೆದ್ದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ಮಿಕ್ಸಡ್ ಡಬಲ್ಸ್ ಮತ್ತು ಡಬಲ್ಸ್‌ ವಿಭಾಗದಲ್ಲಿ ಚಿನ್ನ ಗೆಲ್ಲುವುದು ಬಾಕಿ ಇದೆ.

ಶ್ರೀಕಾಂತ್ ಅವರ ಸಾಧನೆ ಬಗ್ಗೆ ಖುಷಿ ಆಗಿರುವ ಕೋಚ್ ಪುಲೆಲ ಗೋಪಿಚಂದ ಅವರು, ಶ್ರೀಕಾಂತ್ ಅವರ ಸಾಧನೆ ಅವರ ಆಟಕ್ಕೆ ಹೆಚ್ಚಿನ ಮೊನಚು ಒದಗಿಸಲಿದೆ ಎಂದಿದ್ದಾರೆ. ಗೋಪಿಚಂದ ಅವರ ಅಕಾಡೆಮಿಯಲ್ಲಿ ಕಲಿತಿರುವ ಶ್ರೀಕಾಂತ್‌ ಅವರು ನಂ.1 ಎನಿಸಿಕೊಂಡಿರುವುದು ಸಹಜವಾಗಿಯೇ ಗೋಪಿಚಂದ್‌ಗೆ ಆನಂದ ಉಂಟುಮಾಡಿದೆ. ಮಹಿಳೆಯರ ವಿಭಾಗದಲ್ಲಿ ನಂ.1 ಆಗಿದ್ದ ಸೈನಾ ಕೂಡಾ ಗೋಪಿಚಂದ್ ಅಕಾಡೆಮಿಯಲ್ಲೇ ತರಬೇರಿ ಪಡೆದಿದ್ದರು.

Story first published: Thursday, April 12, 2018, 13:36 [IST]
Other articles published on Apr 12, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ