ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬ್ಯಾಡ್ಮಿಂಟನ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 4-1ರ ಜಯ

Saina Powers India to 4-1 Win Over Australia in Uber Cup

ಬ್ಯಾಂಕಾಕ್, ಮೇ 21: ಸೈನಾ ನೆಹ್ವಾಲ್ ನೇತೃತ್ವದ ಭಾರತದ ವನಿತಾ ಬ್ಯಾಡ್ಮಿಂಟನ್ ತಂಡ ಸೋಮವಾರ ನಡೆದ ಉಬೆರ್ ಕಪ್ ಫೈನಲ್ ನ ಎರಡನೇ ಗ್ರೂಪ್ ಎ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದ ಗೆಲುವು ದಾಖಲಿಸಿದೆ.

ಆರಂಭಿಕ ಪಂದ್ಯದಲ್ಲಿ ಕೆನಡಾದೆದುರು 1-4 ಅಂತರದಿಂದ ಸೋತಿದ್ದ ತಂಡ ಗ್ರೂಪ್ ಎ ಎರಡನೇ ಪಂದ್ಯದಲ್ಲಿ ವನಿತಾ ಡಬಲ್ಸ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಗೆದ್ದು ಬೀಗಿದೆ.

ವನಿತಾ ಸಿಂಗಲ್ಸ್ ನಲ್ಲಿ ವಿಶ್ವ ನಂ. 10 ಆಟಗಾರ್ತಿ ಸೈನಾ ಹುಸುನ್-ಯು ವೆಂಡಿ ಚೆನ್ ವಿರುದ್ಧ 21-14, 21-19ರ ಗೆಲುವು ದಾಖಲಿಸಿದರು. ಎರಡನೇ ಗ್ರೂಪ್ ಎ ಆರಂಭಿಕ ಪಂದ್ಯದಲ್ಲಿ 35ನೇ ನಿಮಿಷದಲ್ಲಿ ಸೈನಾ ಎದುರಾಳಿ ವಿರುದ್ಧ ಗೆಲುವು ಸಾಧಿಸಿದ್ದು ಭಾರತಕ್ಕೆ 1-0 ಅಂತರದ ಮುನ್ನಡೆ ಸಾಧಿಸಲು ನೆರವು ನೀಡಿತು.

ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್ ರಾಮ್ ಜೋಡಿ ಆಸ್ಟ್ರೇಲಿಯಾದ ಗ್ರೊನಿಯಾ ಸೊಮರ್ವಿಲ್ಲೆ ಮತ್ತು ರೇಣುಗ ವೀರನ್ ಜೋಡಿಯ ವಿರುದ್ಧ 13-21, 16-21 ಅಂತರದಲ್ಲಿ ಸೋತಿತು.

16ರ ವಯೋಮಾನದ ವೈಷ್ಣವಿ ರೆಡ್ಡಿ ಅವರು ಜೆನಿಫರ್ ಟಾಮ್ ವಿರುದ್ಧ 21-17, 21-13 ಅಂತರದ ಗೆಲುವು ಸಾಧಿಸಿ ತಂಡಕ್ಕೆ ಮುನ್ನಡೆ ನೀಡಿದರು.

ಮತ್ತೊಂದು ಪಂದ್ಯದಲ್ಲಿ ಸಂಯೋಗಿತಾ ಮತ್ತು ಪ್ರಜಕ್ತಾ ಸಾವಂತ್ ಜೋಡಿ ಯೂಸಿಯಾ ಮಾ ಮತ್ತು ಆನ್ ಲೂಯಿಸೆ ಸ್ಲೀ ವಿರುದ್ಧ 21-19, 21-11ರ ಗೆಲುವು ಸಾಧಿಸಿ ಸಂಭ್ರಮಿಸಿತು.

19ರ ವಯೋಮಾನದ ಗೋವಾ ಆಟಗಾರ್ತಿ ಅನುರಾ ಪ್ರಭು ದೇಸಾಯಿ ಅವರು ಜೆಸಿಲಿ ಫಂಗ್ ಅವರನ್ನು 21-16, 21-7ರ ಅಂತರದಿಂದ ಹಿಮ್ಮೆಟ್ಟಿಸಿ ಭಾರತಕ್ಕೆ 4-1ರ ಮುನ್ನಡೆ ತಂದುಕೊಟ್ಟರು.

Story first published: Monday, May 21, 2018, 22:00 [IST]
Other articles published on May 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X