ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Malaysia Open: ಸ್ಪೈನ್‌ನ ಕ್ಯಾರೊಲಿನಾ ಮರಿನ್ ವಿರುದ್ಧ ಸೋತು ನಿರ್ಗಮಿಸಿದ ಪಿವಿ ಸಿಂಧು

Malaysia Open 2023: PV Sindhu loses to Spains Carolina Marin and knocked out of tourney

ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಮಲೇಷ್ಯಾ ಓಪನ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ರೌಂಡ್ ಆಫ್ 32ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಸವಾಲು ಎದುರಿಸಿದ ಸಿಂಧು ಸೋಲು ಅನುಭವಿಸಿ ಮಲೇಷ್ಯಾ ಓಪನ್‌ನಿಂದ ಹೊರಬಿದ್ದಿದ್ದಾರೆ. 27ರ ಹರೆಯದ ಭಾರತದ ಸ್ಟಾರ್ ಆಟಗಾರ್ತಿ ಕೌಲಾಲಂಪುರದಲ್ಲಿ ತನ್ನ ಬಹುಕಾಲದ ಪ್ರತಿಸ್ಪರ್ಧಿ ವಿರುದ್ಧ 12-21, 21-10, 15-21 ಅಂತರದಲ್ಲಿ ಸೋಲು ಕಂಡಿದ್ದಾರೆ.

ಸ್ಪಾನಿಶ್ ಆಟಗಾರ್ತಿ ಪಿವಿ ಸಿಂಧು ವಿರುದ್ಧ ಆರಂಭದಿಂದಲೇ ಮೇಲುಗೈ ಸಾಧಿಸುತ್ತಾ ಸಾಗಿದ್ದರು. ಈ ಮೂಲಕ ಮೊದಲ ಸುತ್ತಿನಲ್ಲೇ ಸಿಂದು ಅವರನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾದರು. ಮೊದಲ ಸುತ್ತಿನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಮರಿನ್ 21-12 ಅಂತರದಿಂದ ಗೆದ್ದುಕೊಂಡರು. ಆದರೆ ಎರಡನೇ ಸುತ್ತಿನಲ್ಲಿ ತಿರುಗಿಬಿದ್ದ ಭಾರತೀಯ ಆಟಗಾರ್ತಿ ಅದ್ಭುತ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು. 2ನೇ ಸುತ್ತನ್ನು ಪಿವಿ ಸಿಂಧು 21-10 ಅಂತರದಿಂದ ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್

ಇನ್ನು ಅಂತಿಮ ಸೆಟ್‌ನಲ್ಲಿ ಕ್ಯಾರೊಲಿನಾ ಮರೀನ್ ಅದ್ಭುತ ಆರಂಬ ಪಡೆಯುವಲ್ಲಿ ಯಶಸ್ವಿಯಾದರು. ಆರಂಬಿಕ ಅಂಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಮತ್ತೆ ಸಿಂಧು ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಬಳಿಕ ಒಂದು ಹಂತದಲ್ಲಿ ಸಿಂಧು ಅಧ್ಭುತ ಪ್ರತಿರೋಧವೊಡ್ಡುವ ಮೂಲಕ 7-9 ಹಂತಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ಆದರೆ ಬಳಿಕ ಮರಿನ್ ತಮ್ಮ ವೇಗವನ್ನು ಹೆಚ್ಚಿಸಿಕೊಂಡು ಕೆಲ ಅಂಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಳ್ಳುವ ಮೂಲಕ 18-12 ಅಂತರದ ಮೇಲುಗೈ ಸಾಧಿಸಿದರು. ಬಳಿಕ ಪಂದ್ಯವನ್ನು ಮರಳಿ ಪಡೆಯಲು ಸಿಂಧು ಪ್ರಯತ್ನ ನಡೆಸಿದರಾದರೂ ಅಂತಿಮವಾಗಿ 21-15 ಅಂತರದಿಂದ ಸೆಟ್ ಕಳೆದುಕೊಂಡರು. ಈ ಮೂಲಕ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

IND vs SL: 45ನೇ ಏಕದಿನ ಶತಕ ಗಳಿಸಿ ದಾಖಲೆ ಮೇಲೆ ದಾಖಲೆ ಬರೆದ ವಿರಾಟ್ ಕೊಹ್ಲಿIND vs SL: 45ನೇ ಏಕದಿನ ಶತಕ ಗಳಿಸಿ ದಾಖಲೆ ಮೇಲೆ ದಾಖಲೆ ಬರೆದ ವಿರಾಟ್ ಕೊಹ್ಲಿ

ತಮ್ಮ ಇತ್ತೀಚಿನ ಮುಖಾಮುಖಿಗಳಲ್ಲಿ ಸ್ಪೇನ್ ಆಟಗಾರ್ತಿ ಸಿಂಧು ವಿರುದ್ಧ ಮೇಲುಗೈ ಸಾಧಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಮರಿನ್ ಈ ಪಂದ್ಯಕ್ಕೂಹಿಂದಿನ ಮೂರು ಸಂದರ್ಭಗಳಲ್ಲಿ ಹೈದರಾಬಾದ್ ಮೂಲದ ಶಟ್ಲರ್ ವಿರುದ್ಧ ಮರಿನ್ ಗೆಲುವು ಸಾಧಿಸಿದ್ದಾರೆ. ಒಟ್ಟಾರೆಯಾಗಿ ಈ ಇಬ್ಬರ ನಡುವಿನ ಹೆಡ್ ಟು ಹೆಡ್ ಮುಖಾಮುಖಿಯಲ್ಲಿ ಸ್ಪೈನ್‌ನ ಆಟಗಾರ್ತಿ 10-5 ರಿಂದ ಮುನ್ನಡೆಯಲ್ಲಿದ್ದಾರೆ.

ಇನ್ನು ಮಲೇಷ್ಯಾ ಓಪನ್‌ಗಿಂತ ಮುನ್ನ ಕಳೆದ ಆಗಸ್ಟ್‌ನಲ್ಲಿ ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಿಂಧು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಅಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಆದರೆ ಅದಾದ ಬಳಿಕ ಸಿಂಧು ಮಂಡಿರಜ್ಜು ಗಾಯಕ್ಕೆ ತುತ್ತಾದ ಕಾರಣ 2022ರಲ್ಲಿ ಉಳಿದ ಎಲ್ಲಾ ಪಂದ್ಯಾವಳಿಗಳಿಂದ ಹೊರಗುಳಿಯಬೇಕಾಯಿತು.

Story first published: Wednesday, January 11, 2023, 15:54 [IST]
Other articles published on Jan 11, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X