ವಿಮಾನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಕಿರುಕುಳ

Posted By:

ಬೆಂಗಳೂರು. ನವೆಂಬರ್ 04 : ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಒಲಿಂಪಿಕ್ಸ್ ಬೆಳ್ಳಿ ತಾರೆ ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಅವರಿಗೆ ಕಿರುಕುಳ ನೀಡಿರುವ ಘಟನೆ ನಡೆದಿದೆ. ಬಗ್ಗೆ ಸಿಂಧು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಇಂದು (ನವೆಂಬರ್ 04) 6E 608ನ ಇಂಡಿಗೋ ಏರ್ ಲೈನ್ಸ್ ನಲ್ಲಿ ಪಿವಿ ಸಿಂಧು ಅವರು ಬಾಂಬೆಗೆ ತೆರಳುತ್ತಿದ್ದಾಗ ವಿಮಾನದ ಸಿಬ್ಬಂದಿ ಅಜಿತೇಶ್ ಎನ್ನುವಾತ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಸಿಂಧು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PV Sindhu gets ANGRY at Indigo Airlines ground staff's 'rude' behaviour in Mumbai

ಸಿಂಧು ಜತೆ ವಿಮಾನದ ಗ್ರೌಂಡ್ ಸ್ಟಾಫ್ ಅಜಿತೇಶ್ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಅದೇ ವಿಮಾನದ ಗಗನಸಖಿ ಅಶಿಮಾ ಪ್ರಯಾಣಿಕರೊಂದಿಗೆ ಇಂತಹ ವರ್ತನೆ ಸಲ್ಲದು ಎಂದಿದ್ದಾರೆ. ಆಗ ಅಜಿತೇಶ್ ಆಕೆಯ ವಿರುದ್ದವೂ ತಿರುಗಿ ಬಿದ್ದಿದ್ದಾನೆ.

ತಮಗಾದ ಕಹಿ ಅನುಭವವನ್ನು ಪಿ.ವಿ. ಸಿಂಧು ಸರಣಿ ಟ್ವೀಟ್ ಗಳ ಮೂಲಕ ಹಂಚಿಕೊಂಡಿದ್ದು, ವಿಮಾನ ಸಿಬ್ಬಂದಿ ತೋರಿದ ದುರ್ವರ್ತನೆಗೆ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಿ.ವಿ. ಸಿಂಧು ಅವರ ಕ್ಷಮೆ ಯಾಚಿಸಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Story first published: Saturday, November 4, 2017, 14:02 [IST]
Other articles published on Nov 4, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ